- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯವಚನ ಶಿಲಾಶಾಸನ ಮಂಟಪ ನಿರ್ಮಾಣ ಅದ್ಭುತ ಕಾರ್ಯ. ರಾಜ್ಯಪಾಲ ಗೆಹ್ಲೋಟ್

ವಚನ ಶಿಲಾಶಾಸನ ಮಂಟಪ ನಿರ್ಮಾಣ ಅದ್ಭುತ ಕಾರ್ಯ. ರಾಜ್ಯಪಾಲ ಗೆಹ್ಲೋಟ್

ಬಸವನಬಾಗೇವಾಡಿ: ವಿಶ್ವಗುರು ಅಣ್ಣ (Ingaleshwara) ಬಸವಣ್ಣನವರ ವಚನಗಳು ಶಿಲಾಶಾಸನಗಳಲ್ಲಿ (Vachana Inscription) ಮೂಡುವಂತೆ ಮಾಡಿರುವುದು ಅದ್ಭುತ ಕಾರ್ಯವಾಗಿದೆ ಎಂದು ಘನವೆತ್ತ ರಾಜ್ಯಪಾಲ ಥಾವರ್ಚಂದ್  ಗೆಹ್ಲೋಟ್ (Thawar Chand Gehlot) ಹೇಳಿದರು.

ತಾಲೂಕಿನ ಇಂಗಳೇಶ್ವರ ಗ್ರಾಮದ ವಿರಕ್ತಮಠದಲ್ಲಿ ವಚನ ಶಿಲಾಶಾಸನ ಮಂಟಪವನ್ನು (Vachana Inscription) ಉದ್ಘಾಟಿಸಿ ಮಾತನಾಡಿದ ಅವರು ಆಧ್ಯಾತ್ಮಿಕ ಆರ್ಥಿಕವಾಗಿ ಸಮಾಜದಲ್ಲಿ ಸಾಮರಸ್ಯ ಸಮಾನತೆಯನ್ನು ಕಾಪಾಡಿಕೊಂಡು 40ವರ್ಷಗಳಿಂದ ವಚನಶಿಲಾ ಶಾಸನ ಮಂಟಪ ನಿರ್ಮಿಸಿದ ವಿರಕ್ತಮಠದ ಹಿರಿಯ ಶ್ರೀಗಳ ಕಾರ್ಯ ಶ್ಲಾಘನೀಯವಾಗಿದ್ದು ದೇಶದಲ್ಲಿ ಋಷಿಮುನಿ, ಮಹಾಪುರಷರ ಸಂದೇಶಗಳಿಂದ ವಿಶ್ವದಲ್ಲಿ ಶಾಂತಿ ನೆಲಿಸುವತ್ತೆ ಮಾಡಿವೆ, ಭಾರತ ಸಮಾನತೆ, ಸಾಮರಸ್ಯದಿಂದ ಪ್ರಗತಿ ಪಥದತ್ತ ಸಾಗುತ್ತಿದೆ ಎಂದರು.

ಸಾಮಾಜಿಕ ಸಮಾನತೆಗಾಗಿ ದೊಡ್ಡ ಕ್ರಾಂತಿಯನ್ನೇ ಮಾಡಿರುವ ಜಗಜ್ಯೋತಿ ಬಸವಣ್ಣನವರ ವಿಚಾರಧಾರೆಯ ಬೆಳಕು ನಮ್ಮ ಸಂವಿಧಾನದಲ್ಲಿ ಕಾಣಬಹುದಾಗಿದೆ, ಸಮಾನತೆ ಉದಾತ್ತ ಬದುಕಿನ ತತ್ವಗಳ ರೂಪಗಳಾಗಿರುವ ವಚನಗಳನ್ನು ಶಿಲಾಶಾಸನಗಳಲ್ಲಿ ಬಿಂಬಿಸುವತ್ತೆ ಮಾಡಿರುವುದು ಶ್ರೇಷ್ಠತೆಯನ್ನು ಹೆಚ್ಚಿಸಿದೆ, ಮಾತು ದಾಖಲೆಯಾಗಬೇಕು, ಈ ಮಾತುಗಳು ಕಾಗದಲ್ಲಿ ಬರೆದರೆ ಅದು ಅಳೆದುಹೋಗಬಹುದು ಆದರೆ ಶಿಲೆಯಲ್ಲಿ ಬರೆದರೆ ಈ ವಚನಗಳು ಉಳಿಯುವುದು ಶಾಶ್ವತವಿರುತ್ತವೆ ಎಂದು ಹೇಳಿದರು.

ಬಸವಾದಿ ಶರಣರ ವಚನಗಳನ್ನು ಓದಿ ಆರ್ಥೈಸಿಕೊಂಡು ಮನೆಮನೆಗೆ ತಲುಸುವ ಕಾರ್ಯವಾಗಬೇಕು, ಭಾರತ ಆಧ್ಯಾತ್ಮ, ಸಂಸ್ಕೃತಿಗಳ ಬೀಡಾಗಿದ್ದು ವಸುದೈವ ಕುಟುಂಬಕಂ ಎಂಬುವುದು ನಮ್ಮ ಸಂಸ್ಕೃತಿಯ ಮೂಲ ಸ್ವರೂಪ. ಈ ಮೂಲ ತತ್ವವನ್ನು ನಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ವಿಶ್ವಶಾಂತಿ ಸಾಧ್ಯ, ಯುವಜನತೆ ಭಾರತದ ಆಧ್ಯಾತ್ಮ, ಸಂಸ್ಕೃತಿಯನ್ನು ಅಳವಡಿಸಿಕೊಂಡರೆ ಭಾರತ ವಿಶ್ವಗುರುವಾಗಲು ಸಾಧ್ಯ, “ಸರ್ವೇವೇ ಜನಃ ಸುಖಿನೋ ಭವತು” ಎನ್ನುವ ಹಾಗೇ ಎಲ್ಲರೂ ಸುಖಿಯಾಗಿರಬೇಕು, (Vachana Inscription) ಎಲ್ಲರೂ ನಿರೋಗಿಯಾಗಿದಬೇಕು ಎನ್ನುವುದು ನಮ್ಮ ಸಂಸ್ಕೃತಿ. ಕಷ್ಟಗಳನ್ನು ದೂರು ಮಾಡಲು ನಾವು ಶ್ರಮವಹಿಸಬೇಕು, ದವಾ ಔರ ದುವಾ ಸಹ ಅವಶ್ಯ ಎಂದು ಹೇಳಿದರು.

ಈ ಸಂದರ್ಭದಲ್ಲಿ ವಚನ ಶಿಲಾಮಂಟಪದ ನಿರ್ಮಾಣದ ರೂವಾರಿ ಇಂಗಳೇಶ್ವರ ವಿರಕ್ತಮಠದ ಚನ್ನಬಸವ ಸ್ವಾಮೀಜಿ ಮಾತನಾಡಿದರು, ಧಾರವಾಡ ಮುರುಘಾಮಠದ ಮಲ್ಲಕಾರ್ಜುನ ಸ್ವಾಮೀಜಿ, ಇಂಗಳೇಶ್ವರ ವಿರಕ್ತಮಠದ ಡಾ. ಸಿದ್ಧಲಿಂಗ ಸ್ವಾಮೀಜಿ ಮಾತನಾಡಿದರು, ಯರನಾಳ ವಿರಕ್ತಮಠದ ಗುರುಸಂಗನಬಸವ ಸ್ವಾಮೀಜಿ, ಮುತ್ತಗಿಯ ವೀರರುದ್ರಮುನಿ ಸ್ವಾಮೀಜಿ, ಬಾಗೇವಾಡಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಕುಂಟೋಜಿ ಚೆನ್ನವೀರ ದೇವರು ಸೇರಿದಂತೆ ಇತರರು ಇದ್ದರು.

ಬಸವರಾಜ  ರಬಿನಾಳ ನಿರೂಪಿಸಿದರು, ಮಾಧವ ಗುಡಿ ಸ್ವಾಗತಿಸಿದರು, ಶಿವಾನಂದ ಮಂಗಾನವರ ವಂದಿಸಿದರು.

ಕನ್ನಡದಲ್ಲಿ ಮಾತು ಆರಂಭಿಸಿದ ರಾಜ್ಯಪಾಲರು: ಎಲ್ಲರಿಗೂ ನಮಸ್ಕಾರಗಳು… ತಮಗೆಲ್ಲರಿಗೂ ಹಾರ್ದಿಕ ಅಭಿನಂದನೆಗಳು ಎಂದು ರಾಜ್ಯಪಾಲರು ಹೇಳಿದಾಗ ಸಭೆಯಲ್ಲಿ ನೆರದಿದ್ದ ಜನ ಜೋರಾಗಿ ಚಪ್ಪಾಳೆ ತಟ್ಟಿ.. ಸೀಳು ಹಾಕಿದರು. ನಂತರ ಈ ಶಿಲಾಮಂಟಪದ ಲೋಕಾಪರ್ಣೆ ಮಾಡುವ ಅವಕಾಶದ ಅದೃಷ್ಟ ದೊರಕಿರುವುದು ನನ್ನ ಸೌಭಾಗ್ಯ ಎಂದು ಹೇಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!