- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಮೂವರು ಮಕ್ಕಳೊಂದಿಗೆ ಹೊಂಡಕ್ಕೆ ಹಾರಿ ಮಹಿಳೆ ಆತ್ಮಹತ್ಯೆ

ಮೂವರು ಮಕ್ಕಳೊಂದಿಗೆ ಹೊಂಡಕ್ಕೆ ಹಾರಿ ಮಹಿಳೆ ಆತ್ಮಹತ್ಯೆ

(Vijayapura Crime) ಮೂವರು ಮಕ್ಕಳನ್ನು (Three Chiildrens) ಮೊದಲು ಹೊಂಡದಲ್ಲಿ ಎಸೆದು, ನಂತರ ಮಹಿಳೆ ತಾನೂ ಕೂಡಾ ಹೊಂಡಕ್ಕೆ ಹಾರಿ ಆತ್ಮಹತ್ಯೆ (Suicide) ಮಾಡಿಕೊಂಡಿದ್ದಾಳೆ.

ವಿಜಯಪುರ: ಕೌಟುಂಬಿಕ ಕಲಹದಿಂದ ಬೇಸತ್ತ ಮಹಿಳೆ ತೋಟದಲ್ಲಿನ ಕೃಷಿ ಹೊಂಡಕ್ಕೆ ಮೂವರು ಮಕ್ಕಳನ್ನು ಎಸೆದು ನಂತರ ತಾನೂ ಕೃಷಿ ಹೊಂಡಕ್ಕೆ ಹಾರಿ ಆತ್ಮಹತ್ಯೆ ಮಾಡಿಕೊಂಡ ದಾರುಣ ಘಟನೆ ವಿಜಯಪುರ (Vijayapura Crime) ಜಿಲ್ಲೆಯಲ್ಲಿ ನಡೆದಿದೆ.

ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ತೊರವಿ ತಾಂಡಾ 1 ರ ಹೊರ ಭಾಗದಲ್ಲಿನ ತೋಟದಲ್ಲಿ ಈ ದುರ್ಘಟನೆ ನಡೆದಿದೆ. ತೊರವಿ ತಾಂಡಾ1 ರ ನಿವಾಸಿ ಅನಿತಾ ಪಿಂಟು ಜಾಧವ್ (27) ಮೂವರು ಮಕ್ಕಳನ್ನು ಕೃಷಿ ಹೊಂಡಕ್ಕೆ ಎಸೆದು ತಾನೂ ಆತ್ಮಹತ್ಯೆ ಮಾಡಿಕೊಂಡ ಮಹಿಳೆ. ಪತಿ ಅನಿಲ್ ಹಾಗೂ ಅನಿತಾ ಮಧ್ಯೆ ಜಗಳ ಆಗುತ್ತಂತೆ. ಇದರಿಂದ ಬೇಸತ್ತ ಅನಿತಾ ಇಂದು ತಮ್ಮ ತೋಟದ ಸಮೀಪದ ಸಂಬಂಧಿಕರ ಕೃಷಿ ಹೊಂಡದತ್ತ ತನ್ನ ಮೂವರು ಮಕ್ಕಳನ್ನು ಕರೆದುಕೊಂಡು ಹೋಗಿದ್ಧಾಳೆ. ಕೃಷಿ ಹೊಂಡದಲ್ಲಿ ಮೂರು ಮಕ್ಕಳನ್ನು ಎಸೆದು ನಂತರ ತಾನೂ ಹೊಂಡದಲ್ಲಿ ಹಾರಿದ್ದಾಳೆ.

More Read: ನೂತನ ಲೋಕಾಯುಕ್ತ ಬಿ.ಎಸ್.ಪಾಟೀಲರಿಗೆ ಅಭಿನಂದನೆ ಸಲ್ಲಿಸಿದ ಶಾಸಕ ಯತ್ನಾಳ್

ಅನಿತಾಳ ಮಕ್ಕಳಾದ ಪ್ರವೀಣ (6) ಸುದೀಪ್ (4) ಮಮದಿಕಾ (2) ತಾಯಿ ಕೈಯ್ಯಿಂದಲೇ ಸಾವನ್ನಪ್ಪಿದ್ದಾರೆ. ನಾಲ್ವರು ಕೃಷಿ ಹೊಂಡದಲ್ಲಿ ಬಿದ್ದಿದ್ದು ಗಮನಕ್ಕೆ ಬಂದ ಕೂಡಲೇ ನೋಡಲಾಗಿದೆ ನಾಲ್ವರು ಮೃತಪಟ್ಟಿದ್ದಾರೆ. ಅನಿತಾಳ ಪತಿ ಹಾಗೂ ಅತ್ತೆ ಮಾವರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದು ನೋಡುವಷ್ಟರಲ್ಲಿ ಅನಿತಾ ಹಾಗೂ ಮೂವರು ಮಕ್ಕಳು ಇಹಲೋಕ ತ್ಯಜಿಸಿದ್ದಾರೆ.

ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ವಿಜಯಪುರ ಗ್ರಾಮೀಣ ಪೊಲೀಸ್ ಠಾಣೆಯ ಪಿಎಸ್ಐ ಉಪ್ಪಾರ (Vijayapura Crime) ಹಾಗೂ ಇತರೆ ಸಿಬ್ಬಂದಿ ಶವಗಳನ್ನು ಸ್ಥಳಿಯರ ಸಹಾಯದಿಂದ ಮೇಲಕ್ಕೆ ತೆಗೆಸಿದ್ದಾರೆ. ಮರಣೊತ್ತರ ಪರೀಕ್ಷೆಗೆ ಶವಗಳನ್ನು ಜಿಲ್ಲಾ ಆಸ್ಪತ್ರೆಗೆ ರವಾನೆ ಮಾಡಿದ್ದಾರೆ.

ಸ್ಥಳಕ್ಕೆ ಡಿವೈಎಸ್ಪಿ ಲಕ್ಷ್ಮೀನಾರಾಯಣ, ಎಸ್ಪಿ ಆನಂದಕುಮಾರ ಭೇಟಿ ನೀಡಿ ಮಾಹಿತಿ ಪಡೆದಿದ್ದಾರೆ. ಮೇಲ್ನೋಟಕ್ಕೆ ಕೌಟುಂಬಿಕ ಕಲಹ ಎಂದು ತಿಳಿದು ಬಂದಿದೆ. ತನಿಖೆಯ ಬಳಿಕ ಘಟನೆಗೆ ನಿಖರ ಕಾರಣವೇನು ಎಂಬುದು ತಿಳಿದು ಬರಲಿದೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!