- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಬಿಜೆಪಿ ಅಭ್ಯರ್ಥಿಗಳ ಪರ ಶಾಸಕ ಸೋಮನಗೌಡ ಮತಯಾಚನೆ

ಬಿಜೆಪಿ ಅಭ್ಯರ್ಥಿಗಳ ಪರ ಶಾಸಕ ಸೋಮನಗೌಡ ಮತಯಾಚನೆ

ಬಸವನಬಾಗೇವಾಡಿ: ವಾಯುವ್ಯ ಪದವೀಧರ ಕ್ಷೇತ್ರದ (mlc election karnataka) ಅಭ್ಯರ್ಥಿ ಹಣಮಂತ ನಿರಾಣಿ ಹಾಗೂ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಅಭ್ಯರ್ಥಿ ಅರುಣ ಶಹಾಪೂರ ಅವರಿಗೆ ಮೊದಲ ಪ್ರಾಶಸ್ತ್ಯದ ನೀಡಿ ಅವರನ್ನು ಬಹುಮತದೊಂದಿಗೆ ಆರಿಸಿ ತರಬೇಕೆಂದು ದೇವರ ಹಿಪ್ಪರಗಿ ಮತಕ್ಷೇತ್ರದ ಶಾಸಕ ಸೋಮನಗೌಡ ಪಾಟೀಲ (ಸಾಸನೂರ) (somanagouda b patil) ಅವರು ತಾಲೂಕಿನ ವಿವಿದೆಡೆ ಮತಯಾಚನೆ (election campaign) ನಡೆಸಿದರು.

ಪಟ್ಟಣದ ಬಿಎಲ್‌ಡಿಇ ಸಂಸ್ಥೆಯ ಡಿಗ್ರಿ ಕಾಲೇಜ, ಸರಕಾರಿ ಬಸವೇಶ್ವರ ಪಿಯು ಕಾಲೇಜ, ಸರ್ಕಾರಿ ಪ್ರಥಮ ದರ್ಜೆ ಕಾಲೇಜ, ಅಕ್ಕನಾಗಮ್ಮ ಬಾಲಕೀಯರ ಪ್ರೌಢ ಶಾಲೆ, ಬಸವೇಶ್ವರ ಆಂಗ್ಲ ಮಾಧ್ಯಮ ಶಾಲೆ, ನಂದಿ ಶಾಲೆ, ಮಡಿವಾಳೇಶ್ವರ ಪ್ರೌಢ ಶಾಲೆ, ನೇತಾಜಿ ಶಾಲೆ, ಹುಣಶ್ಯಾಳ ಆರ್.ಎಂ.ಎಸ್.ಎ, ಆಲೂರ ಪ್ರೌಢ ಶಾಲೆ, ಹೂವಿನಹಿಪ್ಪರಗಿ ಎಂ.ಜಿ.ಕೋರಿ, ಆ್ಯಂಡ್ ಬಿ.ಜಿ.ಬ್ಯಾಕೋಡ ಶಾಲೆ, ಶಿವಯೊಗೀಶ್ವರ ಶಾಲೆಗಳಲ್ಲಿ ಮತಯಾಚಿಸಿದರು.

ನಂತರ ಮಾತನಾಡಿದ ಶಾಸಕರು (somanagouda b patil) ಅನುದಾನಿತ ಶಾಲಾ ಕಾಲೇಜುಗಳಲ್ಲಿ ಖಾಲಿ ಇರುವ ಹುದ್ದೆಗಳನ್ನು ಭರ್ತಿ ಮಾಡಲು ಅನುಮತಿ ದೊರಕಿಸಿ ವೇತನ ತಾರತಮ್ಯವನ್ನು ಸರಿಪಡಿಸಲು ಸಮಿತಿ ರಚಿಸಿ ಹೆಚ್ಚುವರಿ ವೇತನ ಬಡ್ತಿಯನ್ನು ದೊರಕಿಸುವ ಕಾರ್ಯ ಸೇರಿದಂತೆ ಶಿಕ್ಷಣ ಕ್ಷೇತ್ರದಲ್ಲಿ ಶಿಕ್ಷಕರ ಸಮಸ್ಯೆಗಳನ್ನು ಆಲಿಸಿ ಸದನದಲ್ಲಿ ಧ್ವನಿ ಎತ್ತುವ ಮೂಲಕ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಕಾರ್ಯನಿರ್ವಹಿಸಿದ ಅರುಣ ಶಹಾಪೂರ ಅವರಿಗೆ ಮೊದಲ ಪ್ರಾಶಸ್ತ್ಯದ ಮತ ನೀಡಬೇಕೆಂದು ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ನ್ಯಾವಾದಿಗಳಾದ ಮಲ್ಲಕಾರ್ಜುನ ದೇವರಮನಿ, ಗೋಪಾಲ ಚಿಂಚೋಳಿ, ಡಾ. ಯುವರಾಜ ಮಾದನಶೆಟ್ಟಿ ಮಾತನಾಡಿದರು.

ಸಿದ್ದು ಸಾಸನೂರ, ಎ.ಎಂ.ನರಸರೆಡ್ಡಿ, ಮಹಾಂತೇಶ ಮನಗೂಳಿ ಸೇರಿದಂತೆ ಇತರರು ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!