- Advertisement -Newspaper WordPress Theme
ಆರೋಗ್ಯಉತ್ತಮ ಆರೋಗ್ಯಕ್ಕೆ ಬಾದಾಮಿ ಬಳಸಿ

ಉತ್ತಮ ಆರೋಗ್ಯಕ್ಕೆ ಬಾದಾಮಿ ಬಳಸಿ

ಉತ್ತಮ ಆರೋಗ್ಯಕ್ಕಾಗಿ ಹಲವಾರು ಒಣ ಕಾಳುಗಳನ್ನು ತಿನ್ನಬೇಕು.  ಬಹುತೇಕ ಎಲ್ಲ ಬಗೆಯ ಒಣ ಕಾಳುಗಳ ಪೈಕಿ ಪ್ರಮುಖವಾದದ್ದು ಎಂದರೆ ಬಾದಾಮಿ. ಇದು ಅತ್ಯಂತ ಪೌಷ್ಟಿಕಾಂಶಗಳನ್ನು ಒಳಗೊಂಡಿದ್ದು ಆರೋಗ್ಯಕ್ಕೆ ತುಂಬಾ ಉತ್ತಮವಾಗಿದೆ.

ಇದರ ಎಲ್ಲ ಪೌಷ್ಟಿಕಾಂಶಗಳ ಉತ್ತಮ ಉಪಯೋಗ ಪಡೆಯಬೇಕಾದರೆ ಬಾದಾಮಿಯನ್ನು ನೀರಿನಲ್ಲಿ ನೆನೆಸಿ ಸಿಪ್ಪೆಯನ್ನು ತೆಗೆದು ಉಪಯೋಗಿಸಬೇಕು. ಮಧ್ಯ ಪೂರ್ವ, ದಕ್ಷಿಣ ಏಷ್ಯಾ, ಹಾಗೂ ಉತ್ತರ ಆಫ್ರಿಕಾ ಖಂಡದ ಭಾಗಗಳು ಬಾದಾಮಿ ಕಾಳುಗಳ ತವರು ಭೂಮಿಯಾಗಿವೆ.

ಬಾದಾಮಿ ಬೀಜಗಳಲ್ಲಿ ಪ್ರೋಟೀನ್‌ಗಳು, ಖನಿಜಗಳು, ಫೋಲಿಕ್ ಆಮ್ಲ, ವಿಟಮಿನ್ ಈ, ಬಿ-17, ಓಮೇಗಾ – 3 ಹಾಗೂ ಓಮೇಗಾ – 6 ಕೊಬ್ಬಿನಾಮ್ಲಗಳಿವೆ.

More Read: ಸಿಹಿಗಾಗಿ ಸಕ್ಕರೆ ಬದಲು ಇದನ್ನು ಬಳಸಬಹುದು…!

ಇದರ ಉಪಯೋಗಗಳು ಹತ್ತಾರು ಇವೆ. ಅವುಗಳೆಂದರೆ, ಬಾದಾಮಿಯಲ್ಲಿರುವಂತಹ ಪ್ರೋಟೀನ್‌ಗಳು ಮೆದುಳಿಗೆ ಶಕ್ತಿಯನ್ನು ಒದಗಿಸುವುದು. ಇದು ಮೆದುಳಿನ ಜ್ಞಾನದ ಕ್ರಿಯೆಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತದೆ.  ನೆನಪಿನ ಶಕ್ತಿಯ ಸಾಮರ್ಥ್ಯವನ್ನು ವೃದ್ಧಿಸಲು ನೆರವಾಗುವುದು.  ಖನಿಜಾಂಶವಾಗಿರುವ ಸತು ಇದರಲ್ಲಿದ್ದು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ ಮೆದುಳಿನ ಆರೋಗ್ಯವನ್ನು ಹೆಚ್ಚಿಸುವುದು.

ವಿಟಮಿನ್ ಈ ಮತ್ತು ಬಿ-17 ಅಂಶವು ಕ್ಯಾನ್ಸರ್ ಬರದಂತೆ ತಡೆಗಟ್ಟುತ್ತವೆ. ಮಧುಮೇಹ ಹಾಗೂ ರಕ್ತದೊತ್ತಡ ನಿಯಂತ್ರಿಸುವ ಮೆಗ್ನೀಷಿಯಂ ಅಂಶವನ್ನು ಹೆಚ್ಚಿಸುತ್ತದೆ. ಫೋಲಿಕ್ ಆಮ್ಲವು ಜನನ ದೋಷದ ಪ್ರಮಾಣ ತಗ್ಗಿಸಿ ಗರ್ಭಿಣಿಯರ ರಕ್ಷಾಕವಚವಾಗಿ ಕಾರ್ಯ ನಿರ್ವಹಿಸುತ್ತದೆ. ಹೃದ್ರೋಗವನ್ನು ತಡೆಗಟ್ಟುತ್ತದೆ.  ನೆನೆಸಿಟ್ಟ ಬಾದಾಮಿಯು ತೂಕವಿಳಿಸಲು ಸಹಾಯ ಮಾಡುತ್ತವೆ.ಅನಾರೋಗ್ಯಕರ ಕೊಬ್ಬನ್ನು ಕಡಿಮೆ ಮಾಡುತ್ತದೆ.

ಲೈಪೇಸ್ ಎಂಬ ಕಿಣ್ವ ಬಿಡುಗಡೆ ಮಾಡಿ ಕೊಬ್ಬಿನಂಶ ಚೆನ್ನಾಗಿ ಜೀರ್ಣಕ್ರೀಯೆಯಾಗುವಂತೆ ನೋಡಿಕೊಳ್ಳುತ್ತದೆ. ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೆಂಬಂತೆ ದೇಹಕ್ಕೆ ಶಕ್ತಿ ಕೊಟ್ಟು ಹಲವು ರೀತಿಯಲ್ಲಿ ಆರೋಗ್ಯವನ್ನು ಕಾಪಾಡುತ್ತದೆ.


LEAVE A REPLY

Please enter your comment!
Please enter your name here

Subscribe Today

GET EXCLUSIVE FULL ACCESS TO PREMIUM CONTENT

SUPPORT NONPROFIT JOURNALISM

EXPERT ANALYSIS OF AND EMERGING TRENDS IN CHILD WELFARE AND JUVENILE JUSTICE

TOPICAL VIDEO WEBINARS

Get unlimited access to our EXCLUSIVE Content and our archive of subscriber stories.

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!