- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಚರ್ಚೆಗೆ ಗ್ರಾಸವಾದ ಯತ್ನಾಳ್ - ರಮೇಶ ಜಾರಕಿಹೊಳಿ ಬೇಟಿ

ಚರ್ಚೆಗೆ ಗ್ರಾಸವಾದ ಯತ್ನಾಳ್ – ರಮೇಶ ಜಾರಕಿಹೊಳಿ ಬೇಟಿ

ವಿಜಯಪುರ : ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮಾಜಿ ಸಚಿವ ರಮೇಶ ಜಾರಕಿಹೊಳಿ ಇಂದು ಭೇಟಿ ಮಾಡಿ ರಹಸ್ಯ ಮಾತುಕತೆ ನಡೆಸಿದರೆನ್ನಲಾಗಿದೆ ಎನ್ನುವುದು ಇದೀಗ ರಾಜ್ಯ ರಾಜಕೀಯದಲ್ಲಿ ಚರ್ಚೆಗೆ ಗ್ರಾಸವಾಗಿದೆ.

ವಿಜಯಪುರ ನಗರದ ಹೊರ ಭಾಗದಲ್ಲಿರುವ ಯತ್ನಾಳ್ ಗೆ ಸೇರಿರುವ ತೋಟದ ಮನೆಯಲ್ಲಿ ಬೇಟಿಯಾಗಿ ಸುಮಾರು ಒಂದು ಗಂಟೆಗಳ ಕಾಲ, ಪ್ರಸಕ್ತ ರಾಜಕೀಯ ಬೆಳವಣಿಗೆ ಕುರಿತು ಸುಧೀರ್ಘ ಚರ್ಚೆ ನಡೆಸಿದರೆನ್ನಲಾಗಿದೆ.

ಉಭಯ ನಾಯಕರಿಗೆ ಸಚಿವ ಸ್ಥಾನ ಬೇಡಿಕೆ, ಬಿಟ್ ಕಾಯಿನ್ ವಿಚಾರ ಕುರುತುತ ಮಾತನಾಡಿದ್ದಾರೆ ಎನ್ನಲಾಗಿದೆ. ನೆರೆಯ ಮಹಾರಾಷ್ಟ್ರದ ಸಾಂಗ್ಲಿಯಿಂದ ನೇರವಾಗಿ  ಯತ್ನಾಳ್ ತೋಟದ ಮನೆಗೆ ಆಗಮಿಸಿದ ರಮೇಶ ಜಾರಕಿಹೊಳಿ, ಮಾತುಕತೆ ಬಳಿಕ ಬೆಳಗಾವಿಗೆ ತೆರಳಿದ್ದಾರೆ.

ರಮೇಶ ಜಾರಕಿಹೋಳಿ ತೆರಳಿದ ಬಳಿಕ ಯತ್ನಾಳ್, ಸಿಂದಗಿ ಪಟ್ಟಣದಲ್ಲಿ ಶಾಸಕ‌ ರಮೇಶ ಭೂಸನೂರ ಕೃತಜ್ಞತಾ ಸಮಾರಂಭದಲ್ಲಿ ಭಾಗಿಯಾಗಲು ತೆರಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!