- Advertisement -Newspaper WordPress Theme
ಪ್ರಮುಖ ಸುದ್ದಿಗಳುಪ್ರಾದೇಶಿಕವಕೀಲೆ ಸಂಗೀತಾ ಶಿಕ್ಕೇರಿ‌ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್

ವಕೀಲೆ ಸಂಗೀತಾ ಶಿಕ್ಕೇರಿ‌ ಮೇಲೆ ಹಲ್ಲೆ ಪ್ರಕರಣಕ್ಕೆ ಟ್ವಿಸ್ಟ್

ಬಾಗಲಕೋಟೆ: ನಗರದಲ್ಲಿ ವಕೀಲೆ ಸಂಗೀತಾ ಶಿಕ್ಕೇರಿ‌ ಮೇಲಿನ ಹಲ್ಲೆ ಪ್ರಕರಣ ಇದೀಗ ಬಿಗ್ ಟ್ವಿಸ್ಟ್ ಪಡೆದುಕೊಂಡಿದೆ.

ಸಾಮಾಜಿಕ ಜಾಲತಾಣದಲ್ಲಿ ಮತ್ತಷ್ಟು ಹಲ್ಲೆಯ ಘಟನೆಯ ಸಂಭಂದಿತ ವಿಡಿಯೋ ವೈರಲ್ ಆಗಿದ್ದು, ಮಹಾಂತೇಶ ಚೋಳಚಗುಡ್ಡ ಮೇಲೆ ಮಹಿಳೆಯಿಂದಲೇ ಮೊದಲು ಹಲ್ಲೆ ನಡೆದಿದೆ. ನಂತರ ಮಹಿಳೆಯ ಮೇಲೆ ಮಹಾಂತೇಶನಿಂದ ಹಲ್ಲೆಯಾಗಿರುವ ಘಟನೆಯ ಮತ್ತೊಂದು ಭಾಗದ ವಿಡಿಯೋ ವೈರಲ್ ಆಗಿದೆ.

ಮಹಾಂತೇಶಗೆ ಚಪ್ಪಲಿಯಿಂದ ಹೊಡೆದ ಮಹಿಳೆ. ಅಲ್ಲಿಂದಲೇ ಜಗಳ ಶುರುವಾಗಿದೆ. ನಂತರ ಮಹಿಳೆ ಮೇಲೆ ಹಲ್ಲೆ ಮಹಾಂತೇಶ ಮಾಡಿದ್ದಾನೆ. ಪತ್ನಿ ಜಗಳ ಮಾಡುವ ವೇಳೆ ಸಂಗೀತಾಳ ಪತಿ ವಿಡಿಯೋ ಚಿತ್ರೀಕರಣದಲ್ಲಿ ಬಿಜಿಯಾಗಿದ್ದ, ಬಳಿಕ ಕೇವಲ 8 ಸೆಕೆಂಡ್ ವಿಡಿಯೋ ಹರಿಬಿಟ್ಟು ಅನುಕಂಪ ಗಿಟ್ಟಿಸಿಕೊಳ್ಳಲು ಯತ್ನಿಸಿದಕ್ಕಾಗಿ ರಾಜ್ಯಾದ್ಯಂತ ವ್ಯಾಪಕ ಖಂಡನೆ ವ್ಯಕ್ತಪಡಿಸಿದ್ದಾರೆ.

ಘಟನೆ ಸಂಬಂಧಿಸಿದಂತೆ ನಿನ್ನೆ ಬಾಗಲಕೋಟೆ ನಗರದಲ್ಲಿ ಇಬ್ಬರ ಪರ ಮತ್ತು ವಿರೋಧವಾಗಿ ಪ್ರತಿಭಟನೆಗಳು ನಡೆದಿದ್ದವು. ಆರೋಪಿತನ ಕುಟುಂಬದಿಂದ ಜಿಲ್ಲಾಧಿಕಾರಿ ಹಾಗೂ ಎಸ್ಪಿ ಕಚೇರಿ ಬಳಿ ಧರಣಿ ನಡೆಸಿ ಮನವಿ ಸಲ್ಲಿಸಿದ್ದರು. ಇತ್ತ ವಕೀಲರ ಸಂಘದಿಂದ ಹಲ್ಲೆಗೊಳಗಾದ ಮಹಿಳೆ ಪರ ಪ್ರತಿಭಟನೆ ನಡೆಸಲಾಗಿತ್ತು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!