- Advertisement -Newspaper WordPress Theme
ಅಂಕಣಗಳುಕರುನಾಡ ರತ್ನಬಸವನಾಡಿನ ಹಳ್ಳಿ ಹಕ್ಕಿ ಬಸವರಾಜ್ ಹೂಗಾರ

ಬಸವನಾಡಿನ ಹಳ್ಳಿ ಹಕ್ಕಿ ಬಸವರಾಜ್ ಹೂಗಾರ

ಕಲೆ, ಸಾಹಿತ್ಯ, ವಚನಗಳ ತವರೂರು ಹೀಗೆ ಹಲವಾರು ವಿಶೀಷ್ಠತೆಗಳಿಗೆ ಹೆಸರುವಾಸಿಯಾಗಿರುವ ಬಸವ ಜನ್ಮಭೂಮಿಯಲ್ಲಿ ತನ್ನದೇ ಆದ ಪ್ರಾಮುಖ್ಯತೆ ಹೊಂದಿ, ಕಲೆಯನ್ನೇ ಕರಗತವನ್ನಾಗಿಸಿಕೊಂಡ ಪರಿಣಿತ ತಬಲಾ ಸಾಧಕ ಬಸವರಾಜ್ ಹೂಗಾರವರ (Basavaraj Hugar) ಸಾಧನೆ ಮೆಚ್ಚುವಂತಹದ್ದಾಗಿದೆ.

ಬಸವರಾಜ ಹೂಗಾರ ಅವರು, ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ನರಸಲಗಿ ಗ್ರಾಮದಲ್ಲಿ ಜನಿಸಿದರು. ಚಿಕ್ಕ ವಯಸ್ಸಿನಲ್ಲಿ ತಂದೆ ತಾಯಿಯನ್ನು ಕಳೆದುಕೊಂಡ ಇವರಿಗೆ ಸಾಹಿತ್ಯ ಸಂಗೀತ ಕಲಾವಿಹಿನಹಃ ಸಾಕ್ಷುತ್ ಪಶುಃ ಪುಚ್ಚ ಪುರಾಣ ಹೀನಃ” ಎಂಬ ಮಾತಿನಂತೆ ಗ್ರಾಮದಲ್ಲಿ ನಡೆಯುವ ಪುರಾಣ, ಭಜನೆ, ಹಾಗೂ ಇನ್ನೀತರ ಕಲಾ ಚಟುವಟಿಕೆಗಳ ಕಾರ್ಯಕ್ರಮಗಳಲ್ಲಿ ಮಾಡುವ ತಬಲಾ ವಾದಕರ ಪಕ್ಕ ಕುಳಿತು, ತಾನು ಕೂಡಾ ತಬಲಾ ವಾದಕನಾಗುವ ಹೊಂಗನಸು ಕಾಣುತ್ತಿದ್ದರು.

ತಮ್ಮ ನಾಲ್ಕನೆಯ ವಯಸ್ಸಿನಲ್ಲಿಯೇ ಸಂಗೀತದಲ್ಲಿ ತುಂಬಾ ಆಸಕ್ತಿ ಹೊಂದಿದ್ದರು. ಹೂಗಾರ್ (Basavaraj Hugar) ಇವರ ಸಂಗೀತದ ಆಸಕ್ತಿಯನ್ನು ಕಂಡು ಆರ್ಥಿಕ ಸಂಕಷ್ಟದಲ್ಲಿರುವ ಇವರಿಗೆ ಗ್ರಾಮದ ಜನರ ನೆರವಿನ ಹಸ್ತದಿಂದ ತಾಳಿಕೋಟಿಯ ಶ್ರೀ ಖಾಸ್ಗತೇಶ್ವರ ಸಂಗೀತ ಮಹಾ ವಿದ್ಯಾಲಯಕ್ಕೆ ಸೇರಿಸಕೊಂಡರು. ನಾಲ್ಕನೆಯ ವರ್ಗದವರೆಗೆ ಓದಿದ ಇವರು, ಶ್ರೀ ಪಿ ಎ ಸಾಲಿಮಠ ಗವಾಯಿಗಳ ಗರಡಿಯಲ್ಲಿ ತಬಲಾ ವಾದ್ಯದ ಅಭ್ಯಾಸ ಮಾಡತೊಡಗಿದರು. ಗವಾಯಿಗಳ ಮಾರ್ಗದರ್ಶನದಂತೆ ತುಂಬಾ ಹೆಮ್ಮೆ ಆಸಕ್ತಿಯಿಂದ ಕಡಿಮೆ ಅವಧಿಯಲ್ಲಿಯೇ ಸಂಪೂರ್ಣವಾಗಿ ತಬಲಾ ವಾದ್ಯವನ್ನು ಕರಗತ ಮಾಡಿಕೊಂಡರು.

ಈ ಸುದ್ದಿಯನ್ನೂ ನೋಡಿ… ಬಸವನಾಡಿನ ವೀರ ಪುತ್ರ ಹಂಡೆ ಹನುಮಪ್ಪನಾಯಕ

ತಾಳಿಕೋಟಿಯಲ್ಲಿ ನಡೆದ ಧಾರ್ಮಿಕ ಸಮಾರಂಭದಲ್ಲಿ ತಮ್ಮ ತಬಲಾ ವಾದ್ಯ ನುಡಿಸುವ ಮೂಲಕ ಪ್ರೇಕ್ಷಕರ ಮನಸ್ಸು ಗೆಲ್ಲುವ ಮೂಲಕ ಖ್ಯಾತಿ ಪಡೆದರು. ತಬಲಾ ವೃತ್ತಿಯಲ್ಲಿ ಸಾಧನೆ ಮಾಡಬೇಕು ಎಂದು ಅಂದು ನಿರ್ಧಾರ ಮಾಡಿದ ಬಸವರಾಜ್ ಹೆಚ್ಚಿನ ಅಭ್ಯಾಸವನ್ನು ಮಾಡತೊಡಗಿದರು. ನಂತರದ ದಿನಗಳಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ನಡೆಯುವ ನಾಟಕ, ಸಂಗೀತ ಕಾರ್ಯಕ್ರಮಗಳು ಸೇರಿದಂತೆ ಇನ್ನೀತರ ಕಾರ್ಯಕ್ರಮಗಳಲ್ಲಿ ತಬಲಾ ನುಡಿಸುತ್ತಾ, ತಾಲೂಕಿನ್ನಲಿಯೇ ಹೆಸರುವಾಸಿಯಾದರು. 

ನಂತರ ಶ್ರೀ ಕುಮಾರೇಶ್ವರ ನಾಟ್ಯ ಸಂಘದಲ್ಲಿ ಎರಡು ದಶಕಗಳ ಕಾಲ ಕಲಾ ಸೇವೆ ಸಲ್ಲಿಸಿದ್ದಾರೆ. ಸ್ಪೂರ್ತಿಯ ಭಾರತಿ ನಾಟ್ಯ ಸಂಘದಲ್ಲಿ, ಕುಮಾರೇಶ್ವರ ಕೃಪಾ ಘೋಷಿತ ಪಂಚಾಕ್ಷರಿ ಗವಾಯಿ ನಾಟ್ಯ ಸಂಘ, ಕಟಗೇರಿಯ ಸಂಗಮೇಶ್ವರ ನಾಟ್ಯ ಸಂಘ, ಹೀಗೆ ಗ್ರಾಮೀಣ ಪ್ರದೇಶದಲ್ಲಿ ನಡೆಯುವ ನಾಟಕದ ಪ್ರದರ್ಶನದಲ್ಲಿ ತಮ್ಮ ತಬಲಾ ವಾದನದ ಕೈಚಳಕ ತೋರಿದ್ದಾರೆ. ಇವರ ತಬಲಾ ನಾಧವು ಕರುನಾಡಿನಾಚೆ ಕರ್ನಾಟಕ ಗೋವಾ ಮತ್ತು ಮಹಾರಾಷ್ಟ್ರದಲ್ಲಿ ನಡೆಯುವ ಕಾರ್ಯಕ್ರಮಗಳಲ್ಲಿ ಭಾಗಿಯಾಗಿ, ತಮ್ಮ ಕೈ ಚಳಕದ ಮೂಲಕ ಬಸವನಾಡಿನ ಕೀರ್ತಿ ಹೆಚ್ಚಿಸಿದ್ದಾರೆ.

ಬಸವರಾಜ ಹೂಗಾರ (Basavaraj Hugar) ಅವರ ಅವಿರತ ಕಲಾಸೇವೆಗೆ ಹತ್ತಾರು ಪ್ರಶಸ್ತಿಗಳು ಅರಿಸಿ ಬಂದಿವೆ. ನಾಟಕ ಅಕಾಡೆಮಿ ಪ್ರಶಸ್ತಿ, ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ, ಕಲಾ ಕೇಸರಿ, ಸಂಗೀತ ರತ್ನ, ವಿರಕ್ತ ಶ್ರೀ ಸೇರಿದಂತೆ ಪ್ರಮುಖ ಪ್ರಶಸ್ತಿಗಳನ್ನು ಮುಡಿಗೇರಿಸಿಕೊಂಡಿದ್ದಾರೆ. ಸದ್ಯ ಬಸವರಾಜ ಅವರು ಸ್ವ ಗ್ರಾಮ ನರಸಲಗಿಯಲ್ಲಿ ವಾಸಿಸುತ್ತಿದ್ದು, ಕಲೆಗಳನ್ನು ಉಳಿಸಿ, ಬೆಳೆಸುತ್ತಾ, ತಬಲಾ ವೃತ್ತಿಯಲ್ಲಿಯೇ ಕಾಲ ಕಳೆಯುತ್ತಾ ಯುವ ಕಲಾವಿದರಿಗೆ ಸ್ಪೂರ್ತಿಯಾಗಿದ್ದಾರೆ.  

— ಗುರು ಹೂಗಾರ

LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!