- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಎಸ್ಎಸ್ಎಲ್ ಸಿ ಫಲಿತಾಂಶ. ವಿಜಯಪುರದ ಆರು ವಿದ್ಯಾರ್ಥಿಗಳು ಟಾಪರ್

ಎಸ್ಎಸ್ಎಲ್ ಸಿ ಫಲಿತಾಂಶ. ವಿಜಯಪುರದ ಆರು ವಿದ್ಯಾರ್ಥಿಗಳು ಟಾಪರ್

ವಿಜಯಪುರ: ಎಸ್ಎಸ್ಎಲ್ ಸಿ ಫಲಿತಾಂಶ ಪ್ರಕಟವಾಗಿದ್ದು, ಜಿಲ್ಲೆಯ ಆರು ವಿದ್ಯಾರ್ಥಿಗಳು 625ಕ್ಕೆ 625 ಅಂಕ ಪಡೆಯುವ ಮೂಲಕ ರಾಜ್ಯಕ್ಕೆ ಟಾಪರ್ ಆಗಿ ಸಾಧನೆಗೈದಿದ್ದಾರೆ.

ವಿಜಯಪುರ ತಾಲೂಕಿನ ಜುಮನಾಳ ಗ್ರಾಮದ ಸರ್ಕಾರಿ ಪ್ರೌಢ ಶಾಲೆಯ ಕನ್ನಡ ಮಾಧ್ಯಮದ ಅಮಿತ್ ಮಾದರ, ಬಬಲೇಶ್ವರ ತಾಲೂಕಿನ ಕಾರಜೋಳ ಗ್ರಾಮದ  ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಇಂಗ್ಲೀಷ್ ಮಾಧ್ಯಮದ  ಐಶ್ವರ್ಯ ಈರಣ್ಣ ಕನಸೆ, ಸಿಂದಗಿ ತಾಲೂಕಿನ ವಿಭೂತಿಹಾಳ ಗ್ರಾಮದ ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಯ ಸ್ವಾತಿ ಗೌಡಪ್ಪ ಮಲ್ಲೇದ, ವಿಜಯಪುರ ತಾಲೂಕಿನ ಇಟ್ಟಂಗಿಹಾಳ ಗ್ರಾಮದ ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆಯ ರಕ್ಷಿತಾ ಸುರೇಶ ಚಿನಿವಾರ,ತಾಳಿಕೋಟೆ ಪಟ್ಟಣದ  ಸರ್ವಜ್ಞ ವಿದ್ಯಾಪೀಠ ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆಯ ಶ್ರೇಯಾ  ದೇಸಾಯಿ  ಮುದ್ದೇಬಿಹಾಳ ತಾಲೂಕಿನ ನಾಗರಬೆಟ್ಟ ಗ್ರಾಮದ ಆಕ್ಸಫರ್ಡ್  ಇಂಗ್ಲಿಷ್ ಮಾಧ್ಯಮ ಪ್ರೌಢ ಶಾಲೆಯ ಯಲ್ಲಾಲಿಂಗ ಬಸಪ್ಪ ಸುಳಿಭಾವಿ ಸಾಧಧನೆಗೈದ ವಿದ್ಯಾರ್ಥಿಗಳು.

ಇವರ ಈ ಸಾಧನೆಗೆ ಜಿಲ್ಲೆಯ, ರಾಜಕೀಯ ಮುಖಂಡರು, ಅಧಿಕಾರಿಗಳು ಸೇರಿದಂತೆ ಶೈಕ್ಷಣಿಕ ಪ್ರೇಮಿಗಳು ಅಭಿನಂದನೆ ಸಲ್ಲಿಸಿಇದ್ದಾರೆ.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!