- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯtomato price: ಗಗನಕ್ಕೇರಿದ ಟೋಮೆಟೊ ದರ. ಕಳ್ಳರ ಹಾವಳಿ ಶುರು!

tomato price: ಗಗನಕ್ಕೇರಿದ ಟೋಮೆಟೊ ದರ. ಕಳ್ಳರ ಹಾವಳಿ ಶುರು!

ವಿಜಯಪುರ: ರಾಜಜ್ಯಾದ್ಯಂತ ಅಕಾಲಿಕ ಮಳೆಯಿಂದಾಗಿ ಟೊಮ್ಯಾಟೊ (tomato price) ದರ ಗಗನಕ್ಕೆರಿದೆ. ವಿಜಯಪುರ ಜಿಲ್ಲೆಯಲ್ಲಿ ಸದ್ಯ ಟೊಮ್ಯಾಟೊ 100 ರೂಪಾಯಿ ವರೆಗೆ ಮಾರಾಟವಾಗುತ್ತಿದ್ದು, ರೈತರು ಭರ್ಜರಿ ಲಾಭ ಪಡೆಯುತ್ತಿದ್ದಾರೆ. ಟೊಮ್ಯಾಟೊ ದರ ಹೆಚ್ಚಳವಾಗಿದ್ದೇ ತಡ, ರೈತರಿಗೆ ಕಳ್ಳರ ಹಾವಳಿ ಶುರುವಾಗಿದೆ. ಹೀಗಾಗಿ ಬೆಳೆ ಬೆಳೆಯುವದರ ಅದನ್ನು ಹಲಗು ರಾತ್ರಿ ಕಾಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ವಿಜಯಪುರ ಜಿಲ್ಲೆಯ ವಿವಿಧ ಭಾಗಗಳಲ್ಲಿ ಟೊಮ್ಯಾಟೊ (tomato price) ಕಳ್ಳತನ ಮಾಡಲಾಗಿದೆ. ಇದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ಟೊಮ್ಯಾಟೊ ಬೆಳೆದ ರೈತರು ತಾವೇ ಖುದ್ದು ಹೊಲದಲ್ಲಿ ಸುತ್ತಾಡಿ ಕಳ್ಳತ ಹಾವಳಿ ತಪ್ಪಿಸುತ್ತಿದ್ದಾರೆ. ವಿಜಯಪುರ ತಾಲೂಕಿನ ಜೈನಾಪುರ ಮಡ್ಡಿ ಸುತ್ತಮುತ್ತಲಿನ ಹೊಲದಲ್ಲಿ ರೈತರು ತಮ್ಮ ಕುಟುಂಬದ ಸದಸ್ಯರ ಜೊತೆ ಟೊಮ್ಯಾಟೊ ಕಾವಲು ಕಾಯುತ್ತಿದ್ದಾರೆ.

ಬೆಳಿಗ್ಗೆ ಕುಟುಂಬದ ಮಹಿಳಾ ಸದಸ್ಯರ ಸಮೇತ ಹೊಲದಲ್ಲಿ ಬೆಳೆ ರಕ್ಷಣೆ ಮಾಡಿದರೆ ರಾತ್ರಿ ವೇಳೆ ಟಾರ್ಚ್ ಹಾಕಿಕೊಂಡು ಹೊಲಗಳಲ್ಲಿ ಸುತ್ತಾಡಿ ಟೊಮ್ಯಾಟೊ (tomato price) ರಕ್ಷಣೆ ಮಾಡುತ್ತಿದ್ದಾರೆ. ಸದ್ಯ ಟೊಮ್ಯಾಟೊ ಗೆ ಬೆಲೆ ಬಂದಿರೋದರಿಂದ ರೈತರಿಗೆ ಉತ್ತಮ ಲಾಭ ಬರುತ್ತಿದೆ. ಹೀಗಾಗಿ ಬೆಳೆ ಉಳಿಸಿಕೊಳ್ಳಲು ಹಗಲಿರುಳು ಶ್ರಮ ಪಡುತ್ತಿದ್ದಾರೆ.

ವಿಜಯಪುರದ ಜೈನಾಪುರ ಮಡ್ಡಿ ಬಳಿಯ ಟೊಮ್ಯಾಟೊ ಬೆಳೆಯುವ ರೈತ ಮುತ್ತು ಶಾಪೇಟಿ ತಮ್ಮ ಇಡೀ ಕುಟುಂಬದ ಸದಸ್ಯರು ಜೊತೆ ಹಗಲು ರಾತ್ರಿ ಟೊಮ್ಯಾಟೊ ಕಾಯುತ್ತಿದ್ದಾರೆ‌.‌ ಒಂದು ಎಕರೆ ಪ್ರದೇಶದಲ್ಲಿ ಟೊಮ್ಯಾಟೊ ಬೆಳೆದಿದ್ದು, ಬೆಲೆ ಹಚ್ಚಳವಾದ ಕಾರಣ ಈಗಾಗಲೆ ಸುಮಾರು 4 ಲಕ್ಷ ರೂಪಾಯಿ ಲಾಭ ಗಳಿಸಿದ್ದಾರೆ.

ಇನ್ನೂ ಹೆಚ್ಚಿನ ಟೊಮ್ಯಾಟೊ ಹೊಲದಲ್ಲೇ ಅದನ್ನು ಮಾರಾಟ ಮಾಡಿದರೆ ಉತ್ತಮ ಲಾಭ ಬರುವ ಹಿನ್ನೆಲೆಯಲ್ಲಿ ರಾತ್ರಿ ಹಗಲು ಅವುಗಳನ್ನು ಕಾಯುತ್ತಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!