- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಏಣಿ ಹಾಕಿ, ಬಸ್ ಟಾಪ್ ಮೇಲೆ ಏರಿದ ವಿದ್ಯಾರ್ಥಿಗಳು

ಏಣಿ ಹಾಕಿ, ಬಸ್ ಟಾಪ್ ಮೇಲೆ ಏರಿದ ವಿದ್ಯಾರ್ಥಿಗಳು

ವಿಜಯಪುರ: ಜಿಲ್ಲೆಯ ಮುದ್ದೇಬಿಹಾಳ ತಾಲೂಕಿನ (Students Suffering Bus in muddebihal) ಗುಂಡಕರ್ಜಗಿ (Gunddakarjagi Village) ಗ್ರಾಮದಲ್ಲಿ ಸರಿಯಾದ ಸಮಯಕ್ಕೆ ಸೂಕ್ತ ಬಸ್ ಸೌಲಭ್ಯವಿಲ್ಲದೆ (KSRTC) ಶಾಲಾ-ಕಾಲೇಜುಗಳಿಗೆ ತೆರಳಲು ವಿದ್ಯಾರ್ಥಿಗಳು ಪರದಾಡುವಂತಾಗಿದೆ.

ದಿನನಿತ್ಯ ಈ ಗ್ರಾಮದ ವಿದ್ಯಾರ್ಥಿಗಳು ಶಾಲಾ – ಕಾಲೇಜುಗಳಿಗೆ ಮುದ್ದೇಬಿಹಾಳ ಪಟ್ಟಣಕ್ಕೆ ತೆರಳುತ್ತಾರೆ, ಒಂದೇ ಬಸ್ ಇರುವುದರಿಂದ ವಿದ್ಯಾರ್ಥಿಗಳು ಅಪಾಯವನ್ನು ಲೆಕ್ಕಿಸದೆ ಸರ್ಕಾರಿ ಬಸ್ ಟಾಪ್ ಮೇಲೆ ಏರಿ ಅಪಾಯದ ಆತಂಕದಲ್ಲಿಯೇ ತೆರಳುತ್ತಿರುವುದು ಅನಿವಾರ್ಯವಾಗಿದೆ.

ಮುಂಜಾನೆ ಬರುವ ಒಂದೇ ಬಸ್ ನಲ್ಲಿ ನೂರಕ್ಕೂ ಅಧಿಕ ವಿದ್ಯಾರ್ಥಿಗಳು ಹಾಗೂ ಅವರೊಂದಿಗೆ ಸುತ್ತ-ಮುತ್ತಲಿನ ವಿವಿಧ ಹಳ್ಳಿಗಳ ಗ್ರಾಮಸ್ಥ ಜನತೆ ಇದೇ ಬಸ್ ನಲ್ಲಿಯೇ ತೆರಳಬೇಕು. ಆದ್ದರಿಂದ ಏಣಿಯನ್ನು ಬಳಸಿಕೊಂಡು ವಿದ್ಯಾರ್ಥಿಗಳು ಬಸ್ ಟಾಪ್ ಮೇಲೆ ಏರುತ್ತಿದ್ದಾರೆ. ಇಷ್ಟಾದರೂ ಕೂಡ ವಿದ್ಯಾರ್ಥಿಗಳ ಸಮಸ್ಯೆಗೆ (Students Suffering Bus in muddebihal) ಅಧಿಕಾರಿಗಳು ಸ್ಪಂದಿಸದಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಈ ಕುರಿತಾಗಿ ಸಾರಿಗೆ ಇಲಾಖೆ ಅಧಿಕಾರಿಗಳಿಗೆ ಹಲವಾರು ಬಾರಿ ಮನವಿ ಸಲ್ಲಿಸಿದರೂ ಕೂಡ ಯಾವುದೇ ಪ್ರಯೋಜನವಾಗಿಲ್ಲ, ಏನಾದರೂ ಅನಾಹುತಗಳಾದರೆ ಇದಕ್ಕೆ  ಸಾರಿಗೆ ಇಲಾಖೆಯ ಅಧಿಕಾರಿಗಳೇ ಹೊಣೆ ಎಂದು ಗ್ರಾಮಸ್ಥರು ಎಚ್ಚರಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!