- Advertisement -Newspaper WordPress Theme
ಮಾಹಿತಿಗಾಗಿಏನಿದು ಬ್ಲ್ಯಾಕ ಫಂಗಸ್ ..? ಇಲ್ಲಿದೆ ನೋಡಿ ವೈದ್ಯರ ಸಲಹೆ...

ಏನಿದು ಬ್ಲ್ಯಾಕ ಫಂಗಸ್ ..? ಇಲ್ಲಿದೆ ನೋಡಿ ವೈದ್ಯರ ಸಲಹೆ…

ಇಡೀ ಪ್ರಪಂಚವೇ ಒಂದನೇಯ ಅಲೆ ಕೊರೋನಾ ಮಹಾ ಮಾರಿಯಿಂದ ತತ್ತರಿಸಿ ಸುಧಾರಿಸಿಕೊಳ್ಳುತ್ತಿರಬೇಕಾದರೇ ಕೊರೋನಾ 2 ನೇ ಅಲೆ ಸುನಾಮಿಯಂತೆ  ಬಂದು ಅಪ್ಪಳಿಸಿ ಮಾನವ ಕುಲವನ್ನೇ ತಲ್ಲಣ ಗೊಳಿಸಿದೆ. 2ನೇ ಅಲೆ ಅತ್ಯಂತ ತೀವ್ರವಾಗಿ – ವೇಗವಾಗಿ ಒಕ್ಕರಿಸಿ ದೇಶ್ಯಾದ್ಯಂತ ಬಡವ – ಶ್ರೀಮಂತರಾದಿಯಾಗಿ ಸುಮಾರು ಜನರ  ಪ್ರಾಣವನ್ನೇ ತೆಗೆದುಕೊಂಡಿದೆ.

ಎಷ್ಟೋ ಪ್ರಮಾಣದಲ್ಲಿ ಸೋಂಕು ಹರಡಿದೆ ಎಂದರೆ ಎಲ್ಲ ಆಸ್ಪತ್ರೆಗಳಲ್ಲಿ ಹಾಸಿಗೆ-ಆಮ್ಲಜನಕ ಸಿಗದಂತಾಗಿದೆ ರಾಜ್ಯ ಸರ್ಕಾರ- ಕೇಂದ್ರ ಸರ್ಕಾರಗಳು ಸಮರೋಪಾದಿಯಲ್ಲಿ ಕ್ರಮಗಳನ್ನು ತೆಗೆದುಕೊಂಡು ಹಾಸಿಗೆ- ಆಮ್ಲಜನಕ – ವ್ಯಾಕ್ಸಿನ್ ಪೂರೈಕೆ ಮಾಡಿ ಸಾವುಗಳ ಪ್ರಮಾಣ ತಗ್ಗಿಸುವಲ್ಲಿ ಸಫಲವಾದವು. ಸರ್ಕಾರದ  ಜೊತೆಗೆ ದೇಶದ ಶ್ರೀಮಂತರು ಹಾಗೂ ಹಲವಾರು ದೇಶಗಳು ಕೂಡ ಸಹಾಯಕ್ಕೆ ಬಂದವು. ಇನ್ನೇನು 2 ನೇ ಅಲೆ ನಿಭಾಯಿಸಬಲ್ಲೆವು ಎನ್ನುತ್ತಿರಬೇಕಾದರೆ, ಮತ್ತೊಂದು ಮಾರಕ ರೋಗ ಕಪ್ಪು ಶಿಲೀಂದ್ರ (ಬ್ಲ್ಯಾಕ ಫಂಗಸ್) ಇದೀಗ ತಾನೇ ಶಿವ-ಶಿವಾ ಎಂದು  ಕರೋನಾದಿಂದ ಚೇತರಿಸಿಕೊಳ್ಳುತ್ತಿರುವವರಿಗೆ ಮತ್ತೆ ಮರಣದ ಕೂಪಕ್ಕೆ ತಳ್ಳುತ್ತಲಿದೆ ಹಾಗಾದರೆ ಏನೀದು ಬ್ಲ್ಯಾಕ ಫoಗಸ್ ಎಂದು ತಿಳಿಯೋನಾ. ಇದನ್ನು ವೈದ್ಯಕೀಯದಲ್ಲಿ Rino cerebral mucar mycosis ಎಂದು ಕರೆಯುತ್ತಾರೆ.

ಇದೊಂದು  ಮುಕಾರ್ (Mucar) ಎಂಬ ಶಿಲೀಂಧ್ರಗಳಿಂದ ಬರುವಂತ ರೋಗ ಇವುಗಳು ತೇವವಾದ ಗೋಡೆ, ನೆಲ, ಮಣ್ಣಿನಲ್ಲಿ ಬೆಳೆಯುತ್ತದೆ ಸಾಮಾನ್ಯವಾಗಿ ಯಾವ ವ್ಯಕ್ತಿಯಲ್ಲಿ ರೋಗಧಕ ಶಕ್ತಿ ಕಡಿಮೆವಿರುತ್ತದೆ ಉದಾಹರಣೆಗೆ ಜೀವನ ಶೈಲಿಯ ರೋಗಗಳಾದ ಮಧುಮೇಹ,ರಕ್ತದೊತ್ತಡ, ಕ್ಯಾನ್ಸರ, ಕ್ಷಯರೋಗ,ಹೃದಯ ರೋಗ, ಸ್ತೂಲಕಾಯಗಳಿಂದ ಬಳಲುತ್ತಿರುವವರಲ್ಲಿ, ಹೆಪೆಟೈಟಿಸ್, ಏಡ್ಸ ದಿಂದ ಬಳಲುತ್ತಿರುವವರು ಹಾಗೂ ಯಾವುದೋ ಕಾರಣಗಳಿಂದ ಎಂಟಿವೈರಲ್ ಹಾಗೂ ಸ್ಟೀರಾಯ್ಡ ಔಷಧಿಗಳನ್ನು ಸೇವಿಸಿದ್ದರಿಂದ ರೋಗ ನಿರೋಧಕ ಶಕ್ತಿಗುಂದಿ ಮರಣಾಂತಿಕ ಬ್ಲ್ಯಾಕ ಫoಗಸ್ ಗೆ ತುತ್ತಾಗುತ್ತಿದ್ದಾರೆ ಹಾಗೂ ಇವರೇ ಈ  ಫoಗಸನ ಮೇನ ಟಾರ್ಗೆಟ್ ಇನ್ನು ಇತ್ತೀಚೆಗಷ್ಟೇ ಕೋವಿಡ್ ಸೋಂಕಿನಿಂದ ಚೇತರಿಸಿಕೊಂಡವರಲ್ಲಿ ಕೂಡ ಇದು ಮರಣ ಮೃದಂಗ ಬಾರಿಸುತ್ತಿದೆ.

ರೋಗ ಲಕ್ಷಣಗಳು : ರೋಗ ನಿರೋಧಕ ಶಕ್ತಿ ಕಡಿಮೆ ಇರುವ ಜನರಲ್ಲಿ ಸಾಮಾನ್ಯ ಶೀತ,ತಲೆ ನೋವು, ಜ್ವರ, ಮೈ ಕೈ ನೋವು, ಕಣ್ಣು ನೋವು. ಸೈನಸ್ ತೊಂದರೆ, ಮುಖದಲ್ಲಿ ಮರಗಟ್ಟಿದ ಅನುಭವ. ಮೂಗಿನಲ್ಲಿ ವಾಸನೆಯುಕ್ತ ಕಪ್ಪು ಸಿಂಬಳ, ಕಪ್ಪು – ಕಪ್ಪು ಹಕಳೆಗಳು ಆಗುತ್ತವೆ. ನಂತರ ಕಣ್ಣಿಗೂ ಪಸರಿಸಿ ದೃಷ್ಟಿದೋಷ ಕಾಣಿಸಿಕೊಂಡು ಮುಂದೆ ವೇಗವಾಗಿ ಸಂಪೂರ್ಣವಾಗಿ ಕುರುಡುತನ ಉಂಟಾಗಿ, ಸೋಂಕು ತೀವ್ರವಾಗಿ  ಮೆದುಳಿಗೆ  ಹಬ್ಬಿ ಗಂಭೀರ ರೂಪದ ತೊಡಕುಗಳುಂಟಾಗಿ ವ್ಯಕ್ತಿ ಮರಣ ಹೊಂದುವನು.

ಮುಂಜಾಗ್ರತಾ ಕ್ರಮಗಳು : ಹಳೆಯ ಗಾದೆ  Prevention Is Better Than Cure ಎಂಬಂತೆ ರೋಗ ನಿರೋಧಕ ಶಕ್ತಿ ಕಡಿಮೆಯುಳ್ಳವರು. ಬಹುಕಾಲದ ವ್ಯಾಧಿಗಳಿಂದ ಬಳಲುತ್ತಿರುವವರು. ಇದೀಗ ತಾನೇ ಕೋವಿಡನಿ೦ದ ಸೋಂಕಿನಿಂದ  ಗುಣಮುಖವಾದವರು ತಜ್ಞ ವೈದ್ಯರನ್ನು ಸಂಪರ್ಕಿಸಿ ಸಲಹೆ ಸೂಚನೆ ಪಡೆಯಬೇಕು ಆದಷ್ಟು ಹಸಿ ಮಣ್ಣು, ಹಸಿ ನೆಲ, ಹಸಿ ಗೋಡೆಗಳನ್ನು ಮುಟ್ಟಬೇಡಿ, ಗಿಡ-ಮರಗಳ ಮೇಲೆ ಕೈಯಾಡಿಸಬೇಡಿ, ಮೇಲಿಂದ ಮೇಲೆ ಬಿಸಿ ನೀರು. ಸೋಪು. ಅಲ್ಕೋಹಾಲ ಮಿಶ್ರಣದ ಸ್ಯಾನಿಟೈಸರಗಳಿಂದ ಕೈ-ಕಾಲು ತೊಳೆಯಬೇಕು ಮೇಲಿಂದ ಮೇಲೆ ಬಾಯಿ – ಮೂಗು – ಕಣ್ಣುಗಳನ್ನು ಮುಟ್ಟಿಕೊಳ್ಳಬೇಡಿ. ಕೈವಸ್ತ್ರ, ಮುಖ ಕವಚ – ಟಾವೆಲಗಳನ್ನು ಡೆಟಾಲ – ಸವಲಾನ ಬೆರೆಸಿದ ಸುಡುಬಿಸಿ ನೀರಿನಲ್ಲಿ ಹಾಕಿ ತೊಳೆದು ಬಿಸಿಲಿನಲ್ಲಿ ಒಣಗಿಸಿ ಉಪಯೋಗಿಸಬೇಕು. ಯಾವಗಲೂ ಜೀವನದಲ್ಲಿ ಧನಾತ್ಮಕವಾಗಿ ವಿಚಾರಧಾರೆಗಳಿರಬೇಕು. ಋಣಾತ್ಮಕವಾಗಿದ್ದರೂ ಕೂಡ ರೋಗ ನಿರೋಧಕ ಶಕ್ತಿ ಕುಂದುವದು. ಇಷ್ಟು ಮುನ್ನೆಚ್ಚರಿಕೆ ಕ್ರಮಗಳನ್ನು  ಅನುಸರಿಸಬೇಕು ಆದಾಗ ಮಾತ್ರ ಸೋಂಕಿನಿಂದ ದೂರ ಉಳಿಯಬಹುದು.

ಬಸವಣ್ಣನವರ ವಚನದಂತೆ “ಅಂಜಿದೆಡೆ ಮಾಣದು, ಅಳುಕಿದಡೆ ಮಾಣದು, ವಜ್ರ ಪಂಜರದೊಳಗಿದ್ದಡೆ ಮಾಣದು ತಪ್ಪದೋ, ಲಲಾಟಲಿಖಿತ, ಕಕ್ಕುಲತೆಗೆ   ಬಂದಡೆ ಆಗದು ನೋಡಾ, ಧ್ರತಿಗೆಟ್ಟು ಮನ ಧಾತುಗೆಟ್ಟಡೆ, ಅಪ್ಪುದು ತಪ್ಪದು. ಬಾರದು – ಬಪ್ಪದು ಬಪ್ಪದು  ತಪ್ಪದು. ಕೂಡಲಸಂಗಮದೇವಾ”

ಪ್ರೋ. ಡಾ. ರವಿ ಎಸ್ ಕೋಟೆಣ್ಣವರ. ಎಂ.ಡಿ. ಹೋಮಿಯೋ ಫಿಜೀಷಿಯನ್


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!