- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಶಾಸಕ ಯತ್ನಾಳರ ಕಾರ್ಯ ಮೆಚ್ಚುವಂತದ್ದು. ಶಂಕರಗೌಡರ ಬಿರಾದಾರ

ಶಾಸಕ ಯತ್ನಾಳರ ಕಾರ್ಯ ಮೆಚ್ಚುವಂತದ್ದು. ಶಂಕರಗೌಡರ ಬಿರಾದಾರ

ಬಸವನಬಾಗೇವಾಡಿ: ರೈತರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ನಿರಂತರವಾಗಿ ಸದನದಲ್ಲಿ ಧ್ವನಿ ಎತ್ತುತ್ತಿರುವ ವಿಜಯಪುರ ನಗರದ ಶಾಸಕ ಬಸನಗೌಡ ಪಾಟೀಲ (ಯತ್ನಾಳ) ಅವರ ಕಾರ್ಯ  ಮೆಚ್ಚುವಂತಹದ್ದು ಎಂದು ರಾಷ್ಟ್ರೀಯ ಬಸವ ಸೈನ್ಯದ ಸಂಸ್ಥಾಪಕ ಅಧ್ಯಕ್ಷ ಶಂಕರಗೌಡರ ಬಿರಾದಾರ ಅವರು ಹೇಳಿದರು.

ಇದನ್ನೂ ಓದಿ… ಭಗವಾನ್ ತೀರ್ಥಂಕರ ಅದ್ಧೂರಿ ಮೆರವಣಿಗೆ

ಪಟ್ಟಣದ ಸರ್ಕಾರಿ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಬಸವ ಸೈನ್ಯ ಸಂಘಟನೆ ನೇತೃತ್ವದಲ್ಲಿ ಬಸನಗೌಡ ಪಾಟೀಲ (ಯತ್ನಾಳ) ಅವರ ಜನ್ಮ ದಿನದ ಪ್ರಯುಕ್ತ, ಒಳರೋಗಿಗಳಿಗೆ ಹಾಲು ಹಣ್ಣುಗಳನ್ನು ವಿತರಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಉತ್ತರ ಕರ್ನಾಟಕದ ಅಭಿವೃದ್ಧಿ ವಿಚಾರದಲ್ಲಿ ತಮ್ಮದೇ ಆಡಳಿತ ಪಕ್ಷವಿದ್ದರೂ ಕೂಡ ಅನ್ಯಾಯದ ವಿರುದ್ಧ ಹೋರಾಡುವ ನಾಯಕನಿಗೆ ಮುಂಬರುವ ದಿನಗಳಲ್ಲಿ ಉನ್ನತ ಹುದ್ದೆ ದೊರಕಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ರಾಷ್ಟ್ರೀಯ ಬಸವ ಸೈನ್ಯದ ತಾಲೂಕಾಧ್ಯಕ್ಷ ಸಂಜುಗೌಡ ಬಿರಾದಾರ, ರಾಷ್ಟ್ರೀಯ ಉಪಾಧ್ಯಕ್ಷ ಸುನಿಲಗೌಡ ಚಿಕ್ಕೊಂಡ, ಮುಖಂಡರಾದ ಶ್ರೀಕಾಂತ ಕೊಟ್ರಶೆಟ್ಟಿ ,ರಾಜು ಬಸರಕೋಡ, ಗುರುರಾಜ ವಂದಾಲ, ನಿಂಗಪ್ಪ ಅವಟಿ, ಅರವಿಂದ ಗೊಳಸಂಗಿ ,ಅಮೃತ ಬಾಗೇವಾಡಿ ,ಅರುಣ ಗೊಳಸಂಗಿ, ಮಂಜುನಾಥ ಜಾಲಗೇರಿ, ವಿನೋದ ಗಬ್ಬುರ, ಪ್ರದೀಪ ಬಿರಾದಾರ, ಕಿರಣ ಜನಗೊಂಡ ವೈದ್ಯಾಧಿಕಾರಿ ಡಾ. ಶಾಕಿರ್ ಪಟೇಲ್ ಸೇರಿದಂತೆ ಇತರರು ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!