- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಒತ್ತಡದ ನಡುವೆಯೂ ಗೆಲುವು ಸಾಧಿಸುವೆ. ಪಕ್ಷೆತರ ಅಭ್ಯರ್ಥಿ ಲೋಣಿ

ಒತ್ತಡದ ನಡುವೆಯೂ ಗೆಲುವು ಸಾಧಿಸುವೆ. ಪಕ್ಷೆತರ ಅಭ್ಯರ್ಥಿ ಲೋಣಿ

ವಿಜಯಪುರ:  ಕಾಂಗ್ರೆಸ್ ನ ರಾಜ್ಯಾಧ್ಯಕ್ಷ ಡಿಕೆ ಶಿವಕುಮಾರ್, ಸಿ‌ಎಂ ಬಸವರಾಜ ಬೊಮ್ಮಾಯಿ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ, ಮಾಜಿ ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಹಾಗೂ ಗೋವಿಂದ ಕಾರಜೋಳ ಸೇರಿದಂತೆ ಹಲವು ರಾಜಕೀಯ ಒತ್ತಡಗಳು ಬಂದಿದ್ದರೂ ಕೂಡಾ ನಾನು ಕಣದಿಂದ ಹಿಂದೆ ಸರಿಯದೇ ಮತದಾರರು ಆಶಿರ್ವದಿಸುತ್ತಾರೆ ಎಂಬ ಬಲವಾದ ವಿಶ್ವಾಸದಿಂದ ಚುನಾವಣೆಯಲ್ಲಿ ಸ್ಪರ್ಧಿಸಿದ್ದೇನೆ ಎಂದು ಪಕ್ಷೆತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ತಮ್ಮ ಗೆಲುವಿನ ಕುರಿತು ವಿಶ್ವಾಸ ವ್ಯಕ್ತಪಡಿಸಿದರು.

https://gadinaadakranti.com/babaladi-a-prophecy-written-500-years-ago-today/

ವಿಜಯಪುರ ನಗರದಲ್ಲಿ ಮಾದ್ಯಮದವರನ್ನು ಉದ್ದೇಶಿಸಿ ಮಾತನಾಡಿದ ಅವರು, ನಾನು ಚುನಾವಣೆಯ ಮೊದಲು ವಿಜಯಪುರ ಜಿಲ್ಲೆಯ ಎಲ್ಲಾ ಮತದಾರರ ಸಭೆ ನಡೆಸಿದ್ದೇನೆ.‌  2 ಸಾವಿರ ಜನರನ್ನು ಸೇರಿಸಿದ್ದೇ ಆಗ ಕಣದಿಂದ ಯಾವುದೇ ಕಾರಣಕ್ಕೆ ಹಿಂದೆ ಸರಿಯಬೇಡಿ ಎಂದು ಮತದಾರರು ಬೆಂಬಲ ಸೂಚಿಸಿದ್ದರು. ಎರಡು ರಾಷ್ಟ್ರೀಯ ಪಕ್ಷಗಳು ಅವಿರೋಧ ಆಯ್ಕೆ ಮಾಡುವ ಹುನ್ನಾರ ನಡೆಸಿ ಸ್ಥಳೀಯ ಸಂಸ್ಥೆಗಳ ಮತದಾರರ ಹಕ್ಕು ಕಸಿದುಕೊಳ್ಳುವ ಪ್ರಯತ್ನ ನಡೆಸಿದ್ದರು ಎಂದು ಆರೋಪಿಸಿದರು.

ಅವರ ಹಕ್ಕಿಗಾಗಿ ಸರ್ಧಾ ಕಣದಲ್ಲಿ ನಾನು ಇದ್ದಿನಿ, ಇನ್ನೂ ಮತದಾರರಿಗೆ ಮಾತು ಕೊಟ್ಟಿದ್ದೇನೆ, ನನಗೆ ಸೊಲು ಗೆಲುವು ಮುಖ್ಯ ಅಲ್ಲ, ನಾನು ಸ್ಪರ್ಧೆಯಲ್ಲಿ ಇದ್ದಿನಿ, ಪಕ್ಷೇತರ ಅಭ್ಯರ್ಥಿಯಾಗಿ ಜಯ ಖಚಿತವಾಗಿದೆ ನಾನು ಈ ಮೊದಲು ಕಾಂಗ್ರೆಸ್ ಅಭ್ಯರ್ಥಿಯಾಗಬೇಕಿತ್ತು, ಆದರೆ ಟಿಕೆಟ್ ಸಿಗಲಿಲ್ಲ,  ಕಳೆದ ಎಮ್ ಎಲ್ ಸಿ ಚುನಾವಣೆಯಲ್ಲಿ ಈ ಹಿಂದೆ ನಾಮ ಪತ್ರ ಹಿಂತೆಗೆದುಕೊಂಡಿದ್ದೆ ಈಗ ಯಾವುದೇ ಕಾರಣಕ್ಕೆ ಹಿಂತೆಗೆದುಕೊಳ್ಳದೆ ಆಸೆ ಆಮೀಷಗಳಿಗೆ ಬಲಿಯಾಗಿಲ್ಲಾ, 95% ಗ್ರಾಮ ಪಂಚಾಯತಿ ಸದಸ್ಯರು ಅಖಂಡ ವಿಜಯಪುರ ಜಿಲ್ಲೆಯ ಜಿಲ್ಲಾ ಪಂಚಾಯತಿ ಉಪಾಧ್ಯಕ್ಷನಾಗಿ ಸೇವೆ ಸಲ್ಲಿಸಿದ್ದೆ, ನನಗೆ ಪಂಚಾಯತ ಸದಸ್ಯರ ನೋವು, ಕಷ್ಟಗಳ ಕುರಿತು ಮಾಹಿತಿ ಇದೆ ತಿಳಿಸಿದರು.

https://gadinaadakranti.com/order-idroo-yak-mike-band-moddilla-pramod-muthalik/

ಅಖಂಡ ಪಂಚಾಯತ ಸದಸ್ಯರ ಒಕ್ಕೂಟ ರಚನೆ ಮಾಡಿ ಸ್ಥಳೀಯ ಸದಸ್ಯರಿಗೆ ಗೌರವ ಧನ ಹೆಚ್ಚಿಸಲಾಯಿತು. ಮೂಲಭೂತ ಸೌಕರ್ಯಗಳ ಕೊರತೆ, ಸದಸ್ಯರಿಗೆ ಬಸ್ ಪಾಸ್ ನೀಡಬೇಕು,  ಅನೇಕ ನೋವುಗಳು ಇವೆ. ಇವೆಲ್ಲದರ ಕುರಿತು ಧ್ವನಿ ಎತ್ತಲು ಸ್ಪರ್ಧೆ ಮಾಡಿದ್ದಿನಿ ಎಂದರು.

ಇನ್ನೂ ಹಿರಿಯ ರಾಜಕಾರಣಿ ಎಸ್.ಆರ್‌.ಪಾಟೀಲ ಅವರಿಗೆ ಟಿಕೇಟ್ ಕೊಡದೇ ಇರೊ ನೋವು ಇದೆ, ಮಾಜಿ ಸಚಿವ ಎಂ.ಬಿ.ಪಾಟೀಲರ ಜೋತೆ ವೈಯಕ್ತಿಕ ಭಿನ್ನಾಭಿಪ್ರಾಯ ಇಲ್ಲಾ, ಎಂ.ಬಿ.ಪಾಟೀಲ ಮನೆಯಲ್ಲಿ ಟಿಕೆಟ್ ನೀಡಿದ್ರಿಂದ ತಪ್ಪು ಸಂದೇಶ ಹೊಗಲಿದೆ. ಅಸಮಾಧಾನ ಆಗಿದೆ, ಇವತ್ತು ನನ್ನ ಯಾರು ಮುಖಂಡರು ಜೊತೆಗೆ ಇಲ್ಲಾ, ಆದರೆ ವಿಜಯಪುರ ಬಾಗಲಕೋಟೆ ಚುನಾವಣೆಯಲ್ಲಿ ಮತದಾರರು ಮಾತ್ರ ಇದ್ದಾರೆ, ರಾಷ್ಟ್ರೀಯ ಪಕ್ಷದ ಜೊತೆಗೆ ನನ್ನ ಬೆಂಬಲ ಕೊಡಿ ಎಂದು ಮನವಿ ಮಾಡಿದರು.

ಇದೇ ಸಂದರ್ಭದಲ್ಲಿ ಮಾತನಾಡುತ್ತಾ ನಾನು ಗ್ರಾಮ ಪಂಚಾಯತಿ ಸದಸ್ಯರ ಅಭಿಪ್ರಾಯ ಪಡೆದಿದ್ದೇನೆ. ವೋಟಿನ ಜೊತೆಗೆ ನೋಟ್ ಕೊಡುವದಾಗಿ ಮತದಾರರು ಹೇಳಿದ್ದಾರೆ‌. ಅಪಜಯ ಹಾಗೂ ಜಯ ಆದರೂ ಮತದಾರರಿಗೆ ಕೀರ್ತಿ ಸಲ್ಲುತ್ತದೆ. ನನಗೆ ಇಬ್ಬರು ಪ್ರಬಲ ಪೈಪೋಟಿ ಇದೆ ಎಂದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!