- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಆತ್ಮಹತ್ಯೆ ಪ್ರಕರಣ. ವಿಜಯಪುರ ಪೊಲೀಸರಿಂದ ಮೂವರು ಆರೋಪಿಗಳ ಬಂಧನ

ಆತ್ಮಹತ್ಯೆ ಪ್ರಕರಣ. ವಿಜಯಪುರ ಪೊಲೀಸರಿಂದ ಮೂವರು ಆರೋಪಿಗಳ ಬಂಧನ

ವಿಜಯಪುರ: ಮೂರು ಮಕ್ಕಳೊಂದಿಗೆ ಕೃಷಿ ಹೊಂಡಕ್ಕೆ ಹಾರಿ ತಾಯಿ (Sucide) ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಜಯಪುರ (Vijayapura Crime) ಗ್ರಾಮೀಣ ಠಾಣೆ ಪೊಲೀಸರು (Police) ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಮೃತಳ ಪತಿ ಪಿಂಟೂ ಜಾಧವ್, ಮಾವ ಧರ್ಮು ಜಾಧವ್ ಹಾಗೂ ಮೈದುನ ವಿಠಲ್ ಜಾಧವ್ ಬಂಧಿತ ಆರೋಪಿಗಳು. ಕೌಟುಂಬಿಕ ಕಲಹದಿಂದಾಗಿ ಪಿಂಟೂ ಪತ್ನಿ ಅನಿತಾಗೆ ಕಿರುಕುಳ‌‌ ನೀಡಿದ್ದರು. ಇದರಿಂದಾಗಿ ಆಕೆ ಕೃಷಿ ಹೊಂಡಕ್ಕೆ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದಳು.

ಎರಡು ದಿನಗಳ ಹಿಂದೆ ಜೂನ್ 15 ನೇ ತಾರೀಖು ಸಂಜೆ ವಿಜಯಪುರ ‌ಜಿಲ್ಲೆ ತಿಕೋಟಾ ತಾಲೂಕಿನ ತೊರವಿ ತಾಂಡಾ 1 ರ ತೋಟದಲ್ಲಿ ಘಟನೆ ನಡೆದಿತ್ತು. ಅನಿತಾ ಪಿಂಟು ಜಾಧವ್ (27) ಮೂರು ಮಕ್ಕಳಾದ ಪ್ರವೀಣ (6) ಸುದೀಪ (4) ಮಮದಿಕಾ (2) ಜೊತೆ ಸಾವಿಗೆ ಶರಣಾಗಿದ್ದಳು. ಆರೋಪಿಗಳ‌ ವಿರುದ್ಧ ಆತ್ಮಹತ್ಯೆಗೆ ಪ್ರಚೋದನೆ ಹಾಗೂ ಕಿರುಕುಳ ಪ್ರಕರಣವನ್ನು ವಿಜಯಪುರ ಗ್ರಾಮೀಣ ಠಾಣೆ ಪೊಲೀಸರು ದಾಖಲಿಸಿದ್ದಾರೆ.‌

ಅಲ್ಲದೆ‌ ಮೃತ ಮಹಿಳೆ ಅನಿತಾ ವಿರುದ್ಧವೂ‌ ಪೊಲೀಸರು ಒಂದು ಕೇಸ್ ದಾಖಲಿಸಿದ್ದಾರೆ. ಅನಿತಾ ಸಾಯುವ ಮುನ್ನ ಮಕ್ಕಳನ್ನು ನೀರಿಗೆ ಹಾಕಿ ಕೊಲೆ ಮಾಡಿದ ಆರೋಪದಡಿ ಕೇಸ್ ದಾಖಲು‌‌ ಮಾಡಲಾಗಿದೆ. ಪ್ರಕರಣ ಸಂಬಂಧ ಇನ್ನಿಬ್ಬರು ಆರೋಪಿಗಳನ್ನ ಶೀಘ್ರದಲ್ಲೇ ಬಂಧಿಸುವುದಾಗಿ ಎಸ್ ಪಿ ಆನಂದಕುಮಾರ್ ಮಾಹಿತಿ ನೀಡಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!