- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಜ್ಯಅರುಣಸಿಂಗ್ ವಿರುದ್ಧ ಶಾಸಕ ಯತ್ನಾಳ ಕಿಡಿ

ಅರುಣಸಿಂಗ್ ವಿರುದ್ಧ ಶಾಸಕ ಯತ್ನಾಳ ಕಿಡಿ

ವಿಜಯಪುರ:  (Vijayapura) ಇಂತಹ ಹೇಳಿಕೆಗೆ ಹೇಳಲು ನನಗೆ ಸಮಯ ಇಲ್ಲ ಎನ್ನುವ ಮೂಲಕ  ರಾಜ್ಯ ಬಿಜೆಪಿ ಉಸ್ತುವಾರಿ ಅರುಣಸಿಂಗ್ (Yatnal on Arun Singh)  ವಿರುದ್ಧ ಶಾಸಕ ಬಸನಗೌಡ ಪಾಟೀಲ ಯತ್ನಾಳ (Basanagouda Patil Yatnal) ಕಿಡಿ ಕಾರಿದ್ದಾರೆ.

Video Watch :

ವಿಜಯಪುರ ನಗರದಲ್ಲಿ ಈ ಕುರಿತಾಗಿ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಶಾಸಕ ಬಸನಗೌಡ ಪಾಟೀಲ ಯತ್ನಾಳ್‌ ಮಹಾನಗರ ಪಾಲಿಕೆ ಚುನಾವಣೆ ಹಿನ್ನಲೆಯಲ್ಲಿ ನನಗೆ ಸಮಯ ಇಲ್ಲ. ನಾನು ಯಾರಿಗಾದರೂ ಬಿಡ್ತಿನಾ..? ನಾನು ಯಾರ ಮನೆಗೂ ಹೋಗಿ ನಿಂತಿಲ್ಲ. ನನ್ನ ಬಗ್ಗೆ ಅರುಣ್ ಸಿಂಗ್ ಅವರಿಗೆ ಮಿಸ್ ಗೈಡ್ ಮಾಡಿದ್ದಾರಾ ಗೊತ್ತಿಲ್ಲ. ಮಿಸ್‌ಗೈಡ್ ಬಗ್ಗೆ ಅರುಣಸಿಂಗ್‌ರನ್ನು ಕೇಳಿ ಎಂದರು.

ಕಾಂತಾರ ಸಿನಿಮಾ ಬಗ್ಗೆ ನಟ ಚೇತನ ಹೇಳಿಕೆ ವಿಚಾರವಾಗಿ ಮಾತನಾಡಿದ ಶಾಸಕ ಬಸನಗೌಡ, ಅವನೊಬ್ಬ ನಾಲಾಯಕ, ವಿಜಯಪುರಕ್ಕೂ ನಾಟಕ ಮಾಡಲು ಚೇತನ್ ಬಂದಿದ್ದ, ಇವ್ರೆಲ್ಲಾ, ಸಾಬ್ರ್ (ಮುಸ್ಲಿಂ) ಏಜೆಂಟ್ ಆಗಿದ್ದಾರೆ, (Yatnal on Arun Singh) ಮುಸ್ಲಿಂ ರೊಕ್ಕಾ ಕೊಟ್ಟು ಇಂತಹ ಅಯೋಗ್ಯ ಕೆಲಸ ಮಾಡಿಸುತ್ತಾರೆ ಎಂದು ವಾಗ್ದಾಳಿ ನಡೆಸಿದರು.

ಇನ್ನೂ ಕೆಲವರು ಇದ್ದಾರೆ, ಹಗಲಿ ಹಿಂದುತ್ವ ಹೆಸರು ಹೇಳಿ ರಾತ್ರಿ ಹಿಂದೂ ವಿರೋಧಿ ಕೆಲಸ ಮಾಡುತ್ತಾರೆ, ಹಿಂದೂ ವಿರೋಧಿ ಮಾತನಾಡಿದ್ರೇ ಶಹಾಷ್ ಎನ್ನುತ್ತಾರೆ ಎಂದು ಮಾತನಾಡ್ತಾರೆ, ದೈವಾರಾಧನೆ ಸಂಸ್ಕೃತಿಯ ಭಾಗ ಆಗಿದೆ, ಹಿಂದೂ ವಿರೋಧಿ ಮಾತನಾಡಿದ್ರವರು ಏನೇನು ಆಗಿ ಹೋಗ್ಯಾರ್, ನಮ್ಮ ಆರಾಧನೆ ಬಗ್ಗೆ ಮಾತನಾಡುವವರಿಗೆ ದೇವರು ಶಿಕ್ಷೆ ನೀಡುತ್ತಾನೆ ಎಂದು ಹೇಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!