- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಯೋಗ ಹೆಸರಲ್ಲಿ ಮೋದಿ ರಾಜಕೀಯ. ಮಾಜಿ ಸಿಎಂ ಸಿದ್ಧರಾಮಯ್ಯ

ಯೋಗ ಹೆಸರಲ್ಲಿ ಮೋದಿ ರಾಜಕೀಯ. ಮಾಜಿ ಸಿಎಂ ಸಿದ್ಧರಾಮಯ್ಯ

ವಿಜಯಪುರ: ಯೋಗ ದಿನಾಚರಣೆಯ (world yoga day) ವಿಷಯವಾಗಿ ಮೈಸೂರಿಗೆ ಆಗಮಿಸುತ್ತಿರುವ ಪ್ರಧಾನಿ ಮೋದಿ (PM Modi), ರಾಜಕೀಯ ಕೂಡಾ ಮಾಡಲಿಕ್ಕೆ ಬರ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ (siddaramaih) ಹೇಳಿದರು.

More Read: ಕುರ್ಚಿ, ಬ್ಯಾನರ್ ಗಾಗಿ ಜಗಳ. ಕಾರ್ಯಕ್ರಮದಿಂದ ಹೊರನಡೆದ ಸಚಿವ ಸಿಸಿ ಪಾಟೀಲ

ವಿಜಯಪುರ ಜಿಲ್ಲೆಯ ದೇವರಹಿಪ್ಪರಗಿ ಪಟ್ಟಣಕ್ಕೆ ಕಾರ್ಯಕ್ರಮದ ನಿಮಿತ್ಯವಾಗಿ ಆಗಮಿಸಿದ್ದ ಸಿದ್ಧರಾಮಯ್ಯನವರು ಸುದ್ದಿಗಾರರೊಂದಿಗೆ ಮಾತನಾಡಿ, ವಿಶ್ವ ಯೋಗ ದಿನಾಚರಣೆ ಹಿನ್ನೆಲೆ ಮೈಸೂರಿಗೆ ಪ್ರಧಾನಿ ಮೋದಿ ಆಗಮನ ವಿಚಾರಕ್ಕೆ ಪ್ರತಿಕ್ರಿಯಿಸಿ, ಮೋದಿ ದೇಶದ ಪ್ರಧಾನಿ, ಮೈಸೂರಿಗೆ ಬರೋದರಲ್ಲಿ ತಪ್ಪಿಲ್ಲ, ಬರಬೇಡ ಅಂತ ಹೇಳೋಕೆ ಆಗುತ್ತಾ, ಲೇಟ್ ಹಿಮ್ ಕಂ, ಅಟೆಂಡ್ ದಿ ಪಂಕ್ಷನ್, ದೇಶದ ಪ್ರಧಾನಿ ಅಂತಾರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಭಾಗವಹಿಸುತ್ತಾರೆ ಎಂದರು.

ಕಾಂಗ್ರೆಸ್‌ನವರು ಸಭೆ ಸಮಾರಂಭ ಮಾಡಿದರೆ ಕೊರೊನಾ ಬರುತ್ತದೆ ಎಂದು‌ ಬಿಜೆಪಿ ಆರೋಪ‌‌ ವಿಚಾರಕ್ಕೆ, ಇದಕ್ಕೆ ಅವರೇ ಉತ್ತರ ಕೊಡಬೇಕಲ್ವಾ. ನಿನ್ನೆ ‌ನಡ್ಡಾ ಬಂದಿದ್ದರು, ತಾಪಂ ಜಿಪಂ‌ ಚುನಾಯಿತ ಪ್ರತಿನಿಧಿಗಳ ಹೆಸರಲ್ಲಿ ಸಾರ್ವಜನಿಕ ಸಭೆ ಮಾಡಿದರು. ಅಲ್ಲಿಯೂ ಸಾಕಷ್ಟು‌ ಜನಾ ಸೇರಿದ್ದರು. ಈಗ ನರೇಂದ್ರ ಮೋದಿ‌ ಅವರು ನಾಳೆ ಬರ್ತಾರೆ, ಬೆಂಗಳೂರಿನಲ್ಲಿ ಸಭೆ ಮಾಡ್ತಾರೆ, ಮೈಸೂರಿನಲ್ಲಿ ಯೋಗಾ ಮಾಡಲಿದ್ದಾರೆ. ಯೋಗಾ ಕಾರ್ಯಕ್ರಮದಲ್ಲಿ ಹತ್ತು ಸಾವಿರಕ್ಕಿಂತ ಹೆಚ್ಚು ಜನ ಸೇರುತ್ತಾರೆ ಅವರಿಗೆ ಯಾವುದೇ ಕೊರೊನಾ ಬರುವುದಿಲ್ಲ ಎಂದು ವ್ಯಂಗ್ಯವಾಡಿದರು.

More Read: ಪ್ರಕಾಶ ಹುಕ್ಕೇರಿ ಗೆಲುವು. ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ

ಯೋಗಾ (world yoga day) ಕಾರ್ಯಕ್ರಮದ ನಂತರ ಮೋದಿ ಸಾರ್ವಜನಿಕ ಸಭೆ ಮಾಡಲಿದ್ದಾರೆ, ಅಲ್ಲಿ ಕೊರೋನಾ ಹಬ್ಬಲ್ವೋ, ನರೇಂದ್ರ ಮೋದಿ ಕಂಡು ಕೊರೊನಾ ಓಡಿ ಬಿಟ್ಟಿದ್ದಾವಾ?  ಆ ಸೂಕ್ಷ್ಮಾಣುಗಳು ಓಡಿ ಬಿಟ್ಟಿದ್ದಾವಾ? ಎಂದು ಬಿಜೆಪಿ ಮುಖಂಡರಿಗೆ ಪ್ರಶ್ನಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!