- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಗೋಳಗುಮ್ಮಟ ಆವರಣದಲ್ಲಿ ಯೋಗ ಸಂಭ್ರಮ

ಗೋಳಗುಮ್ಮಟ ಆವರಣದಲ್ಲಿ ಯೋಗ ಸಂಭ್ರಮ

ವಿಜಯಪುರ: ೮ನೇ ಅಂತಾರಾಷ್ಟ್ರೀಯ (Yoga Day) ಯೋಗ ದಿನಾಚರಣೆ ಹಿನ್ನೆಲೆಯಲ್ಲಿ ಜಾಗತಿಕ ಪ್ರಸಿದ್ಧ ಗೋಲ ಗುಂಬಜ್ (Gol Gumbaz) ಆವರಣದಲ್ಲಿ (Vijayapura) ಜೂನ್ ೨೧ ರಂದು ಅಕ್ಷರಶಃ ಹಬ್ಬದ ಸಂಭ್ರಮ ಕಂಡು ಬಂದಿತು.

ಪ್ರಧಾನ ಕೊಠಡಿಯಲ್ಲಿ ಪ್ರತಿ ಶಬ್ದವೂ ಏಳು ಬಾರಿ ಪ್ರತಿಧ್ವನಿಸುತ್ತದೆ ಎನ್ನುವ ವಿಶೇಷ ಆಕರ್ಷಣೆಯ ಗೋಲಗುಂಬಜ ಅಂಗಳದಲ್ಲಿ ನಡೆದ ಯೋಗಸಾನವು ಸಹ ಅಷ್ಟೇ ಆಕರ್ಷಣೀಯವಾಗಿತ್ತು. ಸುತ್ತ ಎತ್ತೆತ್ತಲೂ ಯೋಗದ ಧ್ಯಾನವೇ ಕಾಣಿಸಿತು. 

ಪ್ರತಿನಿತ್ಯ ಸಾವಿರಾರು ಸಂಖ್ಯೆಯ ಪ್ರವಾಸಿಗರು ಸುತ್ತಲಿರುವ ಈ ಐತಿಹಾಸಿಕ ಸ್ಮಾರಕದಲ್ಲಿ ಚುಮುಚುಮು ಸೂರ್ಯೋದಯದ ಮುಂಚೆಯೇ ಸೇರಿ ಬರೋಬ್ಬರಿ ಗಂಟೆಗೂ ಹೆಚ್ಚು ಕಾಲ ಯೋಗಸಾನದಲ್ಲಿ ಭಾಗಿಯಾದ ಯೋಗಪಟುಗಳು ಕಣ್ಣು ಹಾಯಿಸಿದೆಲ್ಲಡೆ ಕಂಡು ಬಂದು ಗುಂಬಜ್ (Gol Gumbaz) ಅಂಗಳದಲ್ಲಿ ಮತ್ತೊಂದು ಇತಿಹಾಸವನ್ನು ನಿರ್ಮಿಸಿದರು.

Gol Gumbaz Yoga Day 2022
Gol Gumbaz Yoga Day 2022

ವಿದ್ಯಾರ್ಥಿಗಳು, ಯುವಕರು, ಎನ್ಸಿಸಿ, ಎನ್ನೆಸೆಸ್, ನೌಕರರು, ಮಹಿಳೆಯರು, ವೃದ್ಧರು ಸೇರಿದಂತೆ ಇನ್ನೀತರರು ಸರ್ಕಾರಿ ಮತ್ತು ಖಾಸಗಿ ಬಸ್‌ಗಳ ಮೂಲಕ ಬೆಳಗ್ಗೆ ಗೋಲಗುಂಬಜ್‌ಗೆ ಆಗಮಿಸಿ ಯೋಗ ಕಾರ್ಯಕ್ರಮದಲ್ಲಿ ಭಾಗಿಯಾದರು.

ಆಯುಷ್ ಮಂತ್ರಾಲಯ ನವದೆಹಲಿ, ಆಯುಷ್ ಇಲಾಖೆ ಬೆಂಗಳೂರು, ಜಿಲ್ಲಾಡಳಿತ ಮತ್ತು ಜಿಲ್ಲಾ ಪಂಚಾಯತ್ ಸಹಯೋಗದಲ್ಲಿ ಆಯೋಜಿಸಲಾಗಿದ್ದ ಅಂತಾರಾಷ್ಟಿಯ ಯೋಗ ದಿನಾಚರಣೆಗೆ ಕೇಂದ್ರ ಸಚಿವರಾದ ಭಗವಂತ ಖೂಬಾ ಅವರು ಸಸಿಗೆ ನೀರುವ ಹಾಕುವ ಮೂಲಕ ಚಾಲನೆ ನೀಡಿದರು.

ಯೋಗವನ್ನುದ್ದೇಶಿಸಿ ಮೈಸೂರಿನಿಂದ ಮಾನ್ಯ ಪ್ರಧಾನಮಂತ್ರಿಗಳಾದ ನರೇಂದ್ರ ಮೋದಿಯವರು ನಡೆಸಿದ ಐತಿಹಾಸಿಕ ಭಾಷಣ ಮುಗಿಯುತ್ತಿದ್ದಂತೆಯೇ ಯೋಗಾಸನ ಆರಂಭಗೊಂಡಿತು.

ಕೇಂದ್ರ ಸಚಿವರಾದ ಭಗವಂತ ಖೂಬಾ, ಅರಣ್ಯ ಮತ್ತು ಆಹಾರ, ಜಿಲ್ಲಾ ಉಸ್ತುವಾರಿ ಸಚಿವರಾದ ಉಮೇಶ ವಿ.ಕತ್ತಿ, ಶಾಸಕರಾದ ಬಸನಗೌಡ ಪಾಟೀಲ (ಯತ್ನಾಳ), ಜಿಲ್ಲಾಧಿಕಾರಿ ಡಾ.ವಿಜಯಮಹಾಂತೇಶ ದಾನಮ್ಮನವರ, ಪೊಲೀಸ್ ವರಿಷ್ಠಾಧಿಕಾರಿ ಹೆಚ್.ಡಿ. ಆನಂದಕುಮಾರ, ಸಿಇಓ ರಾಹುಲ್ ಶಿಂಧೆ, ಅಪರ ಜಿಲ್ಲಾಧಿಕಾರಿ ರಮೇಶ ಕಳಸದ, ಮ.ಪಾ.ಆಯುಕ್ತ ವಿಜಯಕುಮಾರ ಮೆಕ್ಕಳಕೆ ಹಾಗೂ ಇನ್ನೀತರರು ನಾನಾ ಯೋಗಾಸನಗಳನ್ನು ಮಾಡಿ ಗಮನ ಸೆಳೆದರು.

ತಂಡವಾಗಿ ವಿದ್ಯಾರ್ಥಿಗಳು: ಜಿಲ್ಲಾಡಳಿತ ಮನವಿಯಂತೆ ಜೂನ್ ೨೧ರ ಬೆಳಗ್ಗೆ ಯೋಗಾಸನಕ್ಕಾಗಿ ತಂಡೋಪತಂಡವಾಗಿ ಗೋಲ್ ಗುಂಬಜನತ್ತ (Gol Gumbaz) ಆಗಮಿಸಿದ ವಿದ್ಯಾರ್ಥಿಗಳು, ಯೋಗ ಪಟುಗಳು ಪೂರ್ವ ನಿಗದಿಪಡಿಸಿದ ಆಯಾ ಬ್ಲಾಕ್‌ನಲ್ಲಿ ಯೋಗಾ ಸಮವಸ್ತ್ರ ಧರಿಸಿ ಆಸೀನರಾಗಿ ಯೋಗಾಸನದಲ್ಲಿ ಅಚ್ಚುಕಟ್ಟಾಗಿ ಭಾಗಿಯಾದರು.

ಮಾನವೀಯತೆಗಾಗಿ ಯೋಗ: ಮಾನವೀಯತೆಗಾಗಿ ಯೋಗವು ೮ನೇ ಯೋಗಾ ದಿನಾಚರಣೆಯ ಧ್ಯೇಯ ವಾಖ್ಯವಾಗಿತ್ತು. ಯೋಗದಿನದಂದು ಪೂರ್ವನಿಗದಿತ ಸಮಯಕ್ಕೆ ಕೇಂದ್ರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಶಾಸಕರು ಹಾಗೂ ಗಣ್ಯರು ಆಗಮಿಸಿ ಯೋಗಾ ಕಾರ್ಯಕ್ರಮದಲ್ಲಿ ಭಾಗಿಯಾದರು.

ಜಿಲ್ಲಾಧಿಕಾರಿಗಳು, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು, ಜಿಲ್ಲಾ ಪಂಚಾಯತ್ ಸಿಇಓ, ಅಪರ ಜಿಲ್ಲಾಧಿಕಾರಿಗಳು ಹಾಗೂ ಇನ್ನೀತರ ಇಲಾಖೆಗಳ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಜೂನ್ ೨೧ ರಂದು ಯೋಗ ದಿನವು ಅಚ್ಚುಕಟ್ಟಾಗಿ ನಡೆದು ಯಶಸ್ಸು ಕಂಡಿತು.

ಅಚ್ಚುಕಟ್ಟಾದ ವ್ಯವಸ್ಥೆ: ಗಣ್ಯರು, ಅತಿಥಿಗಳಿಗೆ ಯೋಗಸಾನಕ್ಕಾಗಿ ಪ್ರತ್ಯೇಕ ಮ್ಯಾಟ್ ವ್ಯವಸ್ಥೆ ಮಾಡಲಾಗಿತ್ತು. ಯೋಗಾಸನಕ್ಕಾಗಿ ವಿವಿಧ ಶಾಲಾ ಕಾಲೇಜು ವಸತಿ ನಿಲಯಗಳಿಂದ ಆಗಮಿಸಿ ಸೇರಿದ್ದ ಯೋಗಪಟುಗಳ ಮೇಲೆ ಮಾನೀಟರ್ ಮಾಡಲು ಆಯಾ ಬ್ಲಾಕ್‌ಗೆ ನೋಡಲ್ ಅಧಿಕಾರಿಗಳು, ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲಾಗಿತ್ತು. 


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!