- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಹಡಪದ ಸಮಾಜ ಅಭಿವೃದ್ಧಿಗಾಗಿ ಶ್ರಮಿಸುವೆ. ರಾಜ್ಯಾಧ್ಯಕ್ಷ ಸಿದ್ಧಪ್ಪ

ಹಡಪದ ಸಮಾಜ ಅಭಿವೃದ್ಧಿಗಾಗಿ ಶ್ರಮಿಸುವೆ. ರಾಜ್ಯಾಧ್ಯಕ್ಷ ಸಿದ್ಧಪ್ಪ

ಮುದ್ದೇಬಿಹಾಳ: ಸಮಾಜದ ಪ್ರತಿಯೊಂದು ಮಗುವೂ ಕೂಡಾ ಶಿಕ್ಷಣದಿಂದ ವಂಚಿತರಾಗಬಾರದು ಅವರಿಗೆ ಉನ್ನತ ಶಿಕ್ಷಣದಲ್ಲಿ ಮುಂದುವರಿಯಲು ಸರಕಾರದ ಸವಲತ್ತುಗಳನ್ನು ತಂದುಕೊಡಲು ಹಾಗೂ ಸಮಾಜದ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುವುದಾಗಿ ಅಖಿಲ ಕರ್ನಾಟಕ ಹಡಪದ ಅಪ್ಪಣ್ಣ ಸಮಾಜ ಸೇವಾ ಸಂಘದ ರಾಜ್ಯಾಧ್ಯಕ್ಷ ಸಿದ್ಧಪ್ಪ ಹಡಪದ ಹೇಳಿದರು.

ತಾಲೂಕಿನ ತಂಗಡಗಿ ಗ್ರಾಮದಲ್ಲಿನ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠದಲ್ಲಿ ಲಿಂ.ಬಸವಪ್ರಿಯ ಹಡಪದ ಅಪ್ಪಣ್ಣ ನವರ ಪುಣ್ಯಸ್ಮರಣೆ ಕಾರ್ಯಕ್ರಮ ಹಾಗೂ ಅಡ್ಡಪಲ್ಲಕ್ಕಿಯಲ್ಲಿ ಶಿವಶರಣ ಹಡಪದ ಅಪ್ಪಣ್ಣನವರ ಹಾಗೂ ಶಿವಶರಣೆ ಹಡಪದ ಲಿಂಗಮ್ಮನವರ ವಚನಕಟ್ಟು ಮೆರವಣಿಗೆ ನಿಮಿತ್ತ ನಡೆದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದ ಅವರು, ಪ್ರತಿ ಗ್ರಾಮ, ನಗರ, ಪಟ್ಟಣ ಪಂಚಾಯತಿ ವ್ಯಾಪ್ತಿಯಲ್ಲಿ ಕ್ಷೌರಿಕ ಕುಟೀರಗಳನ್ನು ನಿರ್ಮಿಸಿ ಕ್ಷೌರಿಕ ಕುಟುಂಬಗಳು ಆರ್ಥಿಕ, ಸಾಮಾಜಿಕವಾಗಿ ಅಭಿವೃದ್ಧಿ ಹೊಂದಲು, ಸಮಾಜದ ಜಾತಿ ನ್ಯೂನ್ಯತೆಯನ್ನು ಸರಿಪಡಿಸಿ ಎಲ್ಲರಿಗೂ ಒಂದೇ ಜಾತಿ ಹಾಗೂ ಪ್ರತ್ಯೇಕ ಅಭಿವೃದ್ಧಿ ನಿಗಮ ರಚಿಸುವ ಜೊತೆಗೆ ಸಮಾಜದ ವ್ಯಕ್ತಿಗಳಿಗೆ ಕಡ್ಡಾಯವಾಗಿ ನಿಗಮದಲ್ಲಿ ಸ್ಥಾನ ದೊರೆಯುವಂತೆ ಹಾಗೂ ಗ್ರಾಮ ಹೋಬಳಿ, ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯಾದ್ಯಂತ ಇತರ ಸಮಾಜಗಳಿಗೆ ಮಾದರಿಯಾಗುವಂತೆ ಸಮಾಜವನ್ನು ಸಂಘಟಿಸಿ ಸಧೃಡಗೊಳಿಸುವುದಾಗಿ ಹೇಳಿದರು.

ಈ ಸಂದರ್ಭದಲ್ಲಿ ತಂಗಡಗಿ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠದ ಪೀಠಾಧಿಪತಿ ಅನ್ನದಾನಿ ಭಾರತಿ ಅಪ್ಪಣ್ಣ ಮಹಾಸ್ವಾಮೀಜಿ ಮಾತನಾಡಿ ಸಮಾಜದ ಓರೆಕೋರಿ ತಿದ್ದಿವ ನಿಟ್ಟಿನಲ್ಲಿ ಕಾರ್ಯನಿರ್ವಹಿಸಬೇಕು, ಹಡಪದ ಸಮಾಜ ಇನ್ನೂ ಸಂಪೂರ್ಣವಾಗಿ 2ಎ ಮೀಸಲಾತಿ ಪಡೆದುಕೊಂಡಿಲ್ಲ ಈ ನಿಟ್ಟಿನಲ್ಲಿ ನಾವೆಲ್ಲರೂ ಜಾಗೃತರಾಗಿ ಹೋರಾಟ ಮಾಡುವುದರೊಂದಿಗೆ ಸಮಾಜದ ಏಳಿಗಾಗಿ ಶ್ರಮಿಸಬೇಕೆಂದು ಹೇಳಿದರು.

 ಈ ಸಂದರ್ಭದಲ್ಲಿ ರಾಜ್ಯ ಉಪಾಧ್ಯಕ್ಷ ಸಂತೋಷ ಹಡಪದ, ಕಾರ್ಯಾಧ್ಯಕ್ಷ ನಾಗರಾಜ ಸರ್ಜಾಪುರ ಮಾತನಾಡಿ ಬರುವ ಜೂ.10ರಿಂದ ಹಾವೇರಿ ಜಿಲ್ಲೆಯ ಇಚ್ಚಂಗಿ ಗ್ರಾಮದಿಂದ ಅಡ್ಡಪಲ್ಲಕ್ಕಿಯಲ್ಲಿ ಹಡಪದ ಅಪ್ಪಣ್ಣನವರ ಹಾಗೂ ಲಿಂಗಮ್ಮನವರ ವಚನಕಟ್ಟು ಮೆರವಣಿಗೆ ಹಾವೇರಿ ಮಾರ್ಗವಾಗಿ ವಿಜಯನಗರ, ಬಳ್ಳಾರಿ, ಗದಗ, ಬಾಗಲಕೋಟಿ, ವಿಜಯಪುರ ಜಿಲ್ಲೆ ಸೇರಿ 6ಜಿಲ್ಲೆಗಳಲ್ಲಿ ವಚನಕಟ್ಟು ಮೆರವಣಿಗೆ ವಾದ್ಯವೈಭವಗಳೊಂದಿಗೆ ಜೂ.21ರಂದು ಸುಕ್ಷೇತ್ರ ತಂಗಡಗಿಯ ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠಕ್ಕೆ ಆಗಮಿಸಲಿದ್ದು ಸಮಾಜದ ಬಂಧು ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೋಳ್ಳಬೇಕೆಂದು ಹೇಳಿದರು.

ಈ ಸಂದರ್ಭದಲ್ಲಿ ರಾಜ್ಯ ಪ್ರ.ಕಾರ್ಯದರ್ಶಿ ಚಿದಾನಂದ ಬಸರಕೋಡ, ಕಾರ್ಯಾಧ್ಯಕ್ಷ ದೇವು ಮುಂಡರಗಿ, ಈರಣ್ಣ ಹಡಪದ, ಬಸವರಾಜ ಹಡಪದ ರಾಜ್ಯ ಕೋಶಾಧ್ಯಕ್ಷ ಮಂಜು ಬೇವೂರ ಸೇರಿದಂತೆ ಹಲವು ಜಿಲ್ಲೆಗಳ ಜಿಲ್ಲಾಧ್ಯಕ್ಷರು, ರಾಜ್ಯ ಪದಾಧಿಕಾರಿಗಳು, ಸಮನ್ವಯ ಸಮಿತಿ ಪದಾಧಿಕಾರಿಗಳು, ತಂಗಡಗಿ ಶ್ರೀಮಠದ ಪದಾಧಿಕಾರಿಗಳು ಉಪಸ್ಥಿತರಿದ್ದರು. ಸಿ.ಎಫ್. ನಾವಿ ಸ್ವಾಗತಿಸಿದರು, ಹಡಪದ ಅಪ್ಪಣ್ಣ ಮಹಾಸಂಸ್ಥಾನ ಮಠದ ಟ್ರಸ್ಟ ಕಾರ್ಯದರ್ಶಿ ಹಣಮಂತ್ರಾಯ ಗುಡದಿನ್ನಿ ನಿರೂಪಿಸಿ, ವಂದಿಸಿದರು.

ಈ ಸಂದರ್ಭದಲ್ಲಿ ಶ್ರೀಮಠದಲ್ಲಿ ರಾಜ್ಯ ಹಾಗೂ ಜಿಲ್ಲೆಯ ವಿವಿಧ ಪದಾಧಿಕಾರಿಗಳನ್ನು ಶ್ರೀಮಠದ ಶ್ರೀಗಳು ಸನ್ಮಾನಿಸಿ ಗೌರವಿಸಿದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!