- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸಿದ ರಾಜ್ಯ ಕರ್ನಾಟಕ. ಶಾಸಕ ಶಿವಾನಂದ ಪಾಟೀಲ

ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸಿದ ರಾಜ್ಯ ಕರ್ನಾಟಕ. ಶಾಸಕ ಶಿವಾನಂದ ಪಾಟೀಲ

ಬಸವನಬಾಗೇವಾಡಿ: ಇಡೀ ದೇಶದಲ್ಲಿ ರೈತರಿಗೆ ಶೂನ್ಯ ಬಡ್ಡಿ ದರದಲ್ಲಿ ಸಾಲ ಒದಗಿಸಿದ ರಾಜ್ಯ ಯಾವುದಾದರೂ ಇದ್ದರೆ ಅದು ಕರ್ನಾಟಕ ಎಂದು ವಿಡಿಸಿಸಿ ಬ್ಯಾಂಕ ಅಧ್ಯಕ್ಷ ಹಾಗೂ ಶಾಸಕ ಶಿವಾನಂದ ಪಾಟೀಲ ಅಭಿಪ್ರಾಯಪಟ್ಟರು.

 ತಾಲೂಕಿನ ಮುತ್ತಗಿ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಶತಮಾನೋತ್ಸವದ ಸವಿ ನೆನಪಿಗಾಗಿ ಸಂಘದ ನೂತನ ಕಟ್ಟಡವನ್ನು ಉದ್ಘಾಟಿಸಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಮುತ್ತಗಿಯ ಕೃಷಿ ಪತ್ತಿನ ಸಹಕಾರಿ ಸಂಘ ಸೇರಿ 12 ಸಹಕಾರಿ ಸಂಘಗಳು ಸಧೃಢವಾಗಿ ಬಾಳಿ ಬೆಳಗಿ ಶತಮಾನೋತ್ಸವ ಕಂಡಿವೆ ಇವುಗಳ ಜೊತಗೆ ವಿಡಿಸಿಸಿ ಬ್ಯಾಂಕ್ ಕೂಡಾ ಶತಮಾನೋತ್ಸವ ಕಾಣುತ್ತಿದೆ. ಪಿಕೆಪಿಎಸ್ ಬ್ಯಾಂಕುಗಳಲ್ಲಿ ಆರ್ಥಿಕವಾಗಿ ಸಧೃಢ ಇದ್ದವರು ಠೇವಣಿಗಳನ್ನು ಇಡುವುದರ ಮೂಲಕ ಸಂಘಗಳ ಅಭಿವೃದ್ಧಿಗೆ ಸಹಕಾರ ನೀಡಬೇಕು, ರೈತರು ವೈಜ್ಞಾನಿಕವಾಗಿ ಬೆಳೆಗಳನ್ನು ಬೆಳದು ಆರ್ಥಿಕವಾಗಿ ಮುಂದಾಗಬೇಕು, ಹೆಣ್ಣುಮಕ್ಕಳು ಕೃಷಿ ಕಾರ್ಯದಲ್ಲಿ ಬಹಳಷ್ಟು ಶ್ರಮವಿದೆ, ಹಾಲು ಉತ್ಪಾದನೆಯಲ್ಲಿ ಮುಂದೆ ಬಂದಲ್ಲಿ ಸರಕಾರದ ಸವಲತ್ತು ಪಡೆಯಲು ಸಾಧ್ಯ, ಹೆಚ್ಚು ಭೂಮಿ ಹೊಂದಿರುವರು ಒಂದೇ ಬೆಳೆಗೆ ಆದ್ಯತೆ ನೀಡದೇ ಬೇರೆ ಬೇರೆ ಬೆಳೆದು ಆರ್ಥಿಕವಾಗಿ ಮುಂದಾಗಬೇಕೆAದು ಹೇಳಿದರು.

ವಿಜಯಪುರದ ವೀರ. ಮಹಾನ್ ದೇಶಭಕ್ತನ ರೋಚಕ ಕಥೆ

 ಈ ಸಂದರ್ಭದಲ್ಲಿ ರಾಜ್ಯ ಸಹಕಾರ ಮಹಾಮಂಡಳ ನಿರ್ದೇಶಕ ಈರಣ್ಣ ಪಟ್ಟಣಶೆಟ್ಟಿ, ಡಿಸಿಸಿ ಬ್ಯಾಂಕ ನಿರ್ದೇಶಕ ಶೇಖರ ದಳವಾಯಿ, ನಂದಿ ಸಕ್ಕರಿ ಪ್ಯಾಕ್ಟರಿ ಅಧ್ಯಕ್ಷ ಶಶಿಕಾಂತ ಪಾಟೀಲ, ಸಹಕಾರಿ ಸಂಘದ ಅಧ್ಯಕ್ಷ ರಮೇಶ ಸೂಳಿಭಾವಿ(ಸಾಹುಕಾರ),ಬಾಗೇವಾಡಿ ಹಿರೇಮಠದ ಶಿವಪ್ರಕಾಶ ಶಿವಾಚಾರ್ಯ ಸ್ವಾಮೀಜಿ, ಮನಗೂಳಿ ಅಭಿನವ ಸಂಗನಬಸವಶಿವಾಚಾರ್ಯ ಸ್ವಾಮೀಜಿ, ಮುತ್ತಗಿ ವೀರ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು.

 ಸಹಕಾರಿ ಸಂಘಗಳ ತಾಲೂಕಾ ಅಭಿವೃದ್ಧಿ ಅಧಿಕಾರಿ ಶ್ರೀಶೈಲ ಹಂಗರಗಿ, ಸಂಘದ ಉಪಾಧ್ಯಕ್ಷ ಶಿವಶಂಕರಗೌಡ ಬಿರಾದಾರ, ಮಲ್ಲನಗೌಡ ರಾಯಗೊಂಡ ಸೇರಿದಂತೆ ಇತರರು ಇದ್ದರು, ಟಿ.ಎ.ಪಿ.ಎಮ್.ಎಸ್ ಅಧ್ಯಕ್ಷ ಪ್ರೇಮಗೌಡ ಮ್ಯಾಗೇರಿ ಸ್ವಾಗತಿಸಿದರು, ಶಿಕ್ಷಕ ಆರ್.ಬಿ.ಬ್ಯಾಕೋಡ ನಿರೂಪಿಸಿ, ವಂದಿಸಿದರು.

ಇದೇ ಸಂದರ್ಭದಲ್ಲಿ ಬ್ಯಾಂಕಿನ ಅಧ್ಯಕ್ಷ ನಿರ್ದೇಶಕರು ಸೇರಿ ಶಾಸಕ ಶಿವಾನಂದ ಪಾಟೀಲ ಅವರಿಗೆ ಬೆಳ್ಳಿ ಖಡ್ಗ ನೀಡಿ ಸನ್ಮಾನಿಸಿದರು. ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯಿಂದ ಕೊರೋನಾ ನಿಯಂತ್ರಣಕ್ಕಾಗಿ ಮೂರನೇ ಬೂಸ್ಟರ್ ಡೋಸ್‌ಗೆ ಚಾಲನೆ ನೀಡಲಾಯಿತು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!