- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯವಿಜಯಪುರದಲ್ಲಿ ಪ್ರಪ್ರಥಮ ಬಾರಿ ಜರುಗಲಿದೆ ಪತ್ರಕರ್ತರ ಸಮ್ಮೇಳನ. ನಾಳೆ ಲಾಂಚನ ಬಿಡುಗಡೆ

ವಿಜಯಪುರದಲ್ಲಿ ಪ್ರಪ್ರಥಮ ಬಾರಿ ಜರುಗಲಿದೆ ಪತ್ರಕರ್ತರ ಸಮ್ಮೇಳನ. ನಾಳೆ ಲಾಂಚನ ಬಿಡುಗಡೆ

ವಿಜಯಪುರ: ಜಿಲ್ಲೆಯಲ್ಲಿ (Vijayapura) ಪ್ರಪ್ರಥಮ ಬಾರಿಗೆ ರಾಜ್ಯ ಮಟ್ಟದ ಪತ್ರಕರ್ತರ ಸಮ್ಮೇಳನ (State Conference of Journalists) ನಡೆಸಲು ನಿರ್ಧರಿಸಿದ್ದು, ಜಿಲ್ಲೆಯ ಪತ್ರಕರ್ತರ ಹುಮ್ಮಸ್ಸು ಮತ್ತಷ್ಟು ಹೆಚ್ಚಿದಂತಾಗಿದೆ.

ಸಂತ, ಶರಣರ ನಾಡು, ಐತಿಹಾಸಿಕತೆಯಲ್ಲಿ ವಿಶ್ವ ವಿಖ್ಯಾತಿ ಪಡೆದಿರುವ ನಮ್ಮ ವಿಜಯಪುರದ, ಸಾಂಸ್ಕೃತಿಕ ಸೊಗಡನ್ನು ಒಳಗೊಂಡಂತೆ ರಾಜ್ಯ ಪತ್ರಕರ್ತರ ಸಮ್ಮೇಳನದ ಲಾಂಛನ (Logo) ಬಿಡುಗಡೆಗೆ ಸಿದ್ಧವಾಗಿದೆ.

MORE READ: ಮೈಸೂರಗೇನು ಕಮ್ಮಿ ಇಲ್ಲ ನಮ್ಮ ದಸರಾ ಉತ್ಸವ

ನವೆಂಬರ್ ಅಂತ್ಯದಲ್ಲಿ ಸಮ್ಮೇಳನ ನಡೆಸಲು ಉದ್ದೇಶಿಸಿದ್ದು, ಸಮ್ಮೇಳನಕ್ಕೆ ಸಕಲ ಸಿದ್ಧತೆ ಕೈಗೊಳ್ಳಲಾಗುತ್ತಿದೆ.

ಲಾಂಚನ ಬಿಡುಗಡೆ: ಸೆ.30 ರಂದು, ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಸ್ವಾಮೀಜಿ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ, ವಿಜಯಪುರ ನಗರದ ಎಸ್- ಹೈಪರ್ ಮಾರ್ಟ್ ಬಳಿ ನೂತನವಾಗಿ ನಿರ್ಮಿಸಿರುವ, ಜ್ಞಾನಯೋಗಿ ಶ್ರೀ ಸಿದ್ದೇಶ್ವರ ಸೂಪರ್ ಸ್ಪೇಷಾಲಿಟಿ ಆಸ್ಪತ್ರೆ ಲೋಕಾರ್ಫಣೆ ಕಾರ್ಯಕ್ರಮದಲ್ಲಿ (State Conference of Journalists) ಲಾಂಚನ ಬಿಡುಗಡೆಗೊಳಿಸಲಾಗುವುದು ಎಂದು ಕಾ.ನಿ.ಪ. ಸಂಘದ ಜಿಲ್ಲಾಧ್ಯಕ್ಷ ಸಂಗಮೇಶ ಚೂರಿ, ಪ್ರಧಾನ ಕಾರ್ಯದರ್ಶಿ ಮೋಹನ ಕುಲಕರ್ಣಿ ತಿಳಿಸಿದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!