- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯವಿಜಯಪುರ ಜಿಲ್ಲೆಯಲ್ಲಿ ಶೇ.99.87 ರಷ್ಟು ಮತದಾನ

ವಿಜಯಪುರ ಜಿಲ್ಲೆಯಲ್ಲಿ ಶೇ.99.87 ರಷ್ಟು ಮತದಾನ

ವಿಜಯಪುರ : ಅವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ವಿಧಾನ ಪರಿಷತ್ ಚುನಾವಣೆಗೆ ಶುಕ್ರವಾರ ನಡೆದ ಮತದಾನದಲ್ಲಿ ವಿಜಯಪುರ ಜಿಲ್ಲೆಯಲ್ಲಿ ಒಟ್ಟು ಶೇ.99.87 ರಷ್ಟು ಮತದಾನವಾಗಿದೆ.

 ಪರಿಷತ್ ಚುನಾವಣೆಯು ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆವರೆಗೆ ಶಾಂತಿಯುತವಾಗಿ ಮತದಾನ ನಡೆದಿದೆ. ಜಿಲ್ಲೆಯಾದ್ಯಂತ 208 ಮತಗಟ್ಟೆಗಳನ್ನು ಸ್ಥಾಪಿಸಲಾಗಿದ್ದು, ಒಟ್ಟು 3931 ಮತದಾರರ ಪೈಕಿ 1849 ಪುರುಷ ಮತದಾರರು ಹಾಗೂ 2082 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

https://gadinaadakranti.com/surrender-to-a-private-bank-employee/

ಜಿಲ್ಲೆಯ ವಿಜಯಪುರ, ಬ.ಬಾಗೇವಾಡಿ, ಮುದ್ದೇಬಿಹಾಳ, ಇಂಡಿ, ಸಿಂದಗಿ, ಆಲಮೇಲ, ಬಬಲೇಶ್ವರ, ತಿಕೋಟಾ, ನಿಡಗುಂದಿ, ಕೋಲ್ಹಾರ, ತಾಳಿಕೋಟಿ, ಚಡಚಣ, ದೇ.ಹಿಪ್ಪರಗಿಗಳನ್ನೊಳಗೊಂಡು ಒಟ್ಟು ಶೇ.99.87 ರಷ್ಟು ಮತದಾನವಾಗಿದೆ.

 ವಿಜಯಪುರ ತಾಲೂಕಿನಲ್ಲಿ 165 ಪುರುಷರು ಹಾಗೂ 189 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಅದರಂತೆ ಬ.ಬಾಗೇವಾಡಿಯಲ್ಲಿ 161 ಪುರುಷರು ಹಾಗೂ 180 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಮುದ್ದೇಬಿಹಾಳದಲ್ಲಿ 172 ಪುರುಷರು ಹಾಗೂ 195 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

https://gadinaadakranti.com/what-is-life-do-you-know-who-that-patriot-of-vijayapur-is/

ಇಂಡಿಯಲ್ಲಿ 320 ಪುರುಷರು ಹಾಗೂ 373 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಸಿಂದಗಿ ಮತ್ತು ಆಲಮೇಲದಲ್ಲಿ 208 ಪುರುಷರು ಹಾಗೂ 242 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಬಬಲೇಶ್ವರದಲ್ಲಿ 143 ಪುರುಷರು ಹಾಗೂ 155 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ತಿಕೋಟಾದಲ್ಲಿ 138 ಪುರುಷರು ಹಾಗೂ 148 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.

 ನಿಡಗುಂದಿಯಲ್ಲಿ 76 ಪುರುಷರು ಹಾಗೂ 92 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಕೋಲ್ಹಾರದಲ್ಲಿ 71 ಪುರುಷರು ಹಾಗೂ 73 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ತಾಳಿಕೋಟಿಯಲ್ಲಿ 137 ಪುರುಷರು ಹಾಗೂ 149 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ಚಡಚಣದಲ್ಲಿ 140 ಪುರುಷರು ಹಾಗೂ 149 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ. ದೇ.ಹಿಪ್ಪರಗಿಯಲ್ಲಿ 118 ಪುರುಷರು ಹಾಗೂ 137 ಮಹಿಳಾ ಮತದಾರರು ಮತ ಚಲಾಯಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!