- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಿಜೆಪಿ ಸೇರಿದ್ದೀವಿ, ಸಚಿವರಾಗಿದ್ದೀವಿ. ಸಚಿವ ಎಂಟಿಬಿ ನಾಗರಾಜ್

ಬಿಜೆಪಿ ಸೇರಿದ್ದೀವಿ, ಸಚಿವರಾಗಿದ್ದೀವಿ. ಸಚಿವ ಎಂಟಿಬಿ ನಾಗರಾಜ್

ವಿಜಯಪುರ: ವಿಜಯೇಂದ್ರ ಮುಂದೆ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಲಿ, ಪಕ್ಷದ ಸಂಘಟನೆ ಮಾಡಲಿ ಎಂದು ಟಿಕೇಟ್ ನೀಡಿರಲಿಕ್ಕಿಲ್ಲ ಇದು ನನ್ನ ಊಹೆ ಎಂದು ಸಚಿವ ಎಂಟಿಬಿ ನಾಗರಾಜ್ (mtb nagaraj) ಪ್ರತಿಕ್ರಿಯಿಸಿದ್ದಾರೆ.

ವಿಜಯೇಂದ್ರ ಟಿಕೇಟ್ ತಪ್ಪಿದ ವಿಚಾರವಾಗಿ ವಿಜಯಪುರದಲ್ಲಿ ಮಾತನಾಡಿದ ಎಂಟಿಬಿ (mtb nagaraj), ವಿಜಯೇಂದ್ರಗೆ ಇನ್ನು ವಯಸ್ಸಿದೆ, ಯುವಕರಿದ್ದಾರೆ, ಅವರ ತಂದೆಯವರ ಹೆಸರಿದೆ. ತಂದೆ ಮೂರು ಬಾರಿ ಮುಖ್ಯಮಂತ್ರಿಯಾದವರು, ಮುಂದಿನ ದಿನಗಳಲ್ಲಿ ಯುವ ನಾಯಕರಾಗಿ ಬೆಳೆಯುವ ಎಲ್ಲ ಅವಕಾಶ ಇವೆ. ಮುಂದೆ ಜನರಲ್ ಎಲೆಕ್ಷನ್ ನಲ್ಲಿ ಗೆದ್ದು ಶಾಸಕನಾಗಿ, ಪಕ್ಷವನ್ನ ಕಟ್ತಾರೆ, ತಂದೆ ಪಕ್ಷ ಕಟ್ಟಿದಂಗೆ ಮಗ ವಿಜಯೇಂದ್ರ ಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ಪಕ್ಷ ಕಟ್ತಾರೆ ಎಂದು ಹೇಳಿದರು.

ಕಾಂಗ್ರೆಸ್ ನಿಂದ ಬಂದವರು ವಾಪಾಸ್ ವದಂತಿ ವಿಚಾರ ಕುರಿತಾಗಿ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಪಕ್ಷ ಬಿಟ್ಟು 15 ಜನ ಬಂದಿದ್ದೇವೆ, ನಾವ್ಯಾರು ವಾಪಸ್ ಹೋಗಲ್ಲ, ವಾಪಾಸ್ ಹೋಗುವ ಪ್ರಮೇಯ ಇಲ್ಲ, ಬಿಜೆಪಿ ಸೇರಿದ್ದೀವಿ, ಸಚಿವರಾಗಿದ್ದೀವಿ  ಎಂದರು.

ಮಾತು ಮುಂದುವರೆಸಿದ ಸಚಿವ ನಾಗರಾಜ್ ಚುನಾವಣೆಯಲ್ಲಿ ನಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸಿ ಮತ್ತೆ ಗೆದ್ದು ಬರ್ತಿವಿ, ಖಾತೆಯ ಬಗ್ಗೆ ಯಾವುದೇ ಅಸಮಧಾನ ಇಲ್ಲ, ಏನೂ ಇಲ್ಲ, ರಾಜ್ಯದಲ್ಲಿ ಮತ್ತೆ ಬಿಜೆಪಿ ಸರ್ಕಾರ ಬರುತ್ತೆ, ಬಹುಮತಗಳಿಂದ ಅಧಿಕಾರಕ್ಕರ ಬರುತ್ತೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!