- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಯುಪಿಎಸ್‌ಸಿಯಲ್ಲಿ ೧೩೯ ನೇ ರ‍್ಯಾಂಕ್. ಅನುಪಮ ಸಾಧನೆಗೈದ ಬಸವನಾಡಿನ ನಿಖಿಲ್

ಯುಪಿಎಸ್‌ಸಿಯಲ್ಲಿ ೧೩೯ ನೇ ರ‍್ಯಾಂಕ್. ಅನುಪಮ ಸಾಧನೆಗೈದ ಬಸವನಾಡಿನ ನಿಖಿಲ್

ವಿಜಯಪುರ: ಯುಪಿಎಸ್‌ಸಿ (upsc karnataka topper 2021 list) ಪರೀಕ್ಷೆಯಲ್ಲಿ ಬಸವನಾಡಿನ (Vijayapura) ಗ್ರಾಮೀಣ ಪ್ರತಿಭೆ ೧೩೯ ನೇ ರ‍್ಯಾಂಕ್ ಗಿಟ್ಟಿಸುವ ಮೂಲಕ ಅನುಪಮ ಸಾಧನೆ ತೋರಿದ್ದದಾನೆ (Nikhil Patil).

ವಿಜಯಪುರ ಜಿಲ್ಲೆಯ ತಾಳಿಕೋಟೆಯ ಗ್ರಾಮೀಣ ಬಾಗದ ನಿಖಿಲ ಪಾಟೀಲ ೧೩೯ ನೇ ರ‍್ಯಾಂಕ್ ಪಡೆಯುವ ಮೂಲಕ ಯುಪಿಎಸ್‌ಸಿಯಲ್ಲಿ ಸಾಧನೆಗೈದಿದ್ದಾನೆ.

ನಿಖಿಲ್ ಅವರ ತಂದೆ ಸಕ್ಕರೆ ಕಾರ್ಖಾನೆಯಲ್ಲಿ ಕರ್ತವ್ಯ ನಿರ್ವಹಣೆ ಮಾಡುತ್ತಿದ್ದರಿಂದ ನಿಖಿಲ್ ಗೋಕಾಕ್‌ನಲ್ಲಿ ನೆಲೆಸಿದ್ದರು. ಪ್ರಾಥಮಿಕ ಶಿಕ್ಷಣ ಗೋಕಾಕ್‌ನಲ್ಲಿಯೇ ಪೂರೈಸಿ, ಪ್ರೌಢ ಹಾಗೂ ಕಾಲೇಜು ಶಿಕ್ಷಣವನ್ನು ದಕ್ಷಿಣ ಕನ್ನಡ ಜಿಲ್ಲೆಯ ಅಳಿಕೆ ಶ್ರೀ ಸತ್ಯಸಾಯಿ ವಸತಿ ಶಾಲೆಯಲ್ಲಿ ಪೂರೈಸಿದರು. ಪಿ.ಇ.ಎಸ್.ಐ.ಟಿ. ಇಂಜನಿಯರಿಂಗ್ ಮಹಾವಿದ್ಯಾಲಯದಿಂದ ಬಿ.ಇ. ಪದವಿಯನ್ನು ಪೂರೈಸಿದ್ದಾರೆ (upsc karnataka topper 2021 list).

ನಿಖಿಲ್ ಬಾಲ್ಯದಲ್ಲಿಯೇ ಎಐಎಸ್ ಅಧಿಕಾರಿಯಾಗಬೇಕು ಎಂದು ಕನಸು ಕಂಡಿದ್ದರು, ನಾಲ್ಕು ಬಾರಿಯ ಪ್ರಯತ್ನಕ್ಕೆ, ಕೊನೆಗೂ ಯಶಸ್ಸು ದೊರಕಿತು. ನವದೆಹಲಿಯ ವಾಜಿರಾಮ್ ತರಬೇತಿ ಕೇಂದ್ರದಲ್ಲಿ ತರಬೇತಿ ಪಡೆದ ನಿಖಿಲ್ ಈಗ ೧೩೯ ನೇ ರ‍್ಯಾಂಕ್ ಪಡೆದು ಯಶಸ್ಸಿನ ನಗೆ ಬೀರಿದ್ದಾರೆ.

ಸಾಮಾನ್ಯ ದಿನಗಳಲ್ಲಿ ೮ ತಾಸು ಅಧ್ಯಯನ ಮಾಡುತ್ತಿದ್ದೆ. ಪರೀಕ್ಷೆ ಹತ್ತಿರವಾದಾಗ ಸರಿಸುಮಾರು ೧೨ ಗಂಟೆ ಅಧ್ಯಯನಕ್ಕೆ ಮೀಸಲಿರಿಸಿದೆ. ಶ್ರದ್ಧೆಯಿಂದ ಕೂಡಿದ ಅಧ್ಯಯನವೇ ಯಶಸ್ಸಿನ ಸೂತ್ರವಾಗಿದೆ, ಗುರಿ ಸ್ಪಷ್ಟವಾಗಿತ್ತು, ಅಧ್ಯಯನ ಶ್ರದ್ಧೆಯಿಂದ ಕೂಡಿತ್ತು ಎಂದು ಸಾಧಕ ನಿಖಿಲ್ ಅನುಭವ ಹಂಚಿಕೊಂಡಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!