- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯRSS ನವರ ಕಯ್ಯಲ್ಲಿ AK47 ಗನ್ ಇರೊಲ್ಲ. ಶಾಸಕ ಯತ್ನಾಳ ಎಚ್ಚರಿಕೆ

RSS ನವರ ಕಯ್ಯಲ್ಲಿ AK47 ಗನ್ ಇರೊಲ್ಲ. ಶಾಸಕ ಯತ್ನಾಳ ಎಚ್ಚರಿಕೆ

ವಿಜಯಪುರ : RSS ಸ್ವಯಂ ಸೇವಕರು ಅನೇಕರು ಅಧಿಕಾರಿಗಳು ಆಗಿರಬಹುದು ಅದೇನು ತಪ್ಪಲ್ಲ. ತಾಲಿಬಾನಿಳಗಂತು ಆಗಿಲ್ಲವಲ್ಲ ಎಂದು ಹೆಚ್ಡಿಕೆ RSS, IAS, IPS ಟ್ರೇನಿಂಗ್ ಹೇಳಿಕೆ ವಿಚಾರವಾಗಿ ಶಾಸಕ ಬಸನಗೌಡ ಪಾಟೀಲ ಯತ್ನಾಳ ಪ್ರತಿಕ್ರಿಯೆ ನೀಡಿದರು.

ವಿಡಿಯೋಗಾಗಿ ಲಿಂಕ್ ಮೇಲೆ ಕ್ಲಿಕ್ ಮಾಡಿ…

ಇವರೆಲ್ಲರ ಸರ್ಕಾರ ಇದ್ದರೆ ತಾಲಿಬಾನಿಗಳನ್ನೆ ಮಾಡುತ್ತಿದ್ದರು. RSS ದೇಶ ಭಕ್ತಿ ಕಲಿಸುವ ಸಂಸ್ಥೆ, ಒಳ್ಳೆಯ ಸಂಸ್ಕಾರ ಕೊಡುವ ಸ್ವಯಂ ಸೇವಕರ ಸಂಘ. ಶಾಖೆಗಳ ಮೂಲಕ ಸಂಸ್ಕಾರ ಕಲಿಸಲಾಗುತ್ತೆ. ಅಧಿಕಾರಿಗಳಿಗೆ ತರಬೇತಿ ಅಲ್ಲ. ಧರ್ಮದ ಸಂಸ್ಕಾರ, ದೇಶಭಕ್ತಿ ಕಲಿಸುವ ಸಂಸ್ಥೆ RSS ಆಗಿದೆ ಎಂದು ಹೆಚ್ಡಿಕೆ ವಿರುದ್ಧ ಯತ್ನಾಳ್ ಗುಡುಗಿದರು.

ಅಲ್ಲದೆ, ಈ ರೀತಿ ಹೇಳಿಕೆ ಕೊಟ್ಟು ಕುಮಾರಸ್ವಾಮಿ ಸಣ್ಣವರಾಗ್ತಾರೆ. RSS ದೇಶ ಭಕ್ತಿಯ ಬಗ್ಗೆ ಹೇಳಿದೆ ಅನ್ನೋದಾದ್ರೆ ಅದ್ರಲ್ಲಿ ತಪ್ಪೇನು? ಅದು ಅಪರಾಧವು ಅಲ್ಲ . RSS ಏನು ತಾಲಿಬಾನಿಗಳನ್ನ ತಯಾರು ಮಾಡೊಲ್ಲ, ಭಯೋತ್ಪಾದಕರನ್ನ ತಯಾರು ಮಾಡೊಲ್ಲ. RSS ನವರ ಕಯ್ಯಲ್ಲಿ AK47 ಗನ್ ಇರೊಲ್ಲ. RSS ಎಲ್ಲಿಯೂ ಬಾಂಬ್ ಹಾಕಿಲ್ಲ. RSS ಬಳಿ ಆತ್ಮಾಹುತಿ ದಳವು ಇಲ್ಲ. ಹೀಗೆ ಹಗುರವಾಗಿ ಮಾತನಾಡೋದನ್ನ ಬಿಡಬೇಕು ಎಂದರು.

ಸಿದ್ದರಾಮಯ್ಯನು ಹೀಗೆ ಮಾತಾಡ್ತಾರೆ, ಇವರಿಗೆ ಭಯ ಬಂದಿದೆ. RSS ಸ್ವಯಂ ಸೇವಕರೇ ದೇಶ ಆಳ್ತಿದ್ದಾರೆ, ಅದ್ರಲ್ಲೇನು. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ, ಗೃಹಮಂತ್ರಿ, ರಕ್ಷಣಾಸಚಿವರು RSS ಸ್ವಯಂ ಸೇವಕರು. ಹೆಚ್ಡಿಕೆ, ಸಿದ್ದರಾಯ್ಯ RSS ಬಗ್ಗೆ ಹಗುರವಾಗಿ ಮಾತನಾಡೋದು ಅವರಿಗೆ ಶೋಭೆ ತರೊಲ್ಲ. ಅವರು ಹೀಗೆ ಮಾತನಾಡ್ತಾ ಹೋದ್ರೆ, ನಾವು ಅವರ ದಾಟಿಯಲ್ಲೆ ಉತ್ತರ ಕೊಡಬೇಕಾಗುತ್ತೆ ಎಂದ ಯತ್ನಾಳ್ ಎಚ್ಚರಿಕೆ ನೀಡಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!