- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಗುಮ್ಮಟ ಆವರಣದಲ್ಲಿ ಸ್ವಚ್ಛತಾ ಪಕ್ವಾಡ

ಗುಮ್ಮಟ ಆವರಣದಲ್ಲಿ ಸ್ವಚ್ಛತಾ ಪಕ್ವಾಡ

ವಿಜಯಪುರ: ಪ್ರವಾಸೋದ್ಯಮ ಪುನರಾವಲೋಕನ ಸಂದೇಶದಡಿ ವಿಶ್ವ ಪ್ರವಾಸೋದ್ಯಮ ದಿನಾಚರಣೆ-2022 ರ ಅಂಗವಾಗಿ ನಗರದ (Vijayapura) ಐತಿಹಾಸಿಕ ಗೋಲಗುಂಬಜ್ (Gol Gumbaz) ಆವರಣದಲ್ಲಿ ಸ್ವಚ್ಛತಾ ಪಕ್ವಾಡ (swachhta pakhwada) ಕಾರ್ಯಕ್ರಮವು ನಡೆಯಿತು.

ಜಿಲ್ಲಾಡಳಿತ, ಭಾರತೀಯ ಪುರಾತತ್ವ ಸರ್ವೇಕ್ಷಣಾ ಇಲಾಖೆ, ಹೊಟೆಲ್ ಅಸೋಶಿಯೇಶನ್, ಆರ್‌ಕೆಎಂ ಶಿಕ್ಷಣ ಸಂಸ್ಥೆ ಇವರ ಆಶ್ರಯದಲ್ಲಿ ಗೋಲಗುಂಬಜ್ ಆವರಣದಲ್ಲಿ ನಡೆದ ಕಾರ್ಯಕ್ರಮಕ್ಕೆ ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರಾದ ಮಲ್ಲಿಕಾರ್ಜುನ ಭಜಂತ್ರಿ ಅವರು ಚಾಲನೆ ನೀಡಿದರು.

ಈ ವೇಳೆ ಮಾತನಾಡಿದ ಅವರು, ದೇಶದ ಆರ್ಥಿಕ ಬೆಳವಣಿಗೆಯಲ್ಲಿ ಪ್ರವಾಸೋದ್ಯಮದ ಪಾತ್ರ ಅತ್ಯಂತ ಪ್ರಮುಖವಾದುದಾಗಿದೆ. ಈ ನಿಟ್ಟಿನಲ್ಲಿ ನಮ್ಮ ದೇಶದ ಐತಿಹಾಸಿಕ ತಾಣಗಳ ರಕ್ಷಣೆಯಾಗಬೇಕಿದೆ. ನಮ್ಮ ನೆಲದ ಭವ್ಯ ಇತಿಹಾಸದ ಕಥೆಗಳನ್ನು ಹೇಳುವ ನಾಡಿನ ಅನೇಕ ಕೋಟೆ ಕೊತ್ತಲುಮ ಬೆಟ್ಟ-ಗುಡ್ಡ ಕೆರೆ-ನದಿ ಮತ್ತು ಇನ್ನೀತರ ಪ್ರವಾಸಿ ಹಿನ್ನೆಲೆಯ ಸಂಪತ್ತಿನ ಮಹತ್ವವನ್ನು ಪ್ರತಿಯೊಬ್ಬರು ಅರಿಯಬೇಕು ಎಂದು ತಿಳಿಸಿದರು.

ಪ್ರವಾಸೋದ್ಯಮ ಇಲಾಖೆಯ ನಾನಾ ಯೋಜನೆಗಳನ್ನು ಜಿಲ್ಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಐತಿಹಾಸಿಕ ನಗರಿ ವಿಜಯಪುರದಲ್ಲಿ (swachhta pakhwada) ಅಚ್ಚುಕಟ್ಟಾಗಿ ಅನುಷ್ಠಾನಗೊಳಿಸಲಾಗುತ್ತಿದೆ ಎಂದು ತಿಳಿಸಿದರು.

More Read: ಶೌಚಾಲಯ ನಿರ್ಮಾಣಕ್ಕೆ ವಿರೋಧ. ಕಾರಣ…!

ಈ ಸಂದರ್ಭದಲ್ಲಿ ಇಗ್ನೋ ಸೆಂಟರನ ಪ್ರಾದೇಶಿಕ ನಿರ್ದೇಶಕರಾದ ಡಾ.ಎ.ವರದರಾಜನ್, ಭಾರತೀಯ ಪುರಾತತ್ವ ಇಲಾಖೆಯ ಸಹಾಯಕ ಸಂರಕ್ಷಣಾಧಿಕಾರಿಗಳಾದ ರಾಕೇಶ, ಆರ್‌ಕೆಎಮ್ ಶಿಕ್ಷಣ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಶಂಭುಲಿಂಗಯ್ಯ ಹಿರೇಮಠ, ಹೊಟೆಲ್ ಅಸೋಶಿಯೇಶನ್ ಪ್ರಾಂಶುಪಾಲರಾದ ಎನ್.ಆರ್.ರುದ್ರಗೌಡರ, ಹೇರಿಟೇಜ್ ಸಿಟಿಯ ಪೀಟರ್ ಅಕೆಕ್ಸಾಂಡರ್, ಮಹಾನಗರ ಪಾಲಿಕೆಯ ಅಮಿನ್ ಹುಲ್ಲೂರ, ಹೊಟೆಲ್ ಮಯೂರ ಆದಿಲ್‌ಶಾಹಿಯ ವ್ಯವಸ್ಥಾಪಕರಾದ ಸುನೀಲಕುಮಾರ, ಪ್ರವಾಸಿ ಅಧಿಕಾರಿಗಳಾದ ಅಂಬಾದಾಸ ಜೋಶಿ, ತುಕಾರಾಮ ಪವಾರ, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರಾದ ಅನಿಲಕುಮಾರ ಬಣಜಿಗೇರ ಹಾಗೂ ಸಿಬ್ಬಂದಿ ಉಪಸ್ಥಿತರಿದ್ದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!