- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಯತ್ನಾಳ್ ಡಬಲ್ ಇಂಜಿನ್ ಲೀಡರ್. ಸಿಎಂ ಬೊಮ್ಮಾಯಿ

ಯತ್ನಾಳ್ ಡಬಲ್ ಇಂಜಿನ್ ಲೀಡರ್. ಸಿಎಂ ಬೊಮ್ಮಾಯಿ

ವಿಜಯಪುರ: ವಿಜಯಪುರ ಜಿಲ್ಲೆಯ ಜನತೆ ಕಾಯಕಯೋಗಿಗಳು, ನೇರ ನುಡಿಯವರು, ಗಂಡು ಮೆಟ್ಟಿದ ನಾಡಿನವರು. ಈ ಗಂಡು ಮೆಟ್ಟಿದ ನಾಡನ್ನು ಪ್ರತಿನಿಧಿಸುವ ಯತ್ನಾಳ್ ಅವರು ಡಬಲ್‌ ಇಂಜಿನ್ ಇರುವವರು ಎಂದು ಶಾಸಕ ಯತ್ನಾಳ ಅವರನ್ನು ಸಿಎಂ ಬಸವರಾಜ ಬೊಮ್ಮಾಯಿ ಹೊಗಳಿದರು.

BSY ಕಾಲೆಳದ ಯತ್ನಾಳ್

ಜಿಲ್ಲೆಯಲ್ಲಿ ವಿವಿಧ ಕಾಮಗಾರಿಗಳಿಗೆ ಚಾಲನೆ ನೀಡಿ, ಮಾತನಾಡಿದ ಸಿಎಂ ಬಸವರಾಜ ಬೊಮ್ಮಾಯಿ, ವಿಜಯಪುರಕ್ಕೆ ಬರಲು ನನಗೆ ಸಂತಸವಾಗಿದೆ. ಅಲ್ಲದೆ ಇನ್ನು ಮುಂದೆ ಬರಗಾಲ ಜಿಲ್ಲೆ ಎನ್ನುವ ಹಣೆಪಟ್ಟಿಯನ್ನು ಜಿಲ್ಲೆ ಹೊತ್ತುಕೊಳ್ಳಬಾರದು. ನೆಲ, ಜಲ ಅಭಿವೃದ್ಧಿಗಾಗಿ ನಾವು ಒಕ್ಕಟ್ಟಾಗಿ ಕೆಲಸ‌ ಮಾಡಬೇಕು, ಒಕ್ಕಟ್ಟಿನ ಕೊರತೆಯಿಂದ ಅಭಿವೃದ್ಧಿ ಆಗಿಲ್ಲ. ನಾವೆಲ್ಲರೂ ೫೯ ತಿಂಗಳು ಒಕ್ಕಟ್ಟಾಗಿ ಕೆಲಸ ಮಾಡೋಣ, ಒಂದು ತಿಂಗಳು ರಾಜಕಾರಣ ಮಾಡೋಣ. ಗೋಡಾ ಹೈ ಮೈದಾನ್ ಹೈ, ಯಾರು ಬೇಕು ಎಂದು ಜನ ತೀರ್ಮಾನ ಮಾಡ್ತಾರೆ ಎಂದರು.

ಬಿಜಾಪುರ “ಬಂಗಾರದಪುರ” ಮಾಡುತ್ತೇವೆ. ಸಿಎಂ ಬೊಮ್ಮಾಯಿ

ನಾವು ಮಾಡುವ ರಾಜಕಾರಣ ಅಧಿಕಾರದ ರಾಜಕಾರಣವೋ ಅಥವಾ ಜನರಿಗೋಸ್ಕರ ರಾಜಕಾರಣವೋ ಎಂಬ ಆಯ್ಕೆಗಳಿವೆ. ನಾವು ಯಾವ ರಾಜಕಾರಣ ಮಾಡಬೇಕು ಎಂಬುದು ಎಲ್ಲರೂ ಸೇರಿ ತೀರ್ಮಾನಿಸಬೇಕಿದೆ. ಜನರ ಸಹನೆಯ ಕಟ್ಟೆ ಒಡೆದಿದೆ, ನಾವು ಜನರ ಎದುರಿಗೆ ಪ್ರಾಮಾಣಿಕವಾಗಿ ಇದ್ರೆ ಜನ ಬೆಂಬಲ‌ ಕೊಡ್ತಾರೆ ಎಂದು ಹೇಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!