ಆದರ್ಶ ಶಿಕ್ಷಕರನ್ನ ಗುರುತಿಸುವ ಸರ್ಕಾರ ಅವರಿಗೆ ಸನ್ಮಾನ, ಪ್ರಶಸ್ತಿ ನೀಡಿ ಕೈ ತೊಳೆದುಕೊಳ್ಳುತ್ತೆ. ಸಹ ಶಿಕ್ಷಕರು ಒಂದು ಹೂವಿನ ಬೊಕ್ಕೆ ನೀಡಿ ಶುಭಾಶಯ ಹೇಳಿ ಸುಮ್ಮನಾಗುತ್ತಾರೆ. ಆದರೆ ವಿಜಯಪುರ ಜಿಲ್ಲೆ ಅಥರ್ಗಾದಲ್ಲಿ ಆದರ್ಶ ಶಿಕ್ಷಕರೊಬ್ಬರಿಗೆ ನೀಡುತ್ತಿರೋ ಗೌರವವನ್ನ ನೀವು ನೋಡಿದ್ರೆ ಖಂಡಿತ ಖುಷಿಯಾಗುತ್ತಿರಿ. ಯಾಕಂದರೆ ಅಲ್ಲಿ ನಡೆಯುವುದೇ ಅಂತಹ ಅದ್ಬುತ ಕಾರ್ಯ. ಅಥರ್ಗಾ ಗ್ರಾಮದಲ್ಲಿರುವ ದೇವಸ್ಥಾನ, ಇಲ್ಲಿ ದೇವಸ್ಥಾನದಲ್ಲಿರುವುದು ದೇವರ ಮೂರ್ತಿಯಲ್ಲ (revanasiddeshwara Teacher) , ಬದಲಾಗಿ ಈ ಗ್ರಾಮಕ್ಕೆ ಶಿಕ್ಷಕರಾಗಿ ಅಪಾರ ಸೇವೆ ಸಲ್ಲಿಸಿದ ಆದರ್ಶ ಶಿಕ್ಷಕನ ಮೂರ್ತಿಯಿದು.
ಈ ಗ್ರಾಮದಲ್ಲಿ ಶಿಕ್ಷಕರಾಗಿ ಬಂದ ರೇವಣಸಿದ್ದಪ್ಪ ಇಲ್ಲಿನ ವಿದ್ಯಾರ್ಥಿಗಳ ಪಾಲಿನ ದೇವರಾಗಿದ್ದರು. ಮೂಲತಃ ವಿಜಯಪುರ ಜಿಲ್ಲೆ ಬಸವನಬಾಗೇವಾಡಿ ತಾಲೂಕಿನ ಮನಗೂಳಿ ಗ್ರಾಮದವರಾದ ರೇವಣಸಿದ್ದಪ್ಪ (revanasiddeshwara Teacher) ಇಲ್ಲಿಗೆ ಶಿಕ್ಷರಾಗಿ ಬಂದ ಬಳಿಕ ವಿದ್ಯಾರ್ಥಿಗಳ ಬಾಳಲ್ಲಿ ಬೆಳಕು ಮೂಡಿತು. ಇವತ್ತು ಇವರ ಮೂರ್ತಿಯನ್ನ ದೇವರಸ್ಥಾನದಲ್ಲಿಟ್ಟು ಪೂಜೆ ಮಾಡುತ್ತಾರೆ. ಅಲ್ಲದೇ ಮನೆ ಮೆನೆಯಲ್ಲಿ, ಅಂಗಡಿಗಳಲ್ಲಿ ಈ ರೇವಣಸಿದ್ದಪ್ಪ ಅವರ ಭಾವಚಿತ್ರಗಳನ್ನು ಇಟ್ಟು ಪೂಜಿಸಲಾಗುತ್ತದೆ.
ಅಲ್ಲದೆ ಹುಟ್ಟು ಮಕ್ಕಳ್ಳಿಗೆ ಇವರ ಹೆಸರನ್ನು ಇಡಲಾಗುತ್ತದೆ. ಅವರು ನಮ್ಮ ಗ್ರಾಮವನ್ನು ತಿದ್ದಿ ತೀಡಿ, ಸಮಾನತೆಯ ಪಾಠವನ್ನು ಮಾಡಿದ ದಾರ್ಶನಿಕ, ಅವರ ಆದರ್ಶ, ಜೀವನ ಶೈಲಿಯನ್ನು ರೂಢಿಸಿಕೊಂಡು ಹೋದರೆ ಜೀವನದಲ್ಲಿ ಯಶಸ್ಸು ಕಂಡಿತ ಅನ್ನೋದು ಸ್ಥಳೀಯರ ಮಾತು. ಜೊತೆಗೆ ಈ ರೀತಿಯಲ್ಲಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳ ಮಧ್ಯ ಸಂಬಂಧವಿರಬೇಕು, ಗುರುಗಳನ್ನು ಪೂಜ್ಯ ಭಾವನೆಯಿಂದ ನೋಡಬೇಕು ಅನ್ನುತ್ತಾರೆ.
ಅಥರ್ಗಾ ಗ್ರಾಮದಲ್ಲಿ ರೇವಣಸಿದ್ದಪ್ಪ ಶಿಕ್ಷಕರ ಗುಡಿ ಕಟ್ಟಿ ಅವರ ಕಂಚಿನ ಮೂರ್ತಿ ಮಾಡಿದ್ದಾರೆ. ಪ್ರತಿ ವರ್ಷ ಶಿವರಾತ್ರಿ ದಿನ ಇಲ್ಲಿ ಜಾತ್ರೆ ನಡೆಯುತ್ತಿದೆ. ಜಾತ್ರೆ ದಿವಸ ರೇವಣಸಿದ್ದಪ್ಪ ಶಿಕ್ಷಕರ ಅಡ್ಡ ಪಲ್ಲಕಿ ಉತ್ಸವ ಮಾಡುತ್ತಾರೆ. ಶ್ರಾವಣ ಮಾಸದಲ್ಲಿ ಇಲ್ಲಿ ಒಂದು ತಿಂಗಳು ಪ್ರತಿ ದಿನ ಭಜನೆ ಮತ್ತು ಕಿರ್ತನೆಗಳು ನಡೆಯುತ್ತವೆ. ಮಕ್ಕಳು ಭಕ್ತಿಯಿಂದ ಇಲ್ಲಿ ಪಾರ್ಥನೆ ಮಾಡುತ್ತಾರೆ. ಗ್ರಾಮದ ಪ್ರಾಥಮಿಕ ಶಾಲೆಯಲ್ಲಿ ಇವರ ಇನ್ನೊಂದು ಕಂಚಿನ ಮೂರ್ತಿಯನ್ನು ಮಾಡಿ ಇಟ್ಟಿದ್ದಾರೆ. ಶಿಕ್ಷಕರಾಗಿ ಸೇವೆ ಸಲ್ಲಿಸಿ ಗ್ರಾಮದ ಒಬ್ಬ ಪವಾಡ ಪುರುಷನಾಗಿ ರೇವಣಸಿದ್ದಪ್ಪ ಬೆಳೆದರು.
ಈ ಸುದ್ದಿಯನ್ನೂ ನೋಡಿ… ನಾಗಚಂದ್ರ ಜಿಲ್ಲೆಯ ಹೆಮ್ಮೆ
ಒಬ್ಬ ಆರ್ದಶ ಶಿಕ್ಷಕ ಇಂದು ಪ್ರತಿ ಮನೆಯಲ್ಲೂ ನೆಚ್ಚಿನ ಗುರುವಾಗಿದ್ದಾನೆ. ಕೇವಲ 36 ವರ್ಷ ಬದುಕಿದ್ದ ರೇವಣಸಿದ್ದಪ್ಪ ಮಾಸ್ತರ (revanasiddeshwara Teacher) ತೀರಿಕೊಂಡರು. ಇವರ ಧೈವ ಭಕ್ತಿ ಶಿಸ್ತಿನ ಸಿಪಾಯಿ ತರಹ ಇರುವ ಇವರಿಗೆ ಗ್ರಾಮಸ್ಥರು ದೇವಸ್ಥಾನ ಕಟ್ಟಿದ್ದಾರೆ. ಉದ್ಯೋಗ , ಶಿಕ್ಷಣ ಯಾವುದೇ ಕೆಲವು ಈ ಶಿಕ್ಷಕರ ದಯೆಯಿಂದ ನಮಗೆ ಸಿದ್ದಿಯಾಗುತ್ತಿದೆ ಅನ್ನುವುದು ಸ್ಥಳೀಯರ ಮಾತು. ಇಲ್ಲಿ ನಿತ್ಯವು ಮುಂಜಾನೆ ಸಂಜೆ ಪೂಜೆಯನ್ನು ಸಲ್ಲಿಸುತ್ತಾರೆ. ಅಲ್ಲದೆ ಜಿಲ್ಲೆ ಮತ್ತು ರಾಜ್ಯದಿಂದ ಹಲವರು ಈ ಶಿಕ್ಷಕರ ದೇವಸ್ಥಾನವನ್ನು ನೋಡಲು ಬರುತ್ತಾರೆ. ಶಿಕ್ಷಕರ ದಿನದಂದು ಎಲ್ಲ ಕಡೆ ವಿವಿಧ ರೀತಿಯ ಕಾರ್ಯಕ್ರಮಗಳನ್ನು ಮಾಡುತ್ತಾ, ಶಿಕ್ಷಕರಿಗೆ ಗೌರವ ಸಲ್ಲಿಸಲಾಗುತ್ತಿದೆ. ಆದರೆ ವಿಜಯಪುರ ಜಿಲ್ಲೆಯಲ್ಲಿ ಮಾತ್ರ ಈ ರೀತಿ ವಿಭಿನ್ನವಾಗಿ ಶಿಕ್ಷಕರನ್ನು ನೆನೆಯುತ್ತಿರುವುದು ಶಿಕ್ಷಕ ಕುಲಕ್ಕೆ ಹೆಮ್ಮೆ ಎನಿಸಿದೆ.