- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯದೊಡ್ಡ ಅಂತರದಿಂದ ಗೆಲ್ಲುತ್ತೇವೆ. ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಸಿಎಂ ಬಿ ಎಸ್ ವೈ

ದೊಡ್ಡ ಅಂತರದಿಂದ ಗೆಲ್ಲುತ್ತೇವೆ. ವಿಶ್ವಾಸ ವ್ಯಕ್ತಪಡಿಸಿದ ಮಾಜಿ ಸಿಎಂ ಬಿ ಎಸ್ ವೈ

ವಿಜಯಪುರ: ವಾಯವ್ಯ ಶಿಕ್ಷಕರ ಮತಕ್ಷೇತ್ರ ಹಾಗೂ ಪದವೀಧರರ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗಳು (Vijayapura) ಎರಡು ಕ್ಷೇತ್ರದಲ್ಲಿ (mlc election campaign) ದೊಡ್ಡ ಅಂತರದಿಂದ ಗೆಲ್ಲಲಿದ್ದೇವೆ ಎಂದು ಎಂದು ಮಾಜಿ ಸಿಎಂ (BSY) ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ವಿಜಯಪುರ ‌(Vijayapura) ನಗರದಲ್ಲಿ‌ ಬಿಜೆಪಿ ಅಭ್ಯರ್ಥಿಗಳ ಪರ ಪ್ರಚಾರ ಮಾಡಲು ಆಗಮಿಸಿದ ವೇಳೆ ಮಾತನಾಡಿದ ಬಿಎಸ್ವೈ ವಾಯವ್ಯ ಶಿಕ್ಷಕರ ಮತ‌ಕ್ಷೇತ್ರದ ಅಭ್ಯರ್ಥಿ ಅರುಣ ಶಹಾಪೂರ ಪ್ರಚಾರಕ್ಕೆ ಬಂದಿದ್ದೇನೆ. ಇಂದು ಇಲ್ಲಿ ಪ್ರಚಾರ ಮಾಡಿ ಮತ್ತೆರಡು ಕ್ಷೇತ್ರಗಳಲ್ಲಿ ಪ್ರಚಾರ ಮಾಡುವೆ ಎಂದು ಹೇಳಿದರು.

ಚರ್ಚೆ ಮಾಡೋಕೆ ಇಷ್ಟಾ ಪಡಲ್ಲ: ಇದೇ ವೇಳೆ ಈದ್ಗಾ ಮೈದಾನದಲ್ಲಿ ರಾಷ್ಟ್ರ ಧ್ವಜ ಹಾರಿಸೋ ಆಕ್ಷೇಪ ವಿಚಾರವಾಗಿ ಮಾಧ್ಯಮದವರ ಪ್ರಶ್ನೆಗೆ ಯಡಿಯೂರಪ್ಪನವರು, ನಾನು ಆ‌ ಬಗ್ಗೆ ಚರ್ಚೆ ಮಾಡೋಕೆ ಇಷ್ಟಾ ಪಡಲ್ಲ.ಯಾರ ಮಾಡಬೇಕು ಅವರಿಗೆ ಸಂಬಂಧ ಪಟ್ಟಿದ್ದು. ನಾನು ಆ ಬಗ್ಗೆ ಟೀಕೆ ಟಿಪ್ಪಣಿ ಮಾಡಲ್ಲ ಎಂದು ನಿರಾಕರಿಸಿದರು.

ಸಿದ್ದರಾಮಯ್ಯ ಬೇಟಿ ಬಗ್ಗೆ ಸ್ಪಷ್ಟನೆ: ಸಿದ್ದರಾಮಯ್ಯ ಹಾಗೂ ತಮ್ಮ ಭೇಟಿ ವಿಚಾರವಾಗಿ ಸ್ಪಷ್ಟನೆ ನೀಡಿದ ಬಿಎಸ್ವೈ, ನಾನು ಸಿದ್ದರಾಮಯ್ಯ ಭೇಟಿಯಾಗಿಲ್ಲ. ಏರ್ ಪೋರ್ಟ್ ನಲ್ಲಿ ನಾನು ಒಂದು ಕಡೆ ಹೊರಟಿದ್ದೆ, ಅವರೊಂದು ಕಡೆ ಹೊರಟಿದ್ದರು. ಒಟ್ಟಿಗೆ ಕುಳಿತಿದ್ದೇವಷ್ಟೇ, ವಿಶೇಷತೆ ಏನಿಲ್ಲ, ಬೇರೆ ಯಾವುದೇ ಮಾತುಕತೆ ಆಗಿಲ್ಲ. ರಾಜಕೀಯ ಚರ್ಚೆ ಇಲ್ಲಾ ಎಂದ ಬಿಎಸ್ವೈ, ಅವರ ಜೊತೆ ಏನು ಮಾತಾಡೋದು‌, ನಮ್ಮ ವಿರೋಧಿಗಳ ಜೊತೆ ನಾವೇನು  ಚರ್ಚೆ ಮಾಡೋದಿದೆ ಎಂದು ಸ್ಪಷ್ಟನೆ ನೀಡಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!