- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಿಜೆಪಿ ಕಾರ್ಯಕರ್ತರ ಜಟಾಪಟಿ

ಬಿಜೆಪಿ ಕಾರ್ಯಕರ್ತರ ಜಟಾಪಟಿ

ಬಸವನಬಾಗೇವಾಡಿ: ಬಿಜೆಪಿ (Vijayapura BJP) ರಾಜ್ಯಾಧ್ಯಕ್ಷರ ಎದುರಿಗೆ ಇಬ್ಬರು ನಾಯಕರುಗಳ ಕಾರ್ಯಕರ್ತರಿಂದ ಜಟಾಪಟಿ ನಡೆದ ಘಟನೆ (Basavana Bagewadi) ಬಸವನಬಾಗೇವಾಡಿಯಲ್ಲಿ ನಡೆದಿದೆ.

ವಿಜಯಪುರ ‌ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ಬಿಜೆಪಿ ಕಾರ್ಯಕರ್ತರ ಸಮಾವೇಶ ಕಾರ್ಯಕ್ರಮದಲ್ಲಿ, ಬಿಜಿಪಿ ರಾಜಾಧ್ಯಕ್ಷ ನಳಿನಕುಮಾರ್ ಕಟೀಲ್ (Nalinkumar Katil) ಸಮ್ಮುಖದಲ್ಲಿ ಗಲಾಟೆ ನಡೆದಿದೆ.

Watch Video :

ಮಂಡಲ ಕಾರ್ಯಕಾರಣಿ ಸಭೆಯಲ್ಲಿ ಒಂದೇ ಪಕ್ಷದ ಇಬ್ಬರು ನಾಯಕರು ವೇದಿಕೆಯ ಮೇಲೆ ಉಪಸ್ಥಿತರಿದ್ದರು. ತಮ್ಮ ನಾಯಕರಿಗೆ ಟಿಕೆಟ್ ಗಾಗಿ ಕಾರ್ಯಕರ್ತರು ಲಾಬಿ ನಡೆಸಿದರು.

ಮಾಜಿ ಸಚಿವ ಎಸ್.ಕೆ ಬೆಳ್ಳುಬ್ಬಿ ಹಾಗೂ ಮುಖಂಡ ಅಪ್ಪುಗೌಡ ಪಾಟೀಲ್ ನಡುವೆ ಲಾಬಿ ನಡೆಯಿತು. ತಮ್ಮ ನಾಯಕರಿಗೆ ಟಿಕೆಟ್ ನೀಡುವಂತೆ ಕಾರ್ಯಕರ್ತರು ಪಟ್ಟು ಹಿಡಿದರು.

ವೇದಿಕೆ ಮೇಲೆ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಟಿಕೆಟ್ ವಿಷಯ ಪ್ರಸ್ತಾಪಿಸಿದರು. ನಂತರ ಕಾರ್ಯಕರ್ತರು ಪಟ್ಟು ಹಿಡಿದರು.

ಇದರಿಂದಾಗಿ ಕೆಲ ಹೊತ್ತು ಗೊಂದಲದ ವಾತಾವರಣ ಉಂಟಾಯಿತು. ವೇದಿಕೆಯಿಂದ ಮುಖಂಡ ಅಪ್ಪುಗೌಡ ಪಾಟೀಲ ಕೆಳಗಿಳಿದರು.

ಈ ಇಬ್ಬರು ನಾಯಕರ ಕಾರ್ಯಕರ್ತರ ನಡುವೆ ಜಟಾಪಟಿ (Vijayapura BJP) ನಡೆಯುತ್ತಿದ್ದಂತೆಯೇ ಪೊಲೀಸರು ವಾತಾವರಣ ತಿಳಿಗೊಳಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!