- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯ10 ಸಾವಿರ ಎಕರೆ ಜಮೀನುಗಳಿಗೆ ನೀರು. ಶಾಸಕ ಸೋಮನಗೌಡ ಸಾಸನೂರ ಭರವಸೆ

10 ಸಾವಿರ ಎಕರೆ ಜಮೀನುಗಳಿಗೆ ನೀರು. ಶಾಸಕ ಸೋಮನಗೌಡ ಸಾಸನೂರ ಭರವಸೆ

ಬಸವನಬಾಗೇವಾಡಿ: (Basavana Bagewadi) ಪೀರಾಪುರ-ಬೂದಿಹಾಳ ಏತನೀರಾವರಿ (Pirapur EtaNiravari Yojane) ಯೋಜನೆಗೆ ಮುಖ್ಯಮಂತ್ರಿಗಳು ಭರವಸೆ ನೀಡಿದಂತೆ ಜನೇವರಿ ತಿಂಗಳಲ್ಲಿ ಯೋಜನೆ ವ್ಯಾಪ್ತಿಯ 10 ಸಾವಿರ ಎಕರೆ ಜಮೀನುಗಳಿಗೆ ನೀರಾವರಿ ಕಲ್ಪಿಸಲಾಗುವದು ಎಂದು ಶಾಸಕ ಸೋಮನಗೌಡ ಪಾಟೀಲ (Somanagouda Patil Sasnur)  (ಸಾಸನೂರ) ಭರವಸೆ ನೀಡಿದರು.

ತಾಲೂಕಿನ ದೇವರಹಿಪ್ಪರಗಿ ಮತಕ್ಷೇತ್ರದ ವ್ಯಾಪ್ತಿಯ ನರಸಲಗಿ ಎಲ್.ಟಿ ಗ್ರಾಮದಲ್ಲಿ 500ಲಕ್ಷ ರೂಪಾಯಿಗಳ ವೆಚ್ಚದಲ್ಲಿ ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆ ಬೆಂಗಳೂರು ಇವರ ನಮ್ಮ ಗ್ರಾಮ ನಮ್ಮರಸ್ತೆಯ ಎಸ್‌ಸಿಪಿ, ಟಿಎಸ್‌ಪಿ 2021-2022ನೇ ಸಾಲಿನಲ್ಲಿ ನರಸಲಗಿ ತಾಂಡಾದಿಂದ ಬಸವನಬಾಗೇವಾಡಿ, ನಿಡಗುಂದಿ ಕೂಡುವ ರಸ್ತೆ ಸುಧಾರಣೆ ಕಾಮಗಾರಿಯ ಭೂಮಿ ಪೂಜಾ ಕಾರ್ಯಕ್ರಮ ನರೆವೇರಿಸಿ ಮಾತನಾಡಿದರು.

ವಿಜಯಪುರ 203ಕಿ.ಮಿ ಹಾಗೂ ಚಿಮ್ಮಲಗಿ 176ಕಿ.ಮಿ. ಮುಖ್ಯಕಾಲುವೆಗೆ ಉಪಕಾಲುವೆ ನಿರ್ಮಾಣಕ್ಕೆ 680ಕೋ, ರೂ,ಗಳು ಮಂಜೂರಿಗಾಗಿ ಪ್ರಕ್ರಿಯೆ ಪ್ರಗತಿಯಲ್ಲಿದ್ದು ಮಂಜೂರಾತಿ ದೊರೆತು ಯೋಜನೆ ಪೂರ್ಣಗೊಂಡಲ್ಲಿ ಜಿಲ್ಲೆಯ 1.25ಲಕ್ಷ ಏಕರೆ ಜಮೀನು ನೀರಾವರಿಗೆ ಒಳಪಡಲಿದೆ ಎಂದು ಹೇಳಿದರು.

ಮತಕ್ಷೇತ್ರದ ಜನತೆಯ ಆಶೀರ್ವಾದದಿಂದ ಶಾಸಕನಾಗಿ ಆಯ್ಕೆ ಮಾಡಿ ಜವಾಬ್ದಾರಿ ಹೆಚ್ಚಿಸಿದ್ದಿರಿ ನಾನು ಕ್ಷೇತ್ರದ ಜನತೆಯ ಜೀತದಾಳಾಗಿದ್ದೇನೆ ಜನರ ಇಚ್ಚಾನುಸಾರ ಕೆಲಸಮಾಡುತ್ತಿದ್ದೇನೆ ಹಿಂದೆಂದು ಕಾಣದಷ್ಟು ಅಭಿವೃದ್ಧಿ ಕಾಮಗಾರಿಗಳನ್ನು ಕ್ಷೇತ್ರದಲ್ಲಿ ಕೈಗೊಳ್ಳಲಾಗಿದೆ. ಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷಭೇದ ಮರೆತು ಶ್ರಮಿಸಬೇಕು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಹೆಚ್ಚಿನ ಒತ್ತು ನೀಡಬೇಕು. ಪ್ರತಿಯೊಬ್ಬರು ಸರಕಾರದ ಯೋಜನೆಗಳ ಸದುಪಯೋಗ ಪಡೆದುಕೊಂಡು ಸ್ವಾವಲಂಭಿಯಾಗಿ ಬದುಕು ಸಾಗಿಸಬೇಕೆಂದು Somanagouda Patil Sasnur ಹೇಳಿದರು.

ಗ್ರಾಮದ ಮುಖಂಡ ಶಾಂತಗೌಡ ಹೊಸಳ್ಳಿ ಮಾತನಾಡಿ ಕೋವಿಡ್ ಸಂದರ್ಭದಲ್ಲಿ ಯಾವುದನ್ನು ಲೆಕ್ಕಿಸದೆ ಪ್ರತಿ ಗ್ರಾಮಗಳಿಗೂ ತೆರಳಿ ಜನರೊಂದಿಗೆ ನಿಕಟ ಸಂಪರ್ಕ ಹೊಂದುವುದರ ಜೊತೆಗೆ ಅಭಿವೃದ್ಧಿ ಕಾರ್ಯಗಳಿಗೆ ಮುಂದಾಗಿರುವ ಶಾಸಕರ ನಡೆ ಶ್ಲಾಘನೀಯವಾಗಿದೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಮಾಜಿ ತಾಪಂ ಅಧ್ಯಕ್ಷ ಶ್ರೀಶೈಲಗೌಡ ಹೊಸಳ್ಳಿ ಮಾತನಾಡಿದರು. ಸಂಗಯ್ಯಸ್ವಾಮಿ ಹಿರೇಮಠ ಸಾನಿಧ್ಯವಹಿಸಿದ್ದರು.

ಗ್ರಾಪಂ ಉಪಾಧ್ಯಕ್ಷ ನಾಗೇಶ, ಗ್ರಾಪಂ ಸದಸ್ಯರಾದ ನಾಮದೇವ ರಾಠೋಡ, ಮಾಂತಪ್ಪ ಹಾಲಿಹಾಳ, ಮುಖಂಡರಾದ ಹರೀಶ ದೇವಜಿ, ಮುದಕಣ್ಣ ನಾಯನೇಗಲಿ, ಉತ್ತಪ್ಪ ಲಮಾಣಿ, ರತ್ನಪ್ಪ ರಾಠೋಡ, ಸೇವು ರಾಠೋಡ, ಕೀರು ರಾಠೋಡ, ಡಾ. ಬಸವರಾಜ ಸಗರನಾಳ, ಯಲಗೂರದಪ್ಪ ಓದಿ, ಎಇಇ ಪಾಂಡುರಂಗ ದೊಡಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ಸಂಗಮೇಶ ಪೂಜಾರಿ ಗುತ್ತಿಗೆದಾರ ರಮೇಶ ಕವಲಗಿ, ಗೋಪಾಲ ಕನಸೆ ಸೇರಿದಂತೆ ಇತರರು ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!