- Advertisement -Newspaper WordPress Theme
ಅಂಕಣಗಳುಶಿಕ್ಷಕರು ನಿರಾಭಾರಿಯಾಗಿರಬೇಕು. ಗವಿಸಿದ್ದೇಶ್ವರ ಸ್ವಾಮಿಜಿಗಳ ಅದ್ಭುತ ಮಾತುಗಳು

ಶಿಕ್ಷಕರು ನಿರಾಭಾರಿಯಾಗಿರಬೇಕು. ಗವಿಸಿದ್ದೇಶ್ವರ ಸ್ವಾಮಿಜಿಗಳ ಅದ್ಭುತ ಮಾತುಗಳು

ಅಂತರಂಗದಲ್ಲಿ ಪ್ರೇಮ ತುಂಬಿರಬೇಕು. ಯಾವುದಕ್ಕಾದರೂ ಕಿಮ್ಮತ್ತು ಕಟ್ಟಬಹುದು ಆದರೆ, ಪ್ರೇಮಕ್ಕೆ ಕಿಮ್ಮತ್ತು ಕಟ್ಟಬೇಡಿ. ಪ್ರೇಮವಿರುವ ಶಿಕ್ಷಕ ವಿದ್ಯಾರ್ಥಿಗಳ ಹೃದಯದಲ್ಲಿ ಇರುತ್ತಾನೆ. (gavi siddeshwara swamiji)

ಶಿಕ್ಷಕರು ಎಂದರೆ ಜಗತ್ತಿಗೆ ಜ್ಞಾನದಾಸೋಹವನ್ನು ಮಾಡುವಂತವರು, ಅವರು ಮಕ್ಕಳಿಗೆ ಉತ್ತಮ ಹಾದಿಯತ್ತ ಕೊಂಡೊಯ್ಯಬೇಕು. ತಮ್ಮ ವೃತ್ತಿ, ವಿಷಯ, ಶಾಲೆ, ಶಿಕ್ಷಣ, ವಿದ್ಯಾರ್ಥಿಗಳನ್ನು ಪ್ರೇಮಿಸಬೇಕು. ಇಲ್ಲವಾದರೆ ವೃತ್ತಿಯು ಪರಿಪೂರ್ಣವಾಗುವುದಿಲ್ಲ. ಗುರುವಿಗೆ (gavi siddeshwara swamiji) ಹೃದಯದಿಂದ ಕರುಣೆ ತುಂಬಿ ಹರಿಯಬೇಕು.

ಅಲೆಕ್ಸಾಂಡರ್ ಮಹಾರಾಜನಾಗಿದ್ದರೂ ಕೂಡ ತನ್ನ ಗುರು ತತ್ವಜ್ಞಾನಿ ಅರಿಸ್ಟಾಟಲ್‌ಗೆ ಗೌರವವನ್ನು ಕೊಡುತ್ತಿದ್ದ. ಹಾಗಾಗಿ ಒಬ್ಬ ಗುರು ಮಹಾರಾಜನಿಗಿಂತಲೂ ಮಿಗಿಲಾಗಿದ್ದಾನೆ. ವಸ್ತು, ಸಂಪತ್ತು ಎಂದಾದರೂ ಒಂದು ದಿನ ನಾಶವಾಗಬಹುದು. ಆದರೆ, ಜ್ಞಾನ ನಾಶವಾಗುವುದಿಲ್ಲ. (gavi siddeshwara swamiji) ಶಿಕ್ಷಕ ಸದಾ ಹೊಸತನ್ನು ಕಲಿಯುವ ಉತ್ಸಾಹ, ಸೃಜನಾತ್ಮಕತೆಯನ್ನು ಮಕ್ಕಳಿಗೆ ಹೇಳಿ ಕೊಡಬೇಕು. ಶಿಕ್ಷಕ ಬೆಳಗುವ ದೀಪವಾದರೆ, ವಿದ್ಯಾರ್ಥಿ ಆರದ ದೀಪವಿದ್ದಂತೆ, ಶಿಕ್ಷಕರು ನಿರಾಭಾರಿಯಾಗಿರಬೇಕು.

ಜಗತ್ತು ಕೆಟ್ಟಿರಬಾರದು, ನಾವು ಜೀವಿಗಳು ಅನುಭವಿಸುವುದನ್ನು ಬಿಟ್ಟಿರಬಾರದು. ಇಂತಹ ತಾಂತ್ರಿಕತೆಯನ್ನು ತಿಳುವಳಿಕೆ, ಜ್ಞಾನ ಎನ್ನುತ್ತಾರೆ. ಇಂತಹ ಜ್ಞಾನವನ್ನು ಕಲಿಸುವವನು ಗುರು. ವಿದ್ಯೆ ಕಲಿಸುವವರಿಗೆ ಹೇಗೆ ಕಲಿಸಬೇಕು ಎನ್ನುವ ಕುರಿತು ಕಲಿಸಬೇಕಾಗಿರುವುದು ಅದ್ಭುತ, ಇದನ್ನು ತಂತ್ರಜ್ಞಾನ ಎನ್ನುತ್ತೇವೆ. ತಾನು ಕಲಿತ ವಿದ್ಯೆಯನ್ನು ಭಾರವಾಗದಂತೆ ವಿದ್ಯಾರ್ಥಿಗಳಿಗೆ ಕಲಿಸುವುದೇ ತಂತ್ರಜ್ಞಾನ.

ಯಂತ್ರದ ಜೊತೆ ಕೆಲಸ ಮಾಡುವವನು ಎಂಜಿನಿಯರ್, ಜೀವಂತ ದೇವರಗಳ ಜೊತೆ ಕೆಲಸ ಮಾಡುವವರು ಗುರುಗಳು. ಹಾಗಾಗಿ ಗುರುವಿನ ಕೆಲಸ ಸಾರ್ಥಕವಾಗುತ್ತದೆ. ವೃತ್ತಿಯ ಬಗ್ಗೆ ಗೌರವ ಇರಬೇಕು, ವಿಷಯವನ್ನು ಪ್ರೀತಿಸಬೇಕು. ಇದಕ್ಕಾಗಿಯೇ ಬದುಕುತ್ತೇನೆ ಎನ್ನುವಂತಿರಬೇಕು.

ವಿದ್ಯಾರ್ಥಿಗಳನ್ನು ಕೊನೆಯ ಪಕ್ಷ ನಿಮ್ಮ ಮಕ್ಕಳಂತೆ ಪ್ರೀತಿಸಬೇಕು. ಮಕ್ಕಳು ತಾವಾಗೇ ಶಾಲೆಗೆ ಬರುವಂತ ವಾತಾವರಣ ಸೃಷ್ಟಿಸಬೇಕು. ನಾವು ನಮ್ಮ ದೇಹವನ್ನು ಶುಚಿತ್ವವಾಗಿ ಇಟ್ಟುಕೊಂಡಂತೆ ಶಾಲೆಯನ್ನು ಸುಂದರವಾಗಿಟ್ಟು ಕೊಳ್ಳಬೇಕು. ಬಾಗುವ ಗುಣ ಬೆಳೆಸಿಕೊಳ್ಳಬೇಕು. ಶಿಕ್ಷಕ ಜ್ಞಾನ ಪಡೆಯುವಾಗಲೂ ಬಾಗಬೇಕು. ಜ್ಞಾನವನ್ನು ನೀಡಬೇಕಾದರೂ ಬಾಗಬೇಕು.

(ಕೊಪ್ಪಳದ ಜ್ಞಾನಜ್ಯೋತಿ ಶೈಕ್ಷಣಿಕ ಗುಣಮಟ್ಟ ಸುಧಾರಣಾ ಕಾರ್ಯಾಗಾರದ ಕುರಿತಾಗಿ ಶ್ರೀಗಳು ಮಾತನಾಡಿದ್ದು.)


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!