- Advertisement -Newspaper WordPress Theme
ಹೋರಾಟ ವೀರರುವಿಜಯಪುರದ ವೀರ. ಮಹಾನ್ ದೇಶಭಕ್ತನ ರೋಚಕ ಕಥೆ

ವಿಜಯಪುರದ ವೀರ. ಮಹಾನ್ ದೇಶಭಕ್ತನ ರೋಚಕ ಕಥೆ

ಸ್ವಾತಂತ್ರ್ಯದ ಕಿಚ್ಚು ಅಂದ್ರೇನೆ ಹಾಗೆನೆ ಅಲ್ವಾ, ನಾಡು-ನುಡಿ ರಕ್ಷಣೆ, ಸ್ವಾಭಿಮಾನ, ದೇಶಭಿಮಾನ, ಹೋರಾಟದ ಮನೋಭಾವಗಳು ಒಂದು ಭಾರಿ ಮನದಲ್ಲಿ ಮೊಳಕೆಯೊಡೆದರೆ ಸಾಕು ತನ್ನ ಸರ್ವಸ್ವವನ್ನು ತ್ಯಾಗ ಮಾಡಿ ಎಂತಹವರನ್ನು ರಣರಂಗಕ್ಕೆ ಧುಮುಕುವಂತೆ ಮಾಡಿಬಿಡುತ್ತದೆ. ಎದುರಾಳಿಗಳು ಎಷ್ಟೇ ಭಲಿಷ್ಠರಾಗಿದ್ದರು ಕೂಡಾ ರಣ ತಂತ್ರಗಳನ್ನು ರೂಪಿಸಿ, ವಿರೋಧಿಗಳ ಹೆಡೆಮುರಿಕಟ್ಟಲು ಟೊಂಕಕಟ್ಟಿನಿಂತು, ಸಾವಿರಾರು ವೀರರು ಈ ಭರತ ನಾಡಿನ ಪುಣ್ಯಭೂಮಿಯಲ್ಲಿ ವೀರ ಮರಣ ಹೊಂದಿದ್ದಾರೆ. ಬರೀ ಕತ್ತಿ, ಕೋವಿಗಳಿಂದ ಹೋರಾಟ ನಡೆಸುತ್ತಿದ್ದ ಅಂದಿನ ದಿನಗಳಲ್ಲಿ, ಅಂದಿನ ಬಿಜಾಪುರ ಜಿಲ್ಲೆಯಲ್ಲಿ ಮದ್ದು ಗುಂಡುಗಳನ್ನು ಖುದ್ದಾಗಿ ತಯಾರಿಸಿ, ಪಿರಂಗಿಗಳನ್ನು ಬ್ರಿಟಿಷರತ್ತ ಮುಖಮಾಡಿ ನಿಲ್ಲಿಸಿ, ಮಹಾನ್ ವೀರ ಸಾಹಸಿಗ ಎಂದೇ ಗುರುತಿಸಿಕೊಂಡಿದ್ದ ದೇಶಮುಖ ಮನೆತನದ ಜ್ಯೋತಿ ಬಸಲಿಂಗಪ್ಪ ವೀರಸಂಗಪ್ಪ ಅವರ ಹೆಜ್ಜೆ ಗುರುತುಗಳನ್ನ ಇಂದಿನ ಸ್ವಾತಂತ್ರ್ಯದ ದಿನದಂದು ಸ್ಮರಿಸೋಣ.

ಅದು 1857ರ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದ ಸಮಯ, ಆಂಗ್ಲರ ದಬ್ಬಾಳಿಕೆ, ಭಾರತದ ವಿರೋಧ ನೀತಿಗಳು, ಬ್ರಿಟಿಷ್ ಅಧಿಕಾರಿಗಳ ಕಿರುಕುಳ, ಭಾರತೀಯ ಸಂಪ್ರದಾಯದ ಮರಿಚಿಕೆ, ಅರ್ಥವಿಲ್ಲದ ಕಾನೂನುಗಳು ಹೀಗೆ ಹಲವಾರು ಕಾರಣಗಳಿಂದ ಬ್ರಿಟಿಷರ ಆಡಳಿತದ ವಿರುದ್ಧ ದೇಶ್ಯಾದ್ಯಂತ ಆಕ್ರೋಶ ಹೆಚ್ಚಾಗಿತ್ತು. ಅಂತಹ ದಿನಗಳಲ್ಲಿ ಕರುನಾಡಿನ ಕಿತ್ತೂರು ಆಸ್ಥಾನ ರಾಣಿ ಚನ್ನಮ್ಮಳಿಂದ ಕೈ ತಪ್ಪಿ ಹೋಗಿದ್ದು ಒಂದೆಡೆಯಾದರೆ, ಇತ್ತ ಸುರಪುರದ ರಾಜಾ ವೆಂಕಟಪ್ಪ ನಾಯಕನ ಆಸ್ಥಾನವೂ ನಿಸ್ಸಹಾಯಕವಾಗಿ ದಿನಕಳೆಯುತ್ತಿತ್ತು. ಈ ಎರಡು ಆಸ್ಥಾನಗಳನ್ನು ಮತ್ತೆ ತಲೆ ಎತ್ತುವಂತೆ ಮಾಡಬೇಕೆಂದು ಕೊಟ್ನಾಳ ಕೋಟೆಯಲ್ಲಿ ರೋಷಾಗ್ನಿಯಿಂದ ಪ್ರತಿಜ್ಞೆ ಮಾಡಿ, ಸದ್ದಿಲ್ಲದೇ ಖುದ್ದು ತಾನಾಗಿಯೇ ಮದ್ದು, ಗುಂಡುಗಳನ್ನು ತಯಾರಿಸುವ ಕಾರ್ಯವನ್ನು ಭರದಿಂದ ಆರಂಭಿಸಿದ್ದರು ಬಸಲಿಂಗಪ್ಪ ದೇಶಮುಖರು. ಜಂಬಗಿ – ಕೊಟ್ನಾಳ ಕೋಟೆಯೋಳಗೆ ಚೌಕಾಕಾರದ ಬೃಹತ್ ಗಾತ್ರದ ಕೊಠಡಿಯೊಳಗೆ ಮದ್ದು, ಗುಂಡುಗಳನ್ನು ಸೇಖರಿಸಿ ಯಾರಿಗೂ ಸುಳಿವು ನೀಡದೇ ತಮ್ಮ ಕಾರ್ಯ ಮುಂದುವರೆಸಿದ್ದರು. ಮದ್ದು ಗುಂಡುಗಳ ಅರಿವೇ ಇರದ ಅಂದಿನ ದಿನಗಳಲ್ಲಿ ಅವುಗಳನ್ನು ತಯಾರಿಸುವ ಬುದ್ಧಿ ಶಕ್ತಿ ಹೊಂದಿದ್ದ ಬಸಲಿಂಗಪ್ಪನವರ ಸಾಹಸದ ಕಥೆ ರೋಚಕವೇ ಸರಿ.

ಕೊಟ್ನಾಳ ಕೋಟೆಯಲ್ಲಿ ಅಗತ್ಯಕ್ಕೆ ಬೇಕಾದಷ್ಟು ಸ್ಪೋಟಕ ವಸ್ತುಗಳನ್ನು ತಯಾರಿಸಿಕೊಂಡು, ಸಂಸ್ಥಾನಗಳ ಅಪ್ಪಣೆಗಾಗಿ ಕಾದು ಕುಳಿತಿದ್ದರು ಬಸಲಿಂಗಪ್ಪನವರು. ಕೋಟೆಯ ಸುತ್ತಲಿನ ನಾಲ್ಕು ದಿಕ್ಕಿನಲ್ಲಿರುವ ಬುರ್ಜ್ ಗಳಲ್ಲಿ ಮದ್ದು ಗುಂಡುಗಳನ್ನು ಸೇಖರಿಸಿ ಆಂಗ್ಲರನ್ನು ಸದೆಬಡಿಯಲು ಕಾತುರತೆಯಿಂದ ಕಾದು ಕುಳಿತಿದ್ದರು. ಅದ್ಯಾವ ವಕ್ರದೃಷ್ಠಿ ದೇಶಮುಖ ಮನೆತನದ ಮೇಲೆ ಬಿದ್ದಿತೋ ತಿಳಿಯದು, ಆದರೆ ಇವರ ಸ್ಪೋಟಕ ವಸ್ತುಗಳ ಸೇಖರಣೆಯ ಬಗ್ಗೆ ಬ್ರಿಟಿಷ್ ಅಧಿಕಾರಿಗಳಿಗೆ ಮಾಹಿತಿ ತಲುಪಿತು. ಹೊಂಚು ಹಾಕಿ ಕೆಂಪು ಮೂತಿಯ ಅಧಿಕಾರಿಗಳು ವೀರ ಬಸಲಿಂಗಪ್ಪನನ್ನು ಬಂಧಿಸುತ್ತಾರೆ. ಕೊಟ್ನಾಳ ಕೋಟೆಯ ಮೇಲೆ ಆಕ್ರಮಣ ಮಾಡಿ ಸೇಖರಿಸಿಟ್ಟಿದ್ದ ಮದ್ದು ಗುಂಡುಗಳನ್ನ ವಶಕ್ಕೆ ಪಡೆದು, ಬ್ರಿಟಿಷರ ಬೇಡಿಯಲ್ಲಿ ಬಂಧಿತವಾದ ಬಸಲಿಂಗಪ್ಪರಿಗೆ ಸ್ಪೋಟಕ ವಸ್ತುಗಳ ತಯಾರಿಕೆ ಬಗ್ಗೆ ಬಾಯ್ಬಿಡುವಂತೆ ಜೈಲಿನಲ್ಲಿ ಅನೇ ರಿತಿಯಲ್ಲಿ ಚಿತ್ರಹಿಂಸೆ ನೀಡಲಾಗುತ್ತೆ, ಆಂಗ್ಲರ ಏಟಿಗೆ ಜಗ್ಗದ ವೀರ ಬಸಲಿಂಗಪ್ಪನನ್ನು ಅಪರಾಧಿ ಎಂದು ಪರಿಗಣಿಸಿ ನೇಣಿಗೆ ಏರಿಸಲಾಯಿತು ಅಂತ ಇತಿಹಾಸ ಹೇಳುತ್ತದೆ.

ಈ ಸುದ್ದಿಯನ್ನೂ ನೋಡಿ… ಬಂಡಾಯದ ಹುಲಿ ನಾನಾಸಾಹೇಬ

ಗಂಡು ಮೆಟ್ಟಿದ ನಾಡು ಕಿತ್ತೂರಿನಲ್ಲಿ ಮತ್ತೆ ಚನ್ನಮ್ಮಳ ಆಡಳಿತ ಕಣ್ತುಂಬಿಕೊಳ್ಳಬೇಕೆಂದುಕೊಂಡಿದ್ದ ದೇಶಮುಖ ಮನೆತನದ ಕನಸು ಕನಸಾಗಿಯೇ ಉಳಿಯಿತು. ದೇಶಮುಖ ಮನೆತನದ ವೀರ ಬಸಲಿಂಗಪ್ಪನವರ ಶೌರ್ಯ, ಸಾಹಸ, ತಂತ್ರಗಾರಿಕೆಯ ಕಥೆಯನ್ನ ಕೊಟ್ನಾಳ ಕೋಟೆಯಲ್ಲಿನ ಗೋಡೆಗಳು ಸಾರಿ ಸಾರಿ ಇಂದಿಗೂ ಹೇಳುವಂತಿವೆ. ಅವರು ಸ್ಪೋಟಕ ವಸ್ತುಗಳ ತಯಾರಿಕೆಗೆ ಬಳಸುತ್ತಿದ್ದ ಚೌಕಟ್ಟಿನ ಕಟ್ಟಡ, ಬಳಸುತ್ತಿದ್ದ ಮದ್ದು ಗುಂಡುಗಳು ಇಂದಿಗೂ ಅವರು ಬಾಳಿ ಬದುಕಿದ ಕೋಟೆಯಲ್ಲಿ ಕಾಣ ಸಿಗುವುದು ಅಚ್ಚರಿ.

ಬಸಲಿಂಗಪ್ಪನವರು ಕ್ರಾಂತಿ ಹೋರಾಟದ ಹೆಜ್ಜೆ ಇಡಲು ಹೊರಟಿದ್ದರೂ ಕೂಡಾ ಆಧ್ಯಾತ್ಮದ ಬಗ್ಗೆ ಒಲವು ಹೆಚ್ಚಾಗಿಯೇ ಇತ್ತು. ಮನೆತನದ ಗುರುಗಳಿಗೆ ಉತ್ತಮ ಶಿಷ್ಯರಾಗಿ ಬಾಳಿ ಬದುಕಿದ ಕೀರ್ತಿ ಅವರದ್ದಾಗಿದೆ. ಮನೆತನದ ಗುರುಗಳು ಇವರನ್ನು ಕಾಣಲು ಬಂದಾಗ ಉಳಿದುಕೊಳ್ಳಲು ಕೊಟ್ನಾಳ ಕೋಟೆಯ ಹೋರಬಾಗದಲ್ಲಿ ಒಂದು ಸುಂದರ ಮನೆ, ಎದುರಲ್ಲೇ ಭಾವಿ ನಿರ್ಮಿಸಿದ್ದು ಈಗಲೂ ನಾವು ಕಾಣಬಹುದಾಗಿದೆ. ಇನ್ನು ಒಂದು ಅಚ್ಚರಿಯೆಂದರೇ, ಕಿತ್ತೂರು ಆಸ್ಥಾನದ ರಾಣಿ ಚನ್ನಮ್ಮಳು ಈ ದೇಶಮುಖ ಮನೆತನದ ಸಂಬಧಿ ಎಂಬ ಮಾತುಗಳು ಕೇಲಿಬರುತ್ತಿವೆ. ಈ ಮನೆತನದ ಬಗ್ಗೆ ಇನ್ನಷ್ಟು ಹೆಚ್ಚಿನ ಸಂಶೋಧನೆಗಳು ನಡೆಯಬೇಕಿದೆ. ಅವರು ಬಾಳಿ ಬದುಕಿದ ಕೊಟ್ನಾಳ ಕೋಟೆಯನ್ನು ಪಾಳು ಬಿದ್ದು ಹಾಳಾಗುವ ಮುನ್ನ ರಕ್ಷಿಸಿಸುವ ಕಾರ್ಯವನ್ನು ಮಾಡಬೇಕಿದೆ.

ಇವರ ಸಾಹಸ, ಶೌರ್ಯ, ಹುತಾತ್ಮದ ಸಂಕೇತವಾಗಿ ವಿಜಯಪುರ ನಗರದ ಹೃದಯಬಾಗದಲ್ಲಿ ಹುತಾತ್ಮ ಬಸಲಿಂಗಪ್ಪ ದೇಶಮುಖ ವೃತ್ತ ನಿರ್ಮಿಸಿ ಗೌರವ ಸಲ್ಲಿಸಲಾಗಿದೆ. ಇನ್ನೂ ಜಂಬಗಿ ಗ್ರಾಮದಲ್ಲಿರುವ ದೇಶಮುಖ ಮನೆತನದ ಹಿರಿಯರು ಬಸಲಿಂಗಪ್ಪನವರ ಬೃಹತ್ ಮೂರ್ತಿ ನಿರ್ಮಿಸಿ ಸ್ಮರಿಸಿರುವುದನ್ನು ಕಾಣಬಹುದಾಗಿದೆ. ಸ್ವಾಭಿಮಾನ, ದೇಶ ಎಂದು ಬದುಕು ಸವೆಸಿ, ಹುತಾತ್ಮರಾದ ಬಸಲಿಂಗಪ್ಪ ದೇಶಮುಖರ ಕೊಡುಗೆ ಈ ನಾಡಿನ ಜನತೆಗೆ ಅವಿಸ್ಮರಣೀಯ.

ಬಸಲಿಂಗಪ್ಪನವರನ್ನ ದೇಶಮುಖ ಮನೆತನದ ಬಹದ್ದೂರ್ ಗಂಡು ಅಂತಾನೆ ಕರಿತಿದ್ರು. ಅವ್ರು ಬ್ರಿಟಿಷರ ವಿರುದ್ಧ ಭಾರಿ ಪ್ರಮಾಣದ ಹೋರಾಟಕ್ಕ ಸಿದ್ಧರಾಗಿದ್ದರು, ಅಷ್ಟರೋಳಗ ಅದು ಅವರಿಗೆ ಗೊತ್ತಾಗಿ ಅವರನ್ನ ಬಂಧಿಸಿ ಜೈಲಿಗೆ ಕಳಿಸಿ ಅಲ್ಲೇ ಗಲ್ಲಿಗೇರಿಸಿದ್ರು, ಅವ್ರು ಸ್ಪೋಟಕ ವಸ್ತುಗಳನ್ನ ತಯಾರ ಮಾಡೋದು ಆ ಕಾಲದಾಗನ ಕಲಿತಿದ್ರು, ಅದು ಅವರೊಂದಿಗೆ ಮರೆಯಾಗಿ ಹೋಯಿತು.

– ವಿರುಪಾಕ್ಷಿ ವಾಯ್.ಪಿ

LEAVE A REPLY

Please enter your comment!
Please enter your name here

Subscribe Today

GET EXCLUSIVE FULL ACCESS TO PREMIUM CONTENT

SUPPORT NONPROFIT JOURNALISM

EXPERT ANALYSIS OF AND EMERGING TRENDS IN CHILD WELFARE AND JUVENILE JUSTICE

TOPICAL VIDEO WEBINARS

Get unlimited access to our EXCLUSIVE Content and our archive of subscriber stories.

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!