- Advertisement -Newspaper WordPress Theme
ಹೋರಾಟ ವೀರರುಯಾರಿಗೆ ಗೊತ್ತಿಲ್ಲಾ ಹೇಳಿ ಭಗತ್…!

ಯಾರಿಗೆ ಗೊತ್ತಿಲ್ಲಾ ಹೇಳಿ ಭಗತ್…!

ಯಾರಿಗೆ ತಾನೆ ಗೊತ್ತಿಲ್ಲಾ ಹೇಳಿ ಈ ದೇಶ ಭಕ್ತ ಮಹಾತ್ಮ ಹೆಸರು, ಕ್ರಾಂತಿಕಾರಿ ಅಂದಾಕ್ಷಣ ಒಚಿದು ಕ್ಷಣ ನಮ್ಮೆಲ್ಲರ ಕಣ್ಮುಂದೆ ಹಾದು ಹೋಗುವ ಮಹಾನ್ ಶಕ್ತಿಯೇ ಭಗತ್ ಸಿಂಗ್ (Bhagat Singh). ಸ್ವಾಭಿಮಾನಿ, ದೇಶಪ್ರೇಮಿ ಕುಟುಂಬದಲ್ಲಿ ಜನಿಸಿದ ಭಗತ್ ಸಿಂಗ್‌ಗೆ ಕ್ರಾಂತಿಕಾರಿ ಹೋರಾಟಗಾರರ ಪ್ರಭಾವ ಹೆಚ್ಚಾಗಿ ಬೀರಿತ್ತು. ಗಾಂಧಿಜಿಯವರ ಅಹಿಂಸಾತ್ಮಕ ಸತ್ಯಾಗ್ರಹದಿಂದ ಯಾವುದೇ ಫಲ ದೊರಕದು ಎಂದು ತನ್ನ ಹದಿಮೂರನೆ ವಯಸ್ಸಿನಲ್ಲಿಯೇ ಚಿಂತಿಸಿ ಶಸ್ತ್ರ ಸಜ್ಜಿತ ಚಳವಳಿ ಹೂಡಬೇಕೆಂದು ನಿರ್ಧರಿಸಿದ್ದರು ಭಗತ್.

ನಂತರ ಮದುವೆಯಿಂದ ತಪ್ಪಿಸಿಕೊಂಡು, “ನೌಜವಾನ್ ಭಾರತ್ ಸಭಾ”ಎಂಬ ಸಂಘಟನೆಯ ಸದಸ್ಯನಾಗಿ ಕ್ರಾಂತಿಕಾರಿಕ ಹೆಜ್ಜೆಯತ್ತ ಮುನ್ನುಗ್ಗಿದ್ದರು ಭಗತ್ ಸಿಂಗ್ (Bhagat Singh). ಸೈಮನ್ ಆಯೋಗವನ್ನು ದಿಕ್ಕರಿಸಿ ಶಾಂತಿಯುತವಾಗಿ ಪ್ರತಿಭಟಿಸುತ್ತಿದ್ದ ಲಾಲಾ ಲಜಪತರಾಯ ಅವರನ್ನು ಬ್ರಿಟಿಷ್ ಪೊಲೀಸ್ ಮನಬಂದಂತೆ ತಳಿಸಿದ್ದನ್ನು ಕಣ್ಣಾರೆ ಕಂಡ ಭಗತ್ ಕೆರಳಿ ಕೆಂಡದಂತಾದರು. ಕೆಲವೇ ದಿನಗಳಲ್ಲಿ ಲಜಪತರಾಯರು ಸಾವನ್ನಪ್ಪಿದಾಗ ಪ್ರತಿಕಾರಕ್ಕಾಗಿ ಭಗತ್ ಶಪಥಗೈದು ಸ್ಕಾಟ್‌ನ ಬದಲಾಗಿ ಸಾಂಡರ್ಸ್ ಎನ್ನುವ ಅಧಿಕಾರಿಗೆ ಗುಂಡಿಟ್ಟರು. ನಂತರದ ದಿನಗಳಲ್ಲಿ ಕ್ರಾಂತಿಕಾರಿಕ ಚಟುವಟಿಕೆಗಳು ಹೆಚ್ಚತೊಡಗಿದ್ದವು.

ಈ ಸುದ್ದಿಯನ್ನೂ ನೋಡಿ… ಭಗತ್, ದೇಶಭಕ್ತಿ, ಯುವಕರಿಗಾಗಿ ರಾಷ್ಟ್ರನುಡಿಗಳು

ಕ್ರಾಂತಿಕಾರಿಗಳನ್ನು ಮಟ್ಟಹಾಕಲು ಬ್ರಿಟಿಷ್ ಡಿಫೆನ್ಸ್ ಆಪ್ ಇಂಡಿಯಾ ಆಕ್ಟನ್ನು ಜಾರಿಗೆ ತರಲು ನಿರ್ಧರಿಸಿದರು. ಈ ಕರಾಳ ಶಾಸನಕ್ಕೆ ಪ್ರತಿರೋಧವನ್ನು ವ್ಯಕ್ತಪಡಿಸಲು “ಹಿಂದುಸ್ಥಾನ್ ಸೋಷಿಯಲಿಸ್ಟ್ ರಿಪಬ್ಲಿಕ್ ಅಸೋಸಿಯೇಷನ್”ಈ ಸುಗ್ರಿವಾಜ್ಞೆ ಪಾಸು ಮಾಡುವ ಸಂದರ್ಭದಲ್ಲಿ ಅಸೆಂಬ್ಲಿಯೊಳಗಡೆ ಬಾಂಬ್ ಎಸೆಯಲು ನಿರ್ಧರಿಸಿದರು. ಇನ್ ಕ್ವಿಲಾಬ್ ಜಿಂದಾಬಾದ್ಎಂಬ ಕೂಗಿನೊಂದಿಗೆ ಬಾಂಬ್ ಎಸೆದರು. ಅವರು ಎಸೆದಿದ್ದ ಬಾಂಬ್ ಯಾರನ್ನೂ ಗಾಯಗೊಳಿಸಿರಲಿಲ್ಲ. ನಚಿತರ ಪೊಲೀಸರ ವಶಕ್ಕೆ ಪಡೆದು ಕೊನೆಗೆ ಭಗತ್ ಸಿಂಗ್, ರಾಜಗುರು, ಸುಖದೇವ ಮೂವರಿಗೂ ಗಲ್ಲು ಘೋಷಣೆಯಾದ್ದರಿಂದ ದೇಶಭಕ್ತರ ಜೀವನದ ಅಂತಿಮ ತೆರೆ ಬಿದ್ದಿತು. ಸಾರ್ವಜನಿಕರ ಶೋಕದ ಕಟ್ಟೆ ಒಡೆಯಿತು. ಮಹಾ ದೇಶಭಕ್ತ ಭಗತ್ ಸಿಂಗ್ ಎಂದೂ ಮರಣಕ್ಕೆ ಹೆದರಲಿಲ್ಲ. ಇಂದು ಅಂತಹ ಮಹಾನ್ ವೀರನ ಜನ್ಮದಿನವಾಗಿದ್ದು, ಅವರ ಜೀವನದ ಕಥೆಯನ್ನು ನೆನೆಯುತ್ತಾ ಭಗತ್ ಸಿಂಗ್ (Bhagat Singh) ಅವರನ್ನು ನೆನೆಯೋಣ..

ಇನ್ ಕ್ವಿಲಾಬ್ ಜಿಂದಾಬಾದ್…

— ಗಡಿನಾಡ ಕ್ರಾಂತಿ ಟೀಮ್

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!