- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯನಿರ್ಗಮಿತ ಡಿಸಿ ಪಿ.ಸುನೀಲ ಕುಮಾರ ಅವರ ಭಾವನಾತ್ಮಕ ಮಾತುಗಳು

ನಿರ್ಗಮಿತ ಡಿಸಿ ಪಿ.ಸುನೀಲ ಕುಮಾರ ಅವರ ಭಾವನಾತ್ಮಕ ಮಾತುಗಳು

ವಿಜಯಪುರ: ಹನ್ನೊಂದು ವರ್ಷಗಳ ತಮ್ಮ ವೃತ್ತಿ ಜೀವನದಲ್ಲಿ ಹಿಂತಿರುಗಿ ನೋಡಿದರೆ ಬರೀ ಕೆಲಸವೇ ಕಾಣುತ್ತದೆ, ಕೆಲಸ ಬಿಟ್ಟರೆ ಬೇರೆನೂ ಕಾಣದು ಎಂದು ವಿಜಯಪುರ ಜಿಲ್ಲೆಯ ನಿರ್ಗಮಿತ ಜಿಲ್ಲಾಧಿಕಾರಿ ಪಿ.ಸುನೀಲ್ ಕುಮಾರ ಅವರು ಹೇಳಿದರು.

ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಜಿಲ್ಲಾಡಳಿತದಿಂದ ನಡೆದ ಬೀಳ್ಕೊಡುಗೆ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ತಮ್ಮ 11 ವರ್ಷದ ಯಶಸ್ವಿ ವೃತ್ತಿ ಜೀವನ ಮತ್ತು ಉತ್ತಮ ಆರೋಗ್ಯದ ಯಶಸ್ಸಿನ ಹಿಂದೆ ತಮ್ಮ ಧರ್ಮ ಪತ್ನಿ ಅವರ ಸಹಕಾರ ತುಂಬಾ ದೊಡ್ಡದು ಎಂದು ಅವರು ಭಾವುಕರಾಗಿ ನುಡಿದರು.

ಪ್ರತಿನಿತ್ಯ ಪತ್ರಿಕೆ ಓದಿ ಸಲಹೆ ಮಾರ್ಗದರ್ಶನ ಮಾಡುವ ತಮ್ಮ ಪತ್ನಿಯು ತಮಗೆ ಪ್ರೀತಿ ಸ್ನೇಹದಿಂದ ಮುಖ್ಯವಾಗದೇ, ವಿಶೇಷ ಜವಾಬ್ದಾರಿ ಇರುವ ವ್ಯಕ್ತಿಯಾಗಿ ತಮ್ಮ ಜೊತೆಗಿದ್ದಾರೆಂಬುದು ತಮ್ಮ ತಿಳಿವಳಿಕೆ ಭಾವನೆಯಾಗಿದೆ ಎಂದು ಅವರು ತಿಳಿಸುತ್ತಿದ್ದಂತೆ ವೇದಿಕೆಯ ಎದುರು ಕುಳಿತಿದ್ದ ಅವರ ಪತ್ನಿಯ ಕಣ್ಣಾಲೆಗಳು ಆಗಲೆ ತುಂಬಿ ಹೋಗಿದ್ದವು.

ಚಿಕ್ಕ ವಯಸ್ಸಿನಲ್ಲೇ ಐಎಎಸ್ ಮಾಡುವ ಕನಸಿತ್ತು. ಏನು ಮಾಡಿದರೆ ಸೊಸೈಟಿನಲ್ಲಿ ಒಳ್ಳೆಯ ಕೆಲಸ ಮಾಡಬಹುದು ಎಂದು ಯೋಚಿಸುತ್ತಿದ್ದಾಗ ಹಿರಿಯರೊಬ್ಬರ ಮಾತು ಕೇಳಿ ಡಿಸಿ ಆಗಬೇಕು ಎನ್ನುವ ಬೀಜ ಮನದಲ್ಲಿ ಚಿಗುರೊಡೆಯಿತು. ತಮ್ಮ ಸಹೋದರನ ಸಲಹೆಯ ಮೂಲಕವೂ ತಾವು ಐಎಎಸ್ ಪಾಸು ಮಾಡಿ ದೊಡ್ಡ ಹುದ್ದೆ ಏರುವಂತಾಯಿತು ಸಹೋದರನನ್ನು ಸ್ಮರಿಸಿಕೊಂಡರರು.

ಸಾಫ್ಟವೇರ್ ಇಂಜಿನಿಯರಾಗಿ ನಾಲ್ಕು ವರ್ಷ ಅಮೇರಿಕದಲ್ಲಿ ಮತ್ತು ಚೆನೈದಲ್ಲಿ ಕೆಲಸ ಮಾಡಿದ್ದೇನೆ. ಆರಂಭದಲ್ಲಿ ಮನೆಯ ಆರ್ಥಿಕ ಪರಿಸ್ಥಿತಿ ಸರಿ ಇರಲಿಲ್ಲ. ಒತ್ತಡವೂ ಇತ್ತು. ಅಮೇರಿಕದಲ್ಲಿದ್ದಾಗ ಐಎಎಸ್ ಪಾಸು ಮಾಡಬೇಕು ಎಂಬುದು ಬಿಟ್ಟರೆ ಬೇರೆನೂ ಗುರಿ ಇರಲಿಲ್ಲ. ಹೀಗಾಗಿ ಅಲ್ಲಿಂದ ಕೆಲಸ ಬಿಟ್ಟು ಬಂದು ಐಎಎಸ್ ಪರೀಕ್ಷೆ ಬರೆದು ಪಾಸು ಮಾಡಿಕೊಂಡೆ ಎಂದರು.

ಐಎಎಸ್ ಅಂದರೆ ಅದೊಂದು ದೊಡ್ಡ ಹುದ್ದೆ, ದೊಡ್ಡ ಸಾಧನೆ ಎನ್ನುವ ಯಾವ ಭ್ರಮೆಯೂ ನನ್ನಲ್ಲಿಲ್ಲ. ಕೆಲಸ ಮಾಡಬೇಕು, ಜನರಿಂದ ಮೆಚ್ಚುಗೆ ಪಡೆಯಬೇಕೆಂದೇ ನಾನು ನಾಗರಿಕ ಪರೀಕ್ಷೆ ಪಾಸುಕೊಂಡೆ ಎಂದು ತಮ್ಮ ಮನದಾಳದ ಮಾತುಗಳನ್ನು ಬಿಚ್ಚಿಟ್ಟ ಅವರು, ಐಎಎಸ್ ಹುದ್ದೆಯನ್ನು ಬಳಸಿಕೊಂಡು ನಾವು ಯಾವಾಗ ಜನಸೇವೆ, ದೇಶ ಸೇವೆ ಮಾಡುತ್ತೇವೆಯೋ ಆಗ ನಮ್ಮ ಶ್ರಮ ಸಾರ್ಥಕವಾಗಲಿದೆ ಎಂದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!