- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಇದೇನಾ ಆರ್.ಎಸ್.ಎಸ್  ಸಂಸ್ಕೃತಿ..? ಸರ್ಕಾರದ ವಿರುದ್ಧ ಹೆಚ್.ಡಿ.ಕೆ ಕಿಡಿ

ಇದೇನಾ ಆರ್.ಎಸ್.ಎಸ್  ಸಂಸ್ಕೃತಿ..? ಸರ್ಕಾರದ ವಿರುದ್ಧ ಹೆಚ್.ಡಿ.ಕೆ ಕಿಡಿ

ವಿಜಯಪುರ: ದೇಶದಲ್ಲಿ 70 ವರ್ಷಗಳ ಕಾಲ ಸಂಸ್ಕ್ರತಿ ಇರಲಿಲ್ಲವಾ, ಆರ್.ಎಸ್.ಎಸ್ ನವರು ಸಂಸ್ಕೃತಿ ಉಳಿಸುತ್ತಿದ್ದಾರಾ? (School Syllabus Issue) ಮಕ್ಕಳಲ್ಲಿ ದ್ವೇಷದ ರಾಜಕಾರಣ, ಸಹೋದರ ಭಾತೃತ್ವ ಹಾಳು ಮಾಡುವ ವಾತಾವರಣ ಮಾಡಿದ್ದಾರೆ ಎಂದು (Vijayapura) ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ (H D Kumaraswamy)  ಬಿಜೆಪಿ ಸರ್ಕಾರದ ವಿರುದದ್ಧ ಕಿಡಿ ಕಾರಿದರು.

ಆರ್ ಎಸ್ ಎಸ್ ನಿಂದ ದೇಶದಲ್ಲಿ ಸಂಸ್ಕ್ರತಿ ಉಳಿದಿದೆ ಎಂಬ ಬಿಜೆಪಿ ನಾಯಕರ ಹೇಳಿಕೆ ವಿಚಾರವಾಗಿ ವಿಜಯಪುರ (Vijayapura) ನಗರದಲ್ಲಿ ಪ್ರತಿಕ್ರಿಯಿಸಿದ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಅವರು, ಧರ್ಮದ ಹೆಸರಿನಲ್ಲಿ ಶಾಲಾ ಪಠ್ಯ ಪುಸ್ತಕದಲ್ಲಿ ಗೊಂದಲ ಸೃಷ್ಠಿ ಮಾಡಿದ್ದಾರೆ. ಇದರಿಂದಾಗಿ ಪೋಷಕರು ಮಕ್ಕಳಿಗೆ ಶಾಲೆಗೆ ಕಳುಹಿಸಲು ಆತಂಕ ಪಡುವಂತಹ ವಾತಾವರಣ ಇದೆ. ಇದು ಆರ್ ಎಸ್ ಎಸ್ ಸಂಸ್ಕ್ರತಿನಾ ಬಿಜೆಪಿ ಸಂಸ್ಕ್ರತಿನಾ? ಎಂದು ಪ್ರಶ್ನಿಸಿದರು.

ಇದೆಲ್ಲ ಜನತೆಗೆ ಹೇಳಬೇಕಲ್ಲ, ಇವರಿಂದ ನಾವು ಸಂಸ್ಕೃತಿ ಕಲಿಯಬೇಕಿಲ್ಲ, ಈ ಸರ್ಕಾರ ನಡೆಸುವರು ಖಜಾನೆ ಲೂಟಿ ಮಾಡುತ್ತಿದ್ದಾರೆ. ಕೈ ಯಿಂದ ಲೂಟಿ ಮಾಡುತ್ತಿಲ್ಲ, ಹಿಟ್ಯಾಚಿಯಿಂದ ಸರ್ಕಾರದ ಸಂಪತ್ತು ತೆಗೆದುಕೊಳ್ಳುತ್ತಿದ್ದಾರೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!