- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಹೊಂದಾಣಿಕೆ ರಾಜಕಾರಣಿಗಳಿಗೆ ಪಾಠ ಕಲಿಸಿ. ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ

ಹೊಂದಾಣಿಕೆ ರಾಜಕಾರಣಿಗಳಿಗೆ ಪಾಠ ಕಲಿಸಿ. ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ

ಬಸವನಬಾಗೇವಾಡಿ: ರಾಜಕಾರಣದಲ್ಲಿ ಹೊಂದಾಣಿಕೆ ರಾಜಕಾರಣ ಮಾಡಿಕೊಂಡು ಆರಿಸಿ ಬರುವವರಿಗೆ ಹಾಗೂ ದುಡ್ಡು ಕೊಟ್ಟು ಓಟ್ ಬ್ಯಾಂಕ್ ಮಾಡಿಕೊಳ್ಳವವರಿಗೆ ಗ್ರಾಪಂ ಸದಸ್ಯರು ತಕ್ಕ ಪಾಠ ಕಲಿಸಬೇಕು ಎಂದು ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣಾ ಸ್ವಾಭಿಮಾನಿ ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಲೋಣಿ ರಾಷ್ಟ್ರೀಯ ಪಕ್ಷಗಳ ವಿರುದ್ಧ ಹಾರಿಹಾಯ್ದರು.

https://gadinaadakranti.com/on-the-beach-another-torn/

ಅಖಂಡ ತಾಲುಕಿನ ಅಂಗಡಗೇರಿ ಗ್ರಾಮದ ಪವಾಡ ಬಸವೇಶ್ವರ ಮಠದ ಸಭಾಭವನದಲ್ಲಿ ನಡೆದ ವಿಜಯಪುರ-ಬಾಗಲಕೋಟೆ ಅವಳಿ ಜಿಲ್ಲೆಗಳ ಸ್ಥಳೀಯ ಸಂಸ್ಥೆಗಳ ಕ್ಷೇತ್ರದ ವಿಧಾನ ಪರಿಷತ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನನ್ನ ಗೆಲುವಿಗೆ ನೀವೇ ಅಸ್ತçಗಳು. ಸ್ಥಳೀಯ ಸಂಸ್ಥೆಗಳ ಸದಸ್ಯರನ್ನು ಸಂಪೂರ್ಣವಾಗಿ ಕಡೆಗಣಿಸಿ ಸಂವಿಧಾನ ಬದ್ಧವಾಗಿ ಬಂದ ಪವಿತ್ರ ಮತದಾನ ಮಾಡುವ ಹಕ್ಕನ್ನು ಕಸೆದುಕೊಂಡ, ಎರಡು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳು ಒಳ ಒಪ್ಪಂದ ಮಾಡಿಕೊಂಡು ಅವಿರೋಧವಾಗಿ ಆಯ್ಕೆಯಾಗುವ ಹುನ್ನಾರು ನೆಡಸಿದರು ಎಂದು ರಾಷ್ಟ್ರೀಯ ಪಕ್ಷದ ಅಭ್ಯರ್ಥಿಗಳ ವಿರೋಧ ಆಕ್ರೋಶ ವ್ಯಕ್ತಪಡಿಸಿದರು.

ವಿಜಯಪುರ ಜಿಲ್ಲೆಯಲ್ಲಿ ದೊಡ್ಡ ಶಿಕ್ಷಣ ಸಂಸ್ಥೆ ಮಾಡಿಕೊಂಡು ಶಿಕ್ಷಣ ಕ್ಷೇತ್ರವನ್ನು ವ್ಯಾಪಾರಿಕರಣವನ್ನಾಗಿಸಿ ಮಾಡಿಕೊಂಡವರು ಶಿಕ್ಷಣದ ಬಗ್ಗೆ ಕಾಳಜಿ ಇದ್ದರೆ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಉಚಿತವಾಗಿ ಹಾಸ್ಟೇಲ್ ವ್ಯವಸ್ಥೆಯನ್ನು ಕಲ್ಪಿಸಿ ಉಚಿತ ಶಿಕ್ಷಣ ನೀಡಲಿ ಎಂದು ಬಬಲೇಶ್ವರ ಮತಕ್ಷೇತ್ರದ ಶಾಸಕ ಎಂ.ಬಿ.ಪಾಟೀಲರಿಗೆ ಸವಾಲ ಹಾಕಿ ಆಕ್ರೋಶವ್ಯಕ್ತಪಡಿಸಿದರು.

https://gadinaadakranti.com/the-last-solar-eclipse-this-year/

 ಈ ಸಂದರ್ಭದಲ್ಲಿ ಅಖಂಡ ತಾಲೂಕಿನ ವಿವಿಧ ಗ್ರಾಪಂ ಸದಸ್ಯರಾದ ಮಹೇಶ ಲೋಟಗೇರಿ, ರಾಮಣ್ಣ ಹೊಸಮನಿ, ಮಲ್ಲಿಕಾರ್ಜುನ ಕುಂಬಾರ, ಕನಕಪ್ಪ ಬಂಡಿವಡ್ಡರ, ಸಾಹೇಬಗೌಡ ಪಾಟೀಲ, ಕಾಶೀಬಾಯಿ ಉಳ್ಳಾಗಡ್ಡಿ, ನಾಮದೇವ ರಾಠೋಡ, ಬಿ.ಎಲ್.ಹಡಲಗೇರಿ, ಗಣಾಚಾರಿ, ಎಂ.ಎಚ್.ಪಠಾಣ ಮಾತನಾಡಿದರು. ಡಿ.ಎ.ಪಾಟೀಲ, ಈರನಗೌಡ ಪಾಟೀಲ, ಬಸವರಾಜ ಚಿಮ್ಮಲಗಿ, ಸಂಗನಗೌಡ ಯಕಂಚಿ, ಕವಿತಾ ರಾಠೋಡ, ಬಸವಂತರಾಯ ಮಂದೇವಾಲ, ಅಶೋಕ ನಿಂಗನೂರ, ಗೋಪಾಲ ನಿಕ್ಕಮ್, ಬಿ.ಎಲ್.ಕಾಡಸಿದ್ಧ ಸೇರಿದಂತೆ ಇತರರು ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!