- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಜಮೀರ್ ಹೇಳಿಕೆಗೆ ಯತ್ನಾಳ್ ಕಿಡಿ

ಜಮೀರ್ ಹೇಳಿಕೆಗೆ ಯತ್ನಾಳ್ ಕಿಡಿ

ವಿಜಯಪುರ :  ರಾಜಕೀಯ, ಅಭಿವೃದ್ಧಿ ಸಮಸ್ಯೆ ಬಗ್ಗೆ ಮಾತನಾಡಲಿ‌. ತೀರಾ ವಯಕ್ತಿಕ ಹೇಳಿಕೆಗಳು ಸರಿಯಲ್ಲ ಎಂದು ಜಮೀರ್ ಅಹ್ಮದ್ ಖಾನ್ ಹೇಳಿಕೆ ವಿರುದ್ಧ ಬಸನಗೌಡ ಪಾಟೀಲ ಯತ್ನಾಳ ಕಿಡಿಕಾರಿದರು.

ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಹೇಳಿಕೆ ಕುರಿತು ಸಿಂದಗಿಯಲ್ಲಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಪ್ರತಿಕ್ರಿಯೆ ನೀಡಿ, ವಿರೋಧಿಗಳು ಬಿಜೆಪಿ ಸರ್ಕಾರದ ಬಗ್ಗೆ ಹಾಗೂ ಪ್ರಧಾನಿ ಮೋದಿ ಅವರ ವೈಯುಕ್ತಿಕ ಕುರಿತು ಮಾತಾಡಿದಾಗ ಬಿಜೆಪಿ ಮಾತಾಡಿದೆ. ಮೌತ್‌ಕಾ ಸೌದಾಗರ, ಚಹಾ ಮಾರುವವ ಎಂದರು. ಸೋನಿಯಾ‌ ಗಾಂಧಿ ಹಾಗೂ ರಾಹುಲ್  ಗಾಂಧಿ ಅವರಿಂದ ಇದು  ಆರಂಭವಾಯಿತು. ಜಮೀರ್ ಅಹ್ಮದ್ ಖಾನ್, ಓವೈಸಿ ಇವರೆಲ್ಲಾ ಒಂದು‌ ರೀತಿ ಹದ್ದು‌ಮಿರಿ ವರ್ತನೆ ಮಾಡುತ್ತಿದ್ದಾರೆ ವೈಯುಕ್ತಿಕ ಹೇಳಿಕೆ ನೀಡುತ್ತಿರುವುದು ಸರಿಯಲ್ಲ ಎಂದರು.

ಕುಮಾರಸ್ವಾಮಿ, ‌ದೇವೇಗೌಡರ  ಬಗ್ಗೆ ಎಲ್ಲಾ ಇತಿಮಿತಿಗಳನ್ನು ಮೀರಿ ಮಾತನಾಡಿ,  ಉದ್ದಟತನ ಮೆರೆಯುತ್ತಿದ್ದಾರೆ. ಹಿಂದೂಗಳ ನಾಶ ಮಾಡೋ ಹೇಳಿಕೆ ನೀಡಿದ್ದಾರೆ. ಇದು  ಕೊನೆಯ ಎಚ್ಚರಿಕೆ. ಬಿಜೆಪಿ ಹಾಗೂ ಹಿಂದೂಗಳ ಬಗ್ಗೆ ಇದೇ ರೀತಿ ಮಾತನಾಡಿದರೆ ಅನಿವಾರ್ಯವಾಗಿ ಉತ್ತರ ನೀಡಬೇಕಾಗುತ್ತದೆ ಎಂದು ಶಾಸಕ ಯತ್ನಾಳ ಎಚ್ಚರಿಕೆ ನೀಡಿದರು.

ನಾವು ಭಾರತ ಮಾತೆಗೆ ಜಯಕಾರ‌ ಹಾಕೋರು. ಜಮೀರ್ ಅಂತವರು ತೆ ಬೇರೆ ಬೇರೆಯವರಿಗೆ ಜಯಕಾರ ಹಾಕುತ್ತಾರೆ. ದೇವೇಗೌಡ ಕುಮಾರಸ್ವಾಮಿಗೆ ಜಯಕಾರ ಹಾಕಿದ್ದರು. ಈಗ ಸಿದ್ದರಾಮಯ್ಯಗೆ ಜಯಕಾರ ಹಾಕುತ್ತಿದ್ದಾರೆ. ಅರ್ ಎಸ್ ಎಸ್ ಬಗ್ಗೆ ಕುಮಾರಸ್ವಾಮಿ‌ ಹಾಗೂ  ಜಮೀರ್ ಅಹ್ಮದ್ ಖಾನ್  ಮಾತನಾಡುತ್ತಾರೆ. ದೇಶ, ಧರ್ಮ ಸಂಸ್ಕೃತಿ ಬಗ್ಗೆ ಕಾರ್ಯ ಆರ್ ಎಸ್ ಎಸ್ ಕೆಲಸ ಮಾಡುತ್ತದೆ. ರಾಜಕೀಯ ಮಾತನಾಡಿ ಆರ್‌ಎಸ್ ಎಸ್ ಬಗ್ಗೆ ಮಾತನಾಡಬೇಡಿ ಎಂದು ತಿಳಿಸಿದರು.

ಆರ್ ಎಸ್ ಎಸ್  ಚಡ್ಡಿ ಕುರಿತು ಕೀಳು ಮಟ್ಟದ ‌ಮಾತನಾಡುತ್ತಿದ್ದಾರೆ. ಹತಾಶೆಯಿಂದ ಜಮೀರ್‌ ಹೀಗೆ ಮಾತನಾಡುತ್ತಿದ್ದಾರೆ. ಇದೇ  ದಾಟಿ ಮುಂದುವರೆದರೆ ಸರಿಯಾದ ಉತ್ತರ ನೀಡಬೇಕಾಗುತ್ತದೆ  ಎಂದು ಬಸನಗೌಡ ಪಾಟೀಲ್ ಯತ್ನಾಳ್ ಮತ್ತೊಮ್ಮೆ ಎಚ್ಚರಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!