- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಶಿಕ್ಷಕರ ಒಗ್ಗಟಿನ ಫಲವೇ ವಿದ್ಯಾರ್ಥಿಗಳ ಸಾಧನೆಯ ಸೂತ್ರ

ಶಿಕ್ಷಕರ ಒಗ್ಗಟಿನ ಫಲವೇ ವಿದ್ಯಾರ್ಥಿಗಳ ಸಾಧನೆಯ ಸೂತ್ರ

ಬಸವನಬಾಗೇವಾಡಿ: ಶಿಕ್ಷಕರು ಒಗ್ಗಟಾಗಿ ಶ್ರಮಿಸಿದರ ಫಲವಾಗಿ ಇಂದು ಶಾಲೆಯ ಕೀರ್ತಿ ಹೆಚ್ಚಿಸಲು ಹಾಗೂ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದುಕೊಂಡ ಮಕ್ಕಳು ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದು ಪಟ್ಟಣದ ಹಿರಿಯರು ಕೆ.ಪಿ.ಕುಲಕರ್ಣಿ ಹೇಳಿದರು.

ಪಟ್ಟಣದ ಸರ್ಕಾರಿ ಬಾಲಕೀಯರ ಅಕ್ಕನಾಗಮ್ಮ ಪ್ರೌಢ ಶಾಲೆಯಲ್ಲಿ ಇಂಗ್ಲೀಷ ಜೋನ್ ಅಕಾಡಮಿ ವತಿಯಿಂದ ಸೋಮವಾರ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕಗಳನ್ನು ಪಡೆದ ಶಾಲಾ ವಿದ್ಯಾರ್ಥಿನೀಯರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಶಿಕ್ಷಣ ಬೆಳವಣಿಗೆಗೆ ನಾವೆಲ್ಲರೂ ಶ್ರಮಿಸಬೇಕು, ಮಕ್ಕಳು ಅಂಕಗಳನ್ನು ಗೌರವ ಹಾಗೂ ಆರೋಗ್ಯವಾಗಿ, ಹಾಗೂ ನೆಮ್ಮದಿಯಿಂದ ಗಳಿಕೆ ಮಾಡಿಕೊಳ್ಳಬೇಕು, ಶಿಕ್ಷಣ ಮಾನ ಅವಮಾನಗಳಿಗೆ ಸಮಾನವಾಗಿ ಸ್ವೀಕರಿಸುವ ಧೈರ್ಯ ತುಂಬುವ ಶಿಕ್ಷಣ ಅವಶ್ಯಕವಿದ್ದು ವಿಜ್ಞಾನ ವಿಷಯ ಬದುಕಿಗೆ ಮುಖ್ಯವಲ್ಲ ಆ ವಿಷಯಕ್ಕೆ ಬೆನ್ನು ಹತ್ತದೇ ಬೇರೆ ಬೇರೆ ವಿಷಯಗಳನ್ನು ಆಯ್ಕೆ ಮಾಡಿಕೊಂಡು ಅಭ್ಯಸಿಸಿದಲ್ಲಿ ಉನ್ನತ ಶಿಕ್ಷಣದಲ್ಲಿ ಮುಂದುವರಿಯಲು ಸಾಧ್ಯ. ಇಂದಿನ ಕಾಲದಲ್ಲಿ ಶಿಕ್ಷಣ ಸಂಬಂಧಗಳನ್ನು ಹಾಳು ಮಾಡುತ್ತೀವೆ, ಸಂಬಂಧಗಳನ್ನು ಗಟ್ಟಿಗೊಳಿಸುವ ಶಿಕ್ಷಣಕ್ಕೆ ಮಹತ್ವ ನೀಡಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ಆರ್ಯಭಟ್ ಪ್ರಶಸ್ತಿ ಪುರಸ್ಕೃತ, ವಿಶ್ವಬಂಧು ಬಸವ ಸಮಿತಿ ಪ್ರಧಾನ ಕಾರ್ಯದರ್ಶಿ ಡಾ.ಅಮರೇಶ ಮಿಣಜಗಿ ಮಾತನಾಡಿ ನಾವು ಶಿಕ್ಷಣದಲ್ಲಿ ಏನಾದರೂ ಸಾಧನೆ ಮಾಡಬೇಕಾದರೆ ನಾವು ಪುಸ್ತಕಗಳನ್ನು ಶ್ರದ್ಧೆಯಿಂದ ಓದಬೇಕು, ಓದಿದನ್ನು ಮನವರಿಕೆ ಮಾಡಿಕೊಳ್ಳಬೇಕು, ಪ್ರತಿ ಮಗುವಿನ ಪಾಲಕರು, ತಂದೆ, ತಾಯಿಯೆಂದಿರಲ್ಲಿ ಇರುವಂತ ಆಶೆಯ ನಮ್ಮ ಮಗು ಸಮಾಜದಲ್ಲಿ ತೆಲೆಎತ್ತಿ ಬಾಳಬೇಕು ಎಂಬುವುದು ಆಸೆ ಇರುತ್ತದೆ ಈ ನಿಟ್ಟಿನಲ್ಲಿ ನಾವೆಲ್ಲರೂ ಶ್ರದ್ಧೆಯಿಂದ ಅಭ್ಯಸಿಸುವುದನ್ನು ಕಲಿತುಕೊಳ್ಳಬೇಕೆಂದು ಹೇಳಿದರು.

ಇಂಗ್ಲೀಷ ಜೋನ್ ಅಕಾಡಮಿಯ ಮುಖ್ಯಸ್ಥ ಪಿ.ಎಲ್.ಪೂಜಾರಿ, ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯ ಪಿ.ಎಚ್. ಢವಳಗಿ ಮಾತನಾಡಿದರು. ಇಂಗ್ಲೀಷ ಜೋನ್ ಅಕಾಡಮಿಯ ಶಿಕ್ಷಕ ಶ್ರೀಕಾಂತ ಸಜ್ಜನ ಸೇರಿದಂತೆ ಶಾಲಾ ಶಿಕ್ಷಕ ಶಿಕ್ಷಕಿಯರು ಇದ್ದರು. ಶಿಕ್ಷಕ ಎಸ್.ಎಸ್.ಹುಲಸೂರ ಸ್ವಾಗತಿಸಿದರು, ಶಿಕ್ಷಕ ಜಿ.ಎಂ. ಗಂಜಾಳ ನಿರೂಪಿಸಿ, ವಂದಿಸಿದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!