- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಅವಮಾನ ಮಾಡಿದವರಿಗೆ ಕ್ಷಮೆ ಇಲ್ಲಾ. ಶಾಸಕ ಯತ್ನಾಳ

ಅವಮಾನ ಮಾಡಿದವರಿಗೆ ಕ್ಷಮೆ ಇಲ್ಲಾ. ಶಾಸಕ ಯತ್ನಾಳ

ವಿಜಯಪುರ: ಬೆಳಗಾವಿಯಲ್ಲಿ ಎಂಇಎಸ್ ನಿಂದ ಸಂಗೋಳ್ಳಿ ರಾಯಣ್ಣ ಮೂರ್ತಿಗೆ ಅವಮಾನ ಹಾಗೂ ದ್ವಂಸ ಪ್ರಕರಣದ ವಿಚಾರವಾಗಿ, ವಿಜಯಪುರ ನಗರ ಸ್ಥಳಿಯ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://gadinaadakranti.com/indirect-home-minister-demanded-mla-basanagouda-patil-yatnal/

ಈ ಕುರಿತಾಗಿ ಪ್ರತಿಕ್ರಿಯಿಸಿದ ಯತ್ನಾಳ, ದೇಶದ ಮಹಾನ್ ವ್ಯಕ್ತಿಗಳ ಪುತ್ಥಳಿ ಮೇಲೆ ಅವಮಾನ ಮಾಡಲಾಗುತ್ತಿದೆ. ಇದರ ಹಿಂದೆ ದೊಡ್ಡ ಗುಂಪಿದೆ, ಯಾವುದೇ ಮಹಾನ್ ವಕ್ತಿಗಳ ಪುತ್ಥಳಿಗಳಿಗೆ ಅವಮಾನ ಮಾಡಬಾರದು. ಅವಮಾನ ಮಾಡಿದವರ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದರು.

https://gadinaadakranti.com/shramabindu-sarathi-the-sidhu-namagowda/

ಎಂಇಎಸ್ ಹಾಗೂ ಶಿವಸೇನೆ ಮೇಲೆ ಕಠಿಣ ಕ್ರಮ ತೆಗೆದುಕೊಳ್ಳಬೇಕು. ಶಿವಸೇನೆ ಒಂದು ಭಾಷೆಗೆ ಸೀಮಿತವಾಗಿರೋದು ದುರ್ದೈವ, ಅವಮಾನ ಮಾಡಿದವರಿಗೆ ಕ್ಷಮೆ ಇಲ್ಲಾ. ಎಂಇಎಸ್ ನಂತ ಸಂಘಟನೆಗಳಿಂದ ಇಂಥ ಘಟನೆಗಳು ನಡೆಯುತ್ತದೆ, ಈ ಕುರಿತು ನಾಳೆ ವಿಧಾನಸಭೆಯಲ್ಲಿ ಚರ್ಚೆ ಮಾಡುತ್ತೇನೆಂದು ಎಂದು ಹೇಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!