- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಖಾಸಗಿ ಬ್ಯಾಂಕ್ ಉದ್ಯೋಗಿ ನೇಣಿಗೆ ಶರಣು

ಖಾಸಗಿ ಬ್ಯಾಂಕ್ ಉದ್ಯೋಗಿ ನೇಣಿಗೆ ಶರಣು

ಬಸವನಬಾಗೇವಾಡಿ: ಪಟ್ಟಣದ ಖಾಸಗಿ ಬ್ಯಾಂಕ್ ಉದ್ಯೋಗಿ ರಘು ಸುದೀರ್ (33) ಎಂಬ ಯುವಕ ಆತ್ಮಹತ್ಯೆಗೆ ಶರಣಾಗಿದ್ದಾನೆ.

https://gadinaadakranti.com/funeral-of-warrior-manjunatha-in-jattagi-village/

ಪಟ್ಟಣದ ಟಿಪ್ಪು ನಗರದಲ್ಲಿನ ಸ್ನೇಹಿತರೊಂದಿಗೆ ಬಾಡಿಗೆ ರೂಂ ಮಾಡಿಕೊಂಡಿದ್ದ ರಘು. ರೂಂನಲ್ಲಿಯೇ ನೇಣು ಹಾಕಿಕೊಂಡಿದ್ದಾನೆ. ಮೂಲತಃ ಯಾದಗಿರಿ ಜಿಲ್ಲೆ ಹುಣಸಗಿ ಪಟ್ಟಣದ ರಘು ಸುಧೀರ್. ಇಂದು ಶುಕ್ರವಾರ ಬೆಳಿಗ್ಗೆ ಬ್ಯಾಂಕ್ ಗೆ ಹಾಜರಾಗಿ, ಉಪಾಹಾರಕ್ಕೆಂದು ಹೊರ ಬಂದಿದ್ದ. ನಂತರ ಬ್ಯಾಂಕ್ ನತ್ತ ಮರಳಿ ಬಂದಿಲ್ಲ.  ಕೆಲ ಸಮಯದ ನಂತರ ರಘು ತಾಯಿ ಹಾಗೂ ಮನೆಯವರು ಕರೆ ಮಾಡಿದರೂ ಕರೆ ಸ್ವೀಕರಿಸಿದೇ ಇದ್ದರಿಂದ,  ರಘು ತಾಯಿ ಬ್ಯಾಂಕ್ ಗೆ ಕರೆ ಮಾಡಿ ವಿಚಾರಿಸಿದ್ದಾರೆ, ನಂತರ ಬ್ಯಾಂಕ್ ಸಿಬ್ಬಂದಿ ರಘು ವಾಸವಿದ್ದ ಬಾಡಿಗೆ ರೂಂಗೆ ತೆರಳಿ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ತಿಳಿದು ಬಂದಿದೆ.

ಸ್ಥಳಕ್ಕೆ ಬಸವನಬಾಗೇವಾಡಿ ಪೊಲೀಸ್ ಠಾಣೆಯ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!