- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯವಿಪ ಚುನಾವಣೆ: 2 ನಾಮಪತ್ರ ತಿರಸ್ಕೃತ

ವಿಪ ಚುನಾವಣೆ: 2 ನಾಮಪತ್ರ ತಿರಸ್ಕೃತ

ವಿಜಯಪುರ: ಮಾನ್ಯ ಭಾರತ ಚುನಾವಣಾ ಆಯೋಗದ ಪತ್ರಿಕಾ ಹೇಳಿಕೆಯಂತೆ ದಿ.09 ರ ಪ್ರಕಾರ 03-ಬಿಜಾಪುರ ವಿಧಾನ ಪರಿಷತ್‍ಗೆ ಸ್ಥಳೀಯ ಸಂಸ್ಥೆಗಳಿಂದ ದೈವಾರ್ಷಿಕ ಚುನಾವಣೆ-2021 ಚುನಾವಣೆಗೆ ಇಂದು ಪರಿಶೀಲನೆ ನಡೆಸಲಾಗಿದ್ದು, ಸ್ವೀಕೃತವಾದ ಒಟ್ಟು 19 ನಾಮಪತ್ರಗಳಲ್ಲಿ (12 ಅಭ್ಯರ್ಥಿಗಳು) 17 ನಾಮಪತ್ರಗಳು ಕ್ರಮಬದ್ಧವಾಗಿರುತ್ತವೆ. ಅದರಂತೆ (1 ಅಭ್ಯರ್ಥಿಯ) 2 ನಾಮಪತ್ರಗಳು ತಿರಸ್ಕøತವಾಗಿರುತ್ತವೆ ಎಂದು ಚುನಾವಣಾಧಿಕಾರಿಗಳು ಹಾಗೂ ಜಿಲ್ಲಾಧಿಕಾರಿಗಳಾದ ಪಿ.ಸುನೀಲಕುಮಾರ್ ತಿಳಿಸಿದ್ದಾರೆ.

https://gadinaadakranti.com/yatnal-ramesh-jarakihioli-beti-for-discussion/

ಪಕ್ಷೇತರ ಅಭ್ಯರ್ಥಿಯಾಗಿದ್ದ ತುಳಸಪ್ಪ ಕರಿಯಪ್ಪ ದಾಸರ ಎಂಬುವವರ ನಾಮಪತ್ರ ತಿರಸ್ಕೃತಗೊಂಡಿದ್ದು, ಭಾರತ ಚುನಾವಣಾ ಆಯೋಗದ ಆದೇಶದ ಪ್ರಕಾರ ಅಭ್ಯರ್ಥಿಯು ಚುನಾವಣಾ ಆಯೋಗ ನಿಗದಿಪಡಿಸಿದ ಚುನಾವಣಾ ವೆಚ್ಚವನ್ನು ಸಲ್ಲಿಸದೆ  ಇರುವುದರಿಂದ  ಆದೇಶ ದಿನಾಂಕದಿಂದ ಮೂರು ವರ್ಷಗಳ ಕಾಲ ಚುನಾವಣೆಗೆ ಸ್ಪರ್ಧಿಸಲು ಅನರ್ಹಗೊಳಿಸಿರುತ್ತಾರೆ. ಕಾರಣ ಇವರ ನಾಮಪತ್ರವನ್ನು ತಿರಸ್ಕರಿಸಲಾಗಿದೆ. ಉಳಿದಂತೆ (12 ಅಭ್ಯರ್ಥಿಗಳು) 17 ನಾಮಪತ್ರಗಳು ಕ್ರಮಬದ್ಧವಾಗಿವೆ ಎಂದು ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!