- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಭೃಂಗೀಮಠಗೆ ಬೆಂಬಲ ಸೂಚಿಸಿದ ಪ್ರಭಾಕರ ಖೇಡದ

ಭೃಂಗೀಮಠಗೆ ಬೆಂಬಲ ಸೂಚಿಸಿದ ಪ್ರಭಾಕರ ಖೇಡದ

ಬಸವನಬಾಗೇವಾಡಿ: ಕನ್ನಡ ಸಾಹಿತ್ಯ ಪರಿಷತ್ ಚುಣಾವಣೆ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸ್ಪರ್ಧಿಸಿದ ಮಲ್ಲಿಕಾರ್ಜುನ ಭೃಂಗೀಮಠರಿಗೆ ತಾಲೂಕು ಚುಟುಕು ಸಾಹಿತ್ಯ ಪರಿಷತ್ ಅಧ್ಯಕ್ಷ ಪ್ರಭಾಕರ ಖೇಡದ ಅವರು ತಮ್ಮ ಸಂಪೂರ್ಣ ಬೆಂಬಲ ಸೂಚಿಸಿದರು.

 ಕಸಾಪ ಚುನಾವಣಾ ಪ್ರಚಾರಾರ್ಥವಾಗಿ ಚುಸಾಪ ತಾಲೂಕು ಅಧ್ಯಕ್ಷ ಪ್ರಭಾಕರ ಖೇಡದ ಅವರನ್ನು ಭೇಟಿ ಮಾಡಲು ಆಗಮಿಸಿದ ಭೃಂಗೀಮಠರಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು ಈ ಸಂದರ್ಭದಲ್ಲಿ ಮಾತನಾಡಿ ನಿಜವಾಗಿಯೂ ಕಸಾಪ ಚುನಾವಣೆಯಲ್ಲಿ ಬದಲಾವಣೆ ಅವಶ್ಯಕವಾಗಿದ್ದು ಕಸಾಪದಲ್ಲಿ ಹೊಸತನ ಮತ್ತು ಅಭಿವೃದ್ಧಿ, ಹೊಸ ಯೋಜನೆಗಳು ಬೆಳಕಿಗೆ ಬರಬೇಕಾಗಿದೆ ನೈಜ ಜೀವನದಲ್ಲಿ ಪ್ರಾಮಾಣಿಕರು, ಕನ್ನಡ ನಾಡು ನುಡಿಗಾಗಿ ತಮ್ಮನ್ನೆ ತಾವು ಸಮರ್ಪಿಸಿಕೊಂಡು ಹೋರಾಟದ ಹಿನ್ನೆಲೆವುಳ್ಳ ಮಲ್ಲಿಕಾರ್ಜುನ ಭೃಂಗಿಮಠರಿಗೆ ನನ್ನ ಸಂಪೂರ್ಣ ಬೆಂಬಲ ನೀಡುವುದು ಸೂಕ್ತ ಸಮಯದಲ್ಲಿ ಸೂಕ್ತ ನಿರ್ಧಾರವಾಗಿದೆ ಎಂದು ಹೇಳಿದರು.

 ಈ ಸಂದರ್ಭದಲ್ಲಿ ಪತಂಜಲಿ ಯೋಗ ಸಾಧಕ ಕಾಶಿನಾಥ ಅವಟಿ, ಡಾ. ಅಮರೇಶ ಮಿಣಜಗಿ, ಮುತ್ತು ಚಿಕ್ಕೊಂಡ, ವಾಸುದೇವ ಮ್ಯಾಗೇರಿ, ಲಾಯಪ್ಪ ಇಂಗಳೆ, ಬಿ.ಎಸ್.ನವಲೆ, ರಾಜಕುಮಾರ ಮಣ್ಣೂರ, ಶಂಕರ ಕೊಣ್ಣೂರ, ಶ್ರೀಶೈಲ ಶಿರಗುಪ್ಪಿ ಸೇರಿದಂತೆ ಇತರರು ಇದ್ದರು.

ವರದಿ: ನಾಗೆಶ ನಾಗೂರ 


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!