- Advertisement -Newspaper WordPress Theme
ಪ್ರಮುಖ ಸುದ್ದಿಗಳುರಾಜ್ಯಕರುನಾಡಿನ ಶಿವರಾಮಣ್ಣನವರ ಜೀವನ ಜರ್ನಿ

ಕರುನಾಡಿನ ಶಿವರಾಮಣ್ಣನವರ ಜೀವನ ಜರ್ನಿ

ಕರುನಾಡಿನ ಶಿವರಾಮಣ್ಣ ಎಂದೇ ಖ್ಯಾತಿ ಹೊಂದಿದ್ದ ಕನ್ನಡ ಚಿತ್ರರಂಗದ ಹಿರಿಯ ನಟ ಎಸ್. ಶಿವರಾಮ್ (actor shivaram) ಅವರು ಕನ್ನಡದ ನೂರಾರು ಚಿತ್ರಗಳಲ್ಲಿ ಸುಮಾರ ಆರು ದಶಕಗಳ ಕಾಲ ಪೋಷಕ, ಹಾಸ್ಯ ನಟನಾಗಿ ಉತ್ತಮ ನಟರೆಂದೇ ಪ್ರಸಿದ್ಧರಾಗಿದ್ದರು. ನಟನೆ ಅಲ್ಲದೆ ನರ‍್ದೇಶಕನಾಗಿ, ನರ‍್ಮಾಪಕನಾಗು ಕೂಡಾ ಚಿತ್ರರಂಗಕ್ಕೆ ತನ್ನ ಕೊಡುಗೆ ನೀಡಿದ್ದಾರೆ.

ಶಿವರಾಮ ಮದ್ರಾಸ್ ಪ್ರಾಂತದಲ್ಲಿ ಕರ್ನಾಟಕ ಮತ್ತು ತಮಿಳುನಾಡು ರಾಜ್ಯಗಳ ಗಡಿಯಲ್ಲಿನ ಚೂಡಸಂದ್ರ ಹಳ್ಳಿಯಲ್ಲಿ ಒಂದು ಮಧ್ಯಮ ವರ್ಗದ ಹಿಂದೂ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. ತನ್ನ ಪ್ರಾಥಮಿಕ ಶಿಕ್ಷಣ ಮುಗಿಸಿದ ನಂತರ, ಅವರು ಟೈಪ್ ರೈಟಿಂಗ್ ಇನ್ಸ್ಟಿಟ್ಯೂಟ್ ನಡೆಸುತ್ತಿದ್ದ ತಮ್ಮ ಸೋದರನ ಜೊತೆಗೆ ನಗರದ ಬೆಂಗಳೂರಿಗೆ ತೆರಳಿದರು.

ಗುಬ್ಬಿ ವೀರಣ್ಣ ಅವರ ನಾಟಕ ಪ್ರದರ್ಶನದ ಪ್ರಭಾವಕ್ಕೆ ಒಳಗಾಗಿ, ಶಿವರಾಮರು ಚಿತ್ರ ತಯಾರಿಕೆ ಮತ್ತು ನಟನೆಯತ್ತ ಆಸಕ್ತಿ ತಳೆದು, ನಾಟಕಗಳಲ್ಲಿ ಅಭಿನಯಿಸಲು ಆರಂಭಿಸಿದರು. ಮತ್ತು 1958ರಲ್ಲಿ ಚಿತ್ರರಂಗಕ್ಕೆ ಪ್ರವೇಶಿಸಿ ಸೀತಾರಾಮಶಾಸ್ತ್ರಿ ಯವರಂತಹ ವಿವಿಧ ನಿರ್ದೇಶಕರಿಗೆ ಸಹಾಯಕರಾಗಿ ಕೆಲಸ ಮಾಡಲು ಆರಂಭಿಸಿದರು. ಅವರು ಅನುಭವಿ ಛಾಯಾಗ್ರಾಹಕ ಬೊಮನ್ ಡಿ ಇರಾನಿ ಅವರಿಗೆ ಕ್ಯಾಮೆರಾ ಸಹಾಯಕರಾಗಿಯೂ ಕೆಲಸ ಮಾಡಿದರು.

ಶಿವರಾಮ (actor shivaram) ಮೊದಲ ಬಾರಿ ಬೆಳ್ಳಿ ಪರದೆಯ ಮೇಲೆ 1965ರಲ್ಲಿ ಸೀತಾರಾಮಶಾಸ್ತ್ರಿ ಅವರ ನಿರ್ದೇಶನದ ಮತ್ತು ಸಹ ನಿರ್ಮಾಣದ ಬೆರೆತ ಜೀವ ಚಿತ್ರದಲ್ಲಿ ನಟನಾಗಿ ಕಾಣಿಸಿಕೊಂಡರು. ಏತನ್ಮಧ್ಯೆ ಅವರು ಕೆ ಎಸ್ ಎಲ್ ಸ್ವಾಮಿ, ಗೀತಪ್ರಿಯ, ಸಿಂಗೀತಂ ಶ್ರೀನಿವಾಸರಾವ್ ಮತ್ತು ಪುಟ್ಟಣ್ಣ ಕಣಗಾಲ್ ರಂತಹ ಹಲವಾರು ಪ್ರಮುಖ ನಿರ್ದೇಶಕರಿಗೆ ಸಹಾಯಕರಾಗಿದ್ದರು.

1958 ರಿಂದ 1965 ರ ವರೆಗೆ ಸಹಾಯಕ ನಿರ್ದೇಶಕರಾಗಿ ದುಡಿದ ನಂತರ, ಅವರಿಗೆ ಕಲ್ಯಾಣ್ ಕುಮಾರ್ ನಟಿಸಿದ ಸೀತಾರಾಮಶಾಸ್ತ್ರಿ ಅವರ ಬೆರೆತ ಜೀವ ಚಿತ್ರದಲ್ಲಿ ಪೋಷಕ ಪಾತ್ರದ ಮೂಲಕ ನಟನೆಗೆ ಬ್ರೆ ಕ್ ಸಿಕ್ಕಿತು. ಆಗಿನಿಂದ ಅವರು 2000 ದ ದಶಕದವರೆಗೆ ಹೆಚ್ಚೂ ಕಡಿಮೆ ಎಲ್ಲಾ ನಿರ್ದೇಶಕರ ನಿರ್ದೇಶನದಲ್ಲಿ ನಟಿಸಿದರು. ಚರಿತ್ರ ನಟರಾಗಿ ಅವರ ಅವಿಸ್ಮರಣೀಯ ಅಭಿನಯದ ಚಿತ್ರಗಳಲ್ಲಿ ಶರಪಂಜರ , ನಾಗರಹಾವು, ಶುಭಮಂಗಳ ಸೇರಿವೆ. ಇವೆಲ್ಲವೂ ಪುಟ್ಟಣ್ಣ ಕಣಗಾಲ್ ನಿರ್ದೇಶಿಸಿದ ಚಿತ್ರಗಳು.

ಚಲಿಸುವ ಮೋಡಗಳು, ಶ್ರಾವಣ ಬಂತು, ಹಾಲು ಜೇನು, ಹೊಂಬಿಸಿಲು, ಹೊಸ ಬೆಳಕು, ಗುರು ಶಿಷ್ಯರು, ಸಿಂಹದಮರಿ ಸೈನ್ಯ, ಮಕ್ಕಳ ಸೈನ್ಯ ಇಂಥ ಅನೇಕ ಚಲನಚಿತ್ರಗಳಲ್ಲಿ ಅವರ ಹಾಸ್ಯ ಪಾತ್ರಗಳು ಜನರ ಮೆಚ್ಚುಗೆ ಪಡೆದವು. ಅವರು ಡ್ರೈವರ್ ಹನುಮಂತು (1980) ದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡರು.

 2000 ರ ನಂತರ ವರ್ಷ‍್ಷಗಳಲ್ಲಿ ಅವರು ಬರ ಮತ್ತು ತಾಯಿ ಸಾಹೇಬ ದಂತಹ ಸಮಾನಾಂತರ ಚಿತ್ರಗಳಲ್ಲೂ ಎಂದು ಆಪ್ತಮಿತ್ರ, ಹುಚ್ಚ ದಂತಹ ಪ್ರಮುಖ ಯಶಸ್ವಿ ಚಿತ್ರಗಳಲ್ಲಿ ಪೋಷಕ ಪಾತ್ರಗಳಲ್ಲಿ ನಟಿಸಿದರು. ಅವರು ಗಿರೀಶ್ ಕಾಸರವಳ್ಳಿ ನಿರ್ದೇಶಿಸಿದ ಗೃಹಭಂಗ ಟೆಲಿವಿಷನ್ ಧಾರಾವಾಹಿಯಲ್ಲೂ ಮತ್ತು ರವಿಕಿರಣ್ ನಿರ್ದೇಶಿಸಿದ ಬದುಕು ಧಾರಾವಾಹಿಯಲ್ಲೂ ಅಭಿನಯಿಸಿದ್ದರು.

ತನ್ನ ಸಹೋದರ ಎಸ್ ರಾಮನಾಥನ್ ಜತೆಗೂಡಿ “ರಾಶಿ ಬ್ರದರ್ಸ್ ” ಎಂಬ ಚಿತ್ರ ನಿರ‍್ಮಾಣ ಸಂಸ್ಥೆಯನ್ನು ಸ್ಥಾಪಿಸಿ ಮತ್ತು ಗೆಜ್ಜೆಪೂಜೆ (1970), ಉಪಾಸನೆ(1974), ನಾನೊಬ್ಬ ಕಳ್ಳ (1979), ಡ್ರೈವರ್ ಹನುಮಂತು(1980) ಮತ್ತು ಬಹಳ ಚೆನ್ನಾಗಿದೆ (2001) ಗಳಂತಹ ಯಶಸ್ವೀ ಮತ್ತು ವಿಮ್ರ‍್ಶಕರ ಮೆಚ್ಚುಗೆ ಪಡೆದ ಚಿತ್ರಗಳನ್ನು ನಿರ್ಮಿಸಿದ್ದರು.

ಕನ್ನಡ ಚಿತ್ರರಂಗಕ್ಕೆ ಹಿರಿಯ ನಟನನನು (actor shivaram) ಕಳೆದುಕೊಂಡು ಅನಾಥ ಭಾವ ಮೂಡಿದೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!