- Advertisement -Newspaper WordPress Theme
ದೈವ ದರ್ಶನಶ್ರೀ ಚಕ್ರಲಿಂಗ ವಿರುವ ಏಕೈಕ ದೇವಸ್ಥಾನ…! ಇಲ್ಲಿದೆ ನೋಡಿ ವಿವರ

ಶ್ರೀ ಚಕ್ರಲಿಂಗ ವಿರುವ ಏಕೈಕ ದೇವಸ್ಥಾನ…! ಇಲ್ಲಿದೆ ನೋಡಿ ವಿವರ

ಗುಮ್ಮಟನಗರಿ ವಿಜಯಪುರ ನಗರದ ಸ್ಟೇಷನ್ ರಸ್ತೆಯಲ್ಲಿರುವ ಸುಂದರೇಶ್ವರ ದೇವಸ್ಥಾನ ತನ್ನದೆ ಆದ ಪವಾಡಗಳ ಮೂಲಕ ಪ್ರಸಿದ್ದವಾಗಿದೆ ಸುಮಾರು ಎಂಟು ನೂರು ವರ್ಷಗಳಷ್ಟು ಹಳೆಯದಾದ ಈ ದೇವಸ್ಥಾನ (sundareswara temple) ನಿರ್ಮಾಣವಾಗಿರುವುದು ಮುಸ್ಲಿಂ ಶಿಲ್ಪಕಲೆಗಳ ಶೈಲಿಯಲ್ಲಿ. ಇದಕ್ಕೆ ಸಾಕ್ಷಿ ಎಂಬಂತೆ ವಿಜಯಪುರದಲ್ಲಿರುವ ಹಲವಾರು ಮುಸ್ಲಿಂ ಸ್ಮಾರಕಗಳ ಕಮಾನುಗಳಂತೆಯೆ ಇಲ್ಲಿಯೂ ಕಮಾನುಗಳನ್ನು ನಿರ್ಮಿಸಲಾಗಿದೆ.

ಈ ಶಿವಲಿಂಗದ ಮೇಲೆ ಶ್ರೀ ಚಕ್ರವಿರುವುದರಿಂದ ಭಕ್ತರ ದಾರಿದ್ರ್ಯಗಳನ್ನು ಹೋಗಲಾಡಿಸುತ್ತಾನೆ ಎನ್ನುವ ನಂಬಿಕೆ ಜನರದ್ದು. ಸಾಲಿಗ್ರಾಮ ಶಿಲೆಯಲ್ಲಿರುವ ಈ ಶ್ರೀಚಕ್ರದ ಕಲ್ಪನೆ ಹೊಂದಿದ್ದ ಶಿವಲಿಂಗವನ್ನು ಶಂಕರಾಚಾರ್ಯರು ಸ್ಥಾಪಿಸಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ ನಿರ್ದಿಷ್ಠವಾದ ದಾಖಲೆಗಳು ಸಿಕ್ಕಿಲ್ಲ. ಶ್ರಾವಣದಲ್ಲಿ ಪ್ರತಿ ಸೋಮವಾರ ಅಭಿಷೇಕ, ಎಲೆಪೂಜೆ, ರುದ್ರಾಭಿಷೇಕ, ಲಘು ರುದ್ರಾಭಿಷೇಕ ಸೇರಿದಂತೆ ಐದು ಪೂಜೆಗಳು ನಡೆಯುತ್ತವೆ. ಅಲ್ಲದೆ ಕಾರ್ತಿಕ ಮಾಸದಲ್ಲಿ ಧಾನ್ಯಪೂಜೆ, ಮಹಾಪೂಜೆ, ಬುತ್ತಿಪೂಜೆಗಳು ನಡೆಯುತ್ತವೆ.

ದೇವರುಗಳಲ್ಲಿಯೇ ಅತ್ಯಂತ ಶಕ್ತಿಹೊಂದಿರುವ ಇಲ್ಲಿನ ಸುಂದರೇಶ್ವರ ದೇವಸ್ಥಾನಕ್ಕೆ ಬಳ್ಳಾರಿ, ಕೊಪ್ಪಳ, ಕಲಬುರಗಿ ಸೇರಿದಂತೆ ರಾಜ್ಯದ ಮೂಲೆ ಮೂಲೆಗಳಿಂದ ಹಾಗೂ ಮಹಾರಾಷ್ಟ್ರ, ಆಂದ್ರದಿಂದಲೂ ಭಕ್ತರು ಆಗಮಿಸುತ್ತಾರೆ. ಶಿವರಾತ್ರಿ ದಿನವಂತೂ ಈ ಜೋತಿರ್ಲಿಂಗದ ದರ್ಶನಕ್ಕೆ ಜನರು ಬೆಳಗಿನ ಜಾವ ನಾಲ್ಕು ಗಂಟೆಗೆ ಆಗಮಿಸಿ ಕಾಯುತ್ತಾರೆ. ಅಂದು ಬೆಳಗ್ಗೆ ನಾಲ್ಕು ಗಮಟೆಯಿಂದ ರಾತ್ರಿ ಹನ್ನೆರಡು ಗಂಟೆಯ ವರೆಗೂ ಭಕ್ತರು ಸಾಲುಗಟ್ಟಿ ನಿಂತಿರುವ ದೃಶ್ಯ ಕಂಡು ಬರುತ್ತದೆ.

ಸುಂದರೇಶ್ವರ ದೇವಸ್ಥಾನ (sundareswara temple) ದಲ್ಲಿರುವ ಶಿವಲಿಂಗಕ್ಕೆ ಶ್ರೀಚಕ್ರವಿರುವುದರಿಂದ ಈತನಿಗೆ ಜಾಗೃತ ದೇವರು ಎಂಬ ಹೆಸರಿಡಲಾಗಿದೆ. ಮದುವೆಯಾಗದವರಿಗೆ ಮದುವೆ, ಮಕ್ಕಳಾಗದವರಿಗೆ ಮಕ್ಕಳನ್ನು ಕರುಣಿಸುವ ದೈವನೀತ. ಪ್ರತಿ ಸೋಮವಾರ ಸುಂದರೇಶ್ವರನ ವಾರವಾಗಿದೆ. ಹೀಗಾಗಿ ಸೋಮವಾರ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ದೇವರಲ್ಲಿ ಭಕ್ತಿಯಿಂದ ನಡೆದುಕೊಂಡ್ರೆ ಇಷ್ಠಾರ್ಥಿಗಳನ್ನು ಇಡೇರಿಸುತ್ತಾನೆ. ದೇವರಿಗೆ ಹರಕೆ ಹೊತ್ತರೆ ಪ್ರತಿ ಸೋಮವಾರದಂತೆ ಐದು ವಾರ ಆಗಮಿಸಿ ಹರಕೆ ತೀರಿಸುತ್ತಾರೆ. ಮಹಾದೇವ, ಸುಂದರೇಶ್ವರ, ಈಶ್ವರ, ಶಿವಲಿಂಗ, ಜೋತಿರ್ಲಿಂಗ, ಜಾಗೃತ ದೇವರು ಎಂಬ ಹಲವು ನಾಮಗಳಿವೆ. ಹಲವಾರು ಭಕ್ತರು ತಮ್ಮ ಭಕ್ತಿಯಿಂದ ನಡೆದುಕೊಳ್ಳುತ್ತಿದ್ದು ಅವರ ಭಕ್ತಿಗನುಸಾರವಾಗಿ ತಮ್ಮ ತಮ್ಮ ಮನೆಗಳಿಂದ ಬರಿಗಾಲಲ್ಲಿ ನಡೆದುಕೊಂಡು ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ.

ಪ್ರತಿ ಸೋಮವಾರ ಇಲ್ಲಿ ಶಿವಲಿಂಗಕ್ಕೆ ಅಭಿಷೇಕ, ಅರ್ಚನೆ ಸೇರಿದಂತೆ ವಿಶೇಷ ಪೂಜೆಗಳು ನಡೆಯುತ್ತವೆ. ಸದಾ ಭಕ್ತರ ಹಿತವನ್ನು ಕಾಪಾಡು ಈ ಸುಂದರೇಶ್ವರ ದೇವರು ಜಾಗೃತ ದೇವರಾಗಿದ್ದು ಭಕ್ತರಲ್ಲಿನ ದಾರಿದ್ರ್ಯವನ್ನು ಓಡಿಸುವಲ್ಲಿ ಮೊದಲನೆ ಸ್ಥಾನದಲ್ಲಿದ್ದಾನೆ. ಹಲವಾರು ವರ್ಷಗಳಿಂದ ಎಷ್ಟೇ ಶ್ರಮ ವಹಿಸಿದರೂ ಯಾವ ಕೆಲಸದಲ್ಲಿಯೂ ಸಫಲವಾಗದಿದ್ದರೆ ಇಲ್ಲಿಗೆ ಬಂದು ಹರಕೆ ಹೊತ್ತರೆ ಸಾಕು ಅವರು ಕೆಲಸದಲ್ಲಿ ಸಫಲತೆ ಕಾಣುತ್ತಾರೆ. ಇನ್ನು ಮದುವೆಯಾಗದವರಿಗೆ ಒಳ್ಳೆಯ ಗಂಡನನ್ನು, ಮಕ್ಕಳಾಗದವರಿಗೆ ಮಕ್ಕಳನ್ನು ಕರುಣಿಸುವ ದೇವರು ಈ ಸುಂದರೇಶ್ವರನಾಗಿದ್ದಾನೆ (sundareswara temple).

ದೇವಸ್ಥಾನ ಹೊರಭಾಗದಿಂದ ನೋಡಿದ್ರೆ ಯಾವುದೋ ಒಂದು ಮಸೀದಿ, ಕಮಾನುಗಳಂತೆ, ಕಮಲದ ದಳಗಳಂತೆ ಕಮಾನು ಹೊಂದಿದೆ. ಶಿವರಾತ್ರಿ ಹಾಗೂ ಶ್ರಾವಣ ತಿಂಗಳಿನಲ್ಲಿ ಸುಂದರೇಶ್ವರನಿಗೆ ಹೆಚ್ಚಿನ ಸಂಖ್ಯಲ್ಲಿ ಭಕ್ತರು ಆಗಮಿಸುತ್ತಾರೆ. ವಿದೇಶದಿಂದಲೂ ಸಹ ಕೆಲ ಭಕ್ತರು ಆಗಮಿಸಿ ದೇವರ ಕೃಪೆಗೆ ಪಾತ್ರರಾಗುತ್ತಾರೆ. ಹೀಗೆ ಹತ್ತು ಹಲವಾರು ಸಂಕಷ್ಟಗಳನ್ನು ತ್ವರಿತ ಗತಿಯಲ್ಲಿ ಬಗೆಹರಿಸುವ ಈ ದೇವರು ಅತ್ಯಂತ ಜಾಗೃತ ದೇವರಾಗಿದ್ದಾನೆ.

— ಗಡಿನಾಡ ಕ್ರಾಂತಿ ಟೀಮ್

LEAVE A REPLY

Please enter your comment!
Please enter your name here

Subscribe Today

GET EXCLUSIVE FULL ACCESS TO PREMIUM CONTENT

SUPPORT NONPROFIT JOURNALISM

EXPERT ANALYSIS OF AND EMERGING TRENDS IN CHILD WELFARE AND JUVENILE JUSTICE

TOPICAL VIDEO WEBINARS

Get unlimited access to our EXCLUSIVE Content and our archive of subscriber stories.

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!