- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಇಂದು ಜಿಲ್ಲೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ಇಂದು ಜಿಲ್ಲೆಗೆ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್

ವಿಜಯಪುರ: ರಾಜ್ಯದ ರಾಜ್ಯಪಾಲರಾದ ಥಾವರ್ ಚಂದ್ ಗೆಹ್ಲೋಟ್ ಅವರು ಇದೇ ನವೆಂಬರ್ 8 ಮತ್ತು 9 ರಂದು ವಿಜಯಪುರ ಜಿಲ್ಲಾ ಪ್ರವಾಸ ಕೈಗೊಂಡಿದ್ದು, ವಿವಿಧ ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ.

ಇಂದು ನ. 8 ರಂದು ಮದ್ಯಾಹ್ನ 3.40 ಗಂಟೆಗೆ ವಿಜಯಪುರದ ಅಕ್ಕಮಹಾದೇವಿ ಮಹಿಳಾ ವಿವಿ ಅತಿಥಿ ಗೃಹದಲ್ಲಿ ವಾಸ್ತವ್ಯ ಮಾಡಿ, 4.15 ಗೆ ಗೋಲಗುಂಬಜ್ ಅತಿಥಿ ಗೃಹಕ್ಕೆ ಆಗಮಿಸುವರು. 4.25 ಗಂಟೆಗೆ ಗೋಲಗುಂಬಜಕ್ಕೆ ಭೇಟಿ ನೀಡಿ 4.45 ಗಂಟೆಗೆ ಗೋಲಗುಂಬಜನಿಂದ ಬಾರಾಕಮಾನಕ್ಕೆ ತೆರಳುವರು.

ಸಂಜೆ 4.55 ಗಂಟೆಗೆ ಗೋಲಗುಂಬಜ್‌ದಿಂದ ಬಾರಕಮಾನಗೆ ತೆರಳುವರು.ಸಂಜೆ 5.15 ಕ್ಕೆ ಬಾರಕಮಾನದಿಂದ, ಅಕ್ಕಮಹಾದೇವಿ ಮಹಿಳಾ ವಿವಿ ಅತಿಥಿ ಗೃಹ ತೆರಳುವರು ಹಾಗೂ ವಾಸ್ತವ್ಯ ಮಾಡುವರು.

ದಿನಾಂಕ 9ರಂದು ಬೆಳಗ್ಗೆ 9.35 ಗಂಟೆಗೆ ಅಕ್ಕಮಹಾದೇವಿ ಮಹಿಳಾ ವಿ.ವಿಯ ಆವರಣದಲ್ಲಿ ನಡೆಯುವ ಘಟಿಕೋತ್ಸವ ಕಾರ್ಯಕ್ರಮದ ಸ್ಥಳ ತಲುಪಿ, 10 ಗಂಟೆಗೆ ನಡೆಯಲಿರುವ ಘಟಿಕೋತ್ಸವ ಕಾರ್ಯಕ್ರಮದ ಅಧ್ಯಕ್ಷತೆ ವಹಿಸುವರು. ನಂತರ11.00 ಗಂಟೆಗೆ ಕಾರ್ಯಕ್ರಮದಿಂದ ಅತಿಥಿಗೃಹಕ್ಕೆ ತೆರಳುವರು.

ಮಧ್ಯಾಹ್ನ 3.25 ಗಂಟೆಗೆ ಕಲಬುರ್ಗಿ ವಿಮಾನ ನಿಲ್ದಾಣ ತಲುಪಿ 3.45 ಗಂಟೆಗೆ ಕಲಬುರ್ಗಿ ವಿಮಾನ ನಿಲ್ದಾಣದಿಂದ ಬೆಂಗಳೂರಿಗೆ ಪ್ರಯಾಣ ಬೆಳೆಸಲಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!