- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಅಂಗನವಾಡಿ ಕಾರ್ಯಕರ್ತೆ ವಜಾಗೊಳಿಸಲು ಆಗ್ರಹ

ಅಂಗನವಾಡಿ ಕಾರ್ಯಕರ್ತೆ ವಜಾಗೊಳಿಸಲು ಆಗ್ರಹ

ಬಸವನಬಾಗೇವಾಡಿ: (Basavana Bagewadi) ಪುರಸಭೆ ವ್ಯಾಪ್ತಿಯಲ್ಲಿನ ಜೈನಾಪುರ ಗ್ರಾಮದ ಅಂಗನವಾಡಿ (Anganwadi) ಕೇಂದ್ರದ ಕಾರ್ಯಕರ್ತೆಯನ್ನು ವಜಾಗೊಳಿಸಬೇಕೆಂದು ಗ್ರಾಮಸ್ಥ ಮುಖಂಡರು ಆಗ್ರಹಿಸಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆಗೆ (CDPO) ಮನವಿ ಸಲ್ಲಿಸಿದರು.

ಕಳೆದ ಕೆಲ ದಿನಗಳಿಂದ ಅಂಗನವಾಡಿಯಲ್ಲಿ ಆಹಾರ ಧಾನ್ಯಗಳನ್ನು ಸರಿಯಾಗಿ ನೀಡದೆ ಇಲ್ಲಿರುವ ಅಂಗನವಾಡಿನ ಕಾರ್ಯಕರ್ತೆ ದುರಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಹಾಗೂ ಪೌಷ್ಠಿಕಾಂಶ ಆಹಾರವನ್ನು ಮಕ್ಕಳಿಗೆ, ಗರ್ಭಿಣಿ ಸ್ತ್ರೀಯರಿಗೆ, ಬಾಣಂತಿಯರಿಗೆ ನೀಡುತ್ತಿಲ್ಲ, ಹಾಗೂ ಗ್ರಾಮಸ್ಥರೊಂದಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ ಈ ಕುರಿತಾಗಿ ಹಲವಾರು ಬಾರಿ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿ, ಕೂಡಲೇ ಅಂಗನವಾಡಿ ಕಾರ್ಯಕರ್ತೆಯನ್ನು ವಜಾಗೊಳಿಸುವಂತೆ ಆಗ್ರಹಿಸಿದರು.

ಒಂದು ವೇಳೆ ಕಾರ್ಯಕರ್ತೆಯನ್ನು (Anganwadi) ವಜಾಗೊಳಿಸದೇ ಇದ್ದರೆ, ಬರುವ ದಿನಗಳಲ್ಲಿ ಸಿಡಿಪಿಓ ಕಚೇರಿಗೆ ಬೀಗ ಜಡಿದು ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ಎಚ್ಚರಿಸಿದರು.

ಈ ಸಂದರ್ಭದಲ್ಲಿ ಮಂಜುನಾಥ ಬೇನಾಳ, ಜಗದೀಶ ಉಳ್ಳಾಗಡ್ಡಿ, ಯಮನೂರಿ ಚವ್ಹಾಣ, ಬಸವರಾಜ ಅಂಬಲಿ, ವಿಠ್ಠಲ ಮೇಲ್ದಾಪುರ, ನಿಂಗಪ್ಪ ಪಾಟೀಲ, ಅಂಬವ್ವ ಜಾಧವ, ಲಕ್ಷ್ಮೀ ಕುಂಬಾರ, ಶಶಿಕಲಾ ಗೊಳಸಂಗಿ, ಭಾಗ್ಯಶ್ರೀ ಚವರಿ, ಬೊರಮ್ಮ ಕುಂಬಾರ, ಪಾಂಡು ಜಾಧವ, ಶಂಕರ ಉಳ್ಳಾಗಡ್ಡಿ, ಗಿರೀಶ ಹೊಸಮನಿ, ಭೀಮು ಮ್ಯಾಗೇರಿ, ಮುದಕು ಪೋಲೆಶಿ, ಭೀಮಾಂಬಿಕಾ ವೈದ್ಯ ಸೇರಿದಂತೆ ಇತರರು ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!