- Advertisement -Newspaper WordPress Theme
ಅಂಕಣಗಳುಕರುನಾಡ ರತ್ನಶ್ರಮಬಿಂದು ಸಾರಥಿ ದಿ. ಸಿದ್ದು ನ್ಯಾಮಗೌಡ

ಶ್ರಮಬಿಂದು ಸಾರಥಿ ದಿ. ಸಿದ್ದು ನ್ಯಾಮಗೌಡ

ಸರಳ, ಸಜ್ಜನಿಕೆ, ಸಾಮಾನ್ಯ ರಾಜಕಾರಣಕ್ಕೆ ಹೆಸರುವಾಸಿಯಾಗಿ, ಚಿಕ್ಕ ಪಡಸಲಗಿ ಬ್ಯಾರೆಜ್ ನಿರ್ಮಿಸುವುದರ ಮೂಲಕ ರೈತರ ಪಾಲಿನ ಹೀರೊ ಎನಿಸಿಕೊಂಡು ಇಂದು ನಮ್ಮ ನಿಮ್ಮೆಲ್ಲರನ್ನು ಅಗಲಿ ಜನಮಾನಸದೊಳಗೆ ಅಳಿಸಲಾಗದ ಹಚ್ಚೆಯಂತೆ  ಉಳಿದಿರುವ ನಾಯಕ ದಿ.ಸಿದ್ದು ನ್ಯಾಮಗೌಡರು (siddu nyamagouda).

ಅವರು ಕೇವಲ ಒಬ್ಬ ರಾಜಕಾರಣಿ ಮಾತ್ರ ಆಗಿರಲಿಲ್ಲ. ಅವರಲ್ಲೊಬ್ಬ ರೈತಮಿತ್ರ, ಸಹಕಾರಿ ತತ್ವ, ಶಿಕ್ಷಣ ಪ್ರೇಮಿ, ಯಶಸ್ವಿ ಉದ್ಯಮಿ, ಪರಿಸರ ಕಾಳಜಿಯ ವ್ಯಕ್ತಿತ್ವ ಮನೆ ಮಾಡಿತ್ತು. ವೀರಶೈವ ಲಿಂಗಾಯತ ಸಮಾಜದ ಗಾಣಿಗ ಒಳಪಂಗಡಕ್ಕೆ ಸೇರಿದವರಾಗಿದ್ದ ನ್ಯಾಮಗೌಡರು, ರಾಜಕೀಯವಾಗಿ ಸಮಾಜಕ್ಕೆ ದೊಡ್ಡ ಶಕ್ತಿ ತಂದುಕೊಟ್ಟಿದ್ದರು.

ಈ ಲೇಖನವನ್ನೂ ಓದಿ… ವಿಜಯಪುರದ ವೀರ. ಮಹಾನ್ ದೇಶಭಕ್ತನ ರೋಚಕ ಕಥೆ

ಅದು 80ರ ದಶಕದ ಕಾಲ, ರೈತರು ಬೆಳೆ ಬೆಳೆಯಲು ನೀರಿಲ್ಲದೆ ಕಂಗಾಲಾಗಿದ್ದ ಸಮಯ, ಆಗ ಕೃಷ್ಣಾ ತೀರದ ರೈತರ ನೀರಿನ ಬವಣೆ ನೀಗಿಸಲು, ಕೃಷ್ಣಾ ತೀರದ ರೈತರ ಹೋರಾಟ ಸಮೀತಿ ರಚಿಸಿ, ಅದರ ಮುಂದಾಳತ್ವ ವಹಿಸಿಕೊಂಡು ಸರ್ಕಾರಕ್ಕೆ ಸವಾಲೊಡ್ಡಿದ್ದರು ಸಿದ್ದು ನ್ಯಾಮಗೌಡರು (siddu nyamagouda) . ಇದರ ಪರಿಣಾಮವಾಗಿ ರೈತರು ಹಾಗೂ ತಮ್ಮ ವೈಯಕ್ತಿಕ ಶ್ರಮದಿಂದ ಕೃಷ್ಣಾ ನದಿಗೆ ಅಡ್ಡಲಾಗಿ ಚಿಕ್ಕಪಡಸಲಗಿ ಗ್ರಾಮದ ಬಳಿ ಶ್ರಮಬಿಂದುಸಾಗರ ಬ್ಯಾರೇಜ್ ನಿರ್ಮಾಣ ಮಾಡಿ, ರೈತ ನಾಯಕ, ಬ್ಯಾರೇಜ್ ಸಿದ್ದು ಎಂಬ ಖ್ಯಾತಿ ಪಡೆದಿದ್ದರು.

ನ್ಯಾಮಗೌಡರ ಈ ಅಭಿವೃದ್ಧಿ ಕಾರ್ಯ ಹಾಗೂ ಜನಪರ ಕಾಳಜಿಯನ್ನು ಮೆಚ್ಚಿ ಅಂದಿನ ಮುಖ್ಯಮಂತ್ರಿ ದಿವಂಗತ ಎಸ್. ಬಂಗಾರಪ್ಪ 1991 ರ ಲೋಕಸಭಾ ಚುನಾವಣೆಯಲ್ಲಿ ಚಾಣಾಕ್ಷ ರಾಜಕಾರಣಿ ರಾಮಕೃಷ್ಣ ಹೆಗಡೆ ವಿರುದ್ಧ ಸ್ಪರ್ಧಿಸಲು ಸೂಚಿಸಿದರು. ರೈತರ ಪರವಾಗಿ ಮಾಡಿದ್ದ ಹಲವು ಕಾರ್ಯಗಳು ನ್ಯಾಮಗೌಡ ಕೈಹಿಡಿದವು. ಆ ಚುನಾವಣೆಯಲ್ಲಿ ರಾಮಕೃಷ್ಣ ಹೆಗಡೆ ಅವರನ್ನು 22 ಸಾವಿರ ಮತಗಳ ಅಂತರದಿಂದ ಸೋಲಿಸಿದ ನಂತರ ಕೇಂದ್ರದ ಕಲ್ಲಿದ್ದಲು ಖಾತೆ ಒಲಿದು ಬಂದಿತು. ಅಂದಿನಿಂದ ಸಿದ್ದು ನ್ಯಾಮಗೌಡ ಹಂತಹಂತವಾಗಿ ರಾಜಕೀಯವಾಗಿ ಬಲಿಷ್ಟ ನಾಯಕರಾಗಿ ಬೆಳೆದರು.

ರಾಜಕಾರಣದಲ್ಲಿ ಮೌಲ್ಯಾಧಾರಿತ ರಾಜಕಾರಣದ ಬೀಜ ಬಿತ್ತಿದ್ದ ಮುತ್ಸದ್ದಿ, ಪ್ರಬುದ್ಧ, ಚಾಣಾಕ್ಷ ರಾಜಕಾರಣಿ, ಜನಾಕರ್ಷಣೆಯ ನಾಯಕ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿಯಾಗಿ ರಾಜ್ಯಭಾರ ಮಾಡುತ್ತಿದ್ದ ಕಾಲವದು. ಆ ಸಮಯದಲ್ಲಿ ಹೆಗೆಡೆ ಎಲ್ಲೆ ಚುನಾವಣೆಗೆ ನಿಂತರು ಗೆದ್ದೆ ಗೆಲ್ಲುತ್ತಾರೆ ಎಂಬುದು ವಾಡಿಕೆಯಾಗಿತ್ತು. ಅದಾಗಲೇ ಮುಖ್ಯಮಂತ್ರಿಯಾಗಿ ಅಧಿಕಾರ ನಡೆಸಿದ್ದ ಹೆಗೆಡೆ 1991ರ ಲೋಕಸಭೆ ಚುನಾವಣೆಯಲ್ಲಿ ಜನತಾದಳದಿಂದ ಬಾಗಲಕೋಟೆ ಕ್ಷೇತ್ರದಲ್ಲಿ ಅದೃಷ್ಠ ಪರೀಕ್ಷೆಗೆ ಇಳಿದಿದ್ದರು.

ಹೆಗಡೆ ಆಡಳಿತ, ಜನಪರ, ಜನಪ್ರಿಯ ಯೋಜನೆಗಳು ಅವರನ್ನು ಗೆಲ್ಲಿಸುತ್ತೆ ಅನ್ನೋದು ಎಲ್ಲರ ಅಚಲ ನಂಬಿಕೆಯಾಗಿತ್ತು. ಇದರ ಜೊತೆಗೆ ನಿಜಲಿಂಗಪ್ಪನವರಿಗೆ ಆಶ್ರಯ ನೀಡಿದ್ದ ಬಾಗಲಕೋಟೆ ತಮಗೂ ಕೈ ಹಿಡಿಯಬಹುದು ಎಂದು ಬಲವಾಗಿ ನಂಬಿದ್ದರು ರಾಮಕೃಷ್ಣ ಹೆಗಡೆ. ಆದರೆ ಆ ಚುನಾವಣೆ ಇಡೀ ದೇಶದ ರಾಜಕೀಯ ನಾಯಕರು ಬಾಗಲಕೋಟೆ ಕಡೆ ಮುಖಮಾಡುವಂತೆ ಮಾಡಿತು. ಇದಕ್ಕೆ ಕಾರಣ ಜಮಖಂಡಿ ಶಾಸಕರಾಗಿದ್ದ ದಿವಂಗತ ಸಿದ್ದು ನ್ಯಾಮಗೌಡ.

ಈ ಲೇಖನವನ್ನೂ ಓದಿ… ಸ್ವಾತಂತ್ರ್ಯ ಹೋರಾಟ: ಕ್ರಾಂತಿ ಕೇಸರಿ ಮತ್ತು ಹಂಡ ವಜೀರ ಸೈನಿಕರು

1991ರ ಲೋಕಸಭೆ ಚುನಾವಣೆಯಲ್ಲಿ ಜನತಾದಳ ಅಭ್ಯರ್ಥಿಯನ್ನು ಶತಾಯಗತಾಯ ಸೋಲಿಸಲು ಅಂದಿನ ಮುಖ್ಯಮಂತ್ರಿ ಬಂಗಾರಪ್ಪ ಪಣ ತೊಟ್ಟಿದ್ದರು. ಅದಕ್ಕಾಗಿ ಸೂಕ್ತ ಅಭ್ಯರ್ಥಿಯನ್ನು ಹುಡುಕುತ್ತಿದ್ದರು. ಇಂತಹ ಸಮಯದಲ್ಲಿ ರೈತರ ಜೊತೆ ಸೇರಿ ಬ್ಯಾರೇಜ್ ನಿರ್ಮಾಣ ಮಾಡಿ, ಬ್ಯಾರೇಜ್ ಹಿರೋ ಎನಿಸಿಕೊಂಡಿದ್ದ ಸಿದ್ದು ನ್ಯಾಮಗೌಡ ಬಂಗಾರಪ್ಪ ಕಣ್ಣಿಗೆ ಬಿದ್ದಿದ್ದೆ ತಡ, ಅವರನ್ನು ಹೆಗೆಡೆ ವಿರುದ್ಧ ಚುನಾವಣೆಗೆ ನಿಲ್ಲಿಸಿದರು.

ಮೂರು ಸಲ ಮುಖ್ಯಮಂತ್ರಿಯಾಗಿದ್ದ ಹೆಗಡೆ ವಿರುದ್ಧ ಅದೇ ಮೊದಲ ಸಲ ಚುನಾವಣೆಗೆ ನಿಂತಿದ್ದ ಸಿದ್ದು ನ್ಯಾಮಗೌಡ ಯಾವ ಲೆಕ್ಕಾ ಎಂದು ಜನರು ನಗಾಡುತ್ತಿದ್ದರು. ಆದರೆ ಚುನಾವಣೆ ಬಳಿಕ ಅದೇ ಲೆಕ್ಕಾಚಾರ ಉಲ್ಟಾ ಆಗಿತ್ತು. ರಾಮಕೃಷ್ಣ ಹೆಗಡೆ ವಿರುದ್ಧ ಸಿದ್ದು ನ್ಯಾಮಗೌಡ (siddu nyamagouda) 22 ಸಾವಿರ ಮತಗಳ ಅಂತರದಿಂದ ಗೆಲುವು ಸಾಧಿಸಿದ್ದರು.

ಬಾಗಲಕೋಟೆಯಲ್ಲಿ ಸೋಲು ಕಂಡ ರಾಮಕೃಷ್ಣ ಹೆಗಡೆ, ಇದಕ್ಕೆ ತಕ್ಕ ಉತ್ತರ ನೀಡಲು ಸಜ್ಜಾಗಿದ್ದರು. 1996ರಲ್ಲಿ ಹೆಗಡೆಯವರ ಲೋಕಶಕ್ತಿಯಿಂದ ಸ್ಪರ್ಧಿಸಿದ್ದ ಅಜಯ್ ಕುಮಾರ್‌ ಸರ್ ನಾಯಕ್‌ ಅವರನ್ನು ಸಿದ್ದು ನ್ಯಾಮಗೌಡ ವಿರುದ್ಧ ಭಾರಿ ಅಂತರದಿಂದ ಗೆಲ್ಲಿಸುವ ಮೂಲಕ ಹೆಗಡೆ ತಮ್ಮ ವಿರೋಧಿಗಳಿಗೆ ಪಾಠ ಕಲಿಸಿದ್ದರು.

ಇದಾದ ಬಳಿಕ ಹೆಗಡೆ ಹಾಗೂ ಸಿದ್ದು ನ್ಯಾಮಗೌಡ ನಡುವಿನ ಸಂಬಂಧ ಅಷ್ಟಕಷ್ಟೆ ಎನ್ನುವಂತಿತ್ತು. ಚುನಾವಣೆಗೂ ಮುನ್ನ ಸಿದ್ದು ನ್ಯಾಮಗೌಡ ನನ್ನ ವಿರುದ್ಧ ಬಹಳ ಸಣ್ಣವನ್ನು ಅನ್ನುತ್ತಿದ್ದ ರಾಮಕೃಷ್ಣ ಹೆಗಡೆ, ಮುಂದೆ ಅವರು ಕಲ್ಲಿದಲ್ಲು ಖಾತೆ ಸಚಿವರಾದಾಗ ಅವರ ಬಗ್ಗೆ ಅಪಹಾಸ್ಯ ಮಾಡುತ್ತಿದ್ದರೆಂತೆ. ಸಿದ್ದು ನ್ಯಾಮಗೌಡರಿಗೆ ಇಂಗ್ಲಿಷ್  ಹಿಂದಿ ಬರುವುದಿಲ್ಲ. ಅವನೇನು ಮಾತನಾಡುತ್ತಾನೆ ಎಂದು ಗೇಲಿ ಮಾಡುತ್ತಿದ್ದರಂತೆ.

ಈ ಲೇಖನವನ್ನೂ ಓದಿ… ಶಂಕರಾಚಾರ್ಯರು ಸ್ಥಾಪಿಸಿದ ಶ್ರೀ ಚಕ್ರವಿರುವ ಏಕೈಕ ದೇವಸ್ಥಾನ

ಚುನಾವಣೆಯಲ್ಲಿ ಸೋತರು ರೈತರ ನಡುವಿನ ತಮ್ಮ ಹೋರಾಟವನ್ನು ಕೈಬಿಡದ ಸಿದ್ದು ನ್ಯಾಮಗೌಡ ಕಬ್ಬು ಬೆಳೆಗಾರರಿಗಾಗಿ ಸಕ್ಕರೆ ಕಾರ್ಖಾನೆ ಆರಂಭಿಸಿದರು. ಕೃಷ್ಣಾ ತೀರದ ರೈತ ಸಂಘದ ಹೆಸರಿನಲ್ಲಿಯೇ ಷೇರು ಹಣ ಸಂಗ್ರಹಿಸಿ ಜಮಖಂಡಿ ಶುಗರ್ಸ್ ಆರಂಭಿಸಿದರು. 2003ರಲ್ಲಿ ಈ ಕಾರ್ಖಾನೆ ಆರಂಭಕ್ಕೆ ಅಂದಿನ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಬಂದಿದ್ದರು. ನಂತರದ ದಿನಗಳಲ್ಲಿ ವಿಜಯಪುರ ಜಿಲ್ಲೆ, ನಾದ ಬಿ.ಕೆ ಗ್ರಾಮದ ಬಳಿಯೂ ಜಮಖಂಡಿ ಶುಗರ್ಸ್‌ನ ಮತ್ತೊಂದು ಘಟಕ ಆರಂಭಿಸಿದರು.

ಆದರೆ ಈ ಕಾರ್ಖಾನೆ ಆರಂಭಿಸಲು ಸಿದ್ದು ನ್ಯಾಮಗೌಡ ಪಟ್ಟ ಕಷ್ಟ ಅಷ್ಟಿಷ್ಟಲ್ಲ. ತಮ್ಮ ಮನೆಯಲ್ಲಿದ್ದ ಪತ್ನಿಯ ಬಂಗಾರದ ಒಡೆವೆ ಅಡವಿಟ್ಟು ಸಾಲ ಸೋಲ ಮಾಡಿ ಆರಂಭಿಸಿದ್ದರು. ಆದರೆ ಅಂತಿಮವಾಗಿ ಸಿದ್ದು ನ್ಯಾಮಗೌಡ ಕೈಹಿಡಿದಿದ್ದು ಅಂದಿನ ಮುಖ್ಯಮಂತ್ರಿ ಜೆ,ಎಚ್ ಪಟೇಲ್ ಅವರು. ಸಿದ್ದು ನ್ಯಾಮಗೌಡ (siddu nyamagouda) ಕೈಗೊಂಡ ಕಾರ್ಯಗಳನ್ನು ಮೆಚ್ಚಿ ಮುಖ್ಯಮಂತ್ರಿಯಾಗಿದ್ದ ಪಟೇಲರು ಹತ್ತಾರು ಕೋಟಿ ರೂಪಾಯಿ ಹಣ ನೀಡಿ, ಈ ಭಾಗದ ರೈತರಿಗೆ ಬೆನ್ನೆಲುಬಾದರು.

ಈ ಬಗ್ಗೆ ಸಿದ್ದು ನ್ಯಾಮಗೌಡ ಹಲವಾರು ಸಲ ಆಪ್ತರ ಬಳಿ ಹೇಳಿಕೊಂಡಿದ್ದಾರೆ.  ಜೆ.ಎಚ್ ಪಟೇಲರು ಇಲದಿದ್ದರೆ ನಾನು ಬೀದಿಗೆ ಬರಬೇಕಾಗುತ್ತಿತ್ತು ಎಂದು ಅವರನ್ನು ನೆನೆಸಿಕೊಳ್ಳುತ್ತಿದ್ದರು. ಹೀಗೆ ರೈತರ ಬಾಳಿಗೆ ಬೆಳಕಾಗಿದ್ದ ಸಿದ್ದು ನ್ಯಾಮಗೌಡರು ಇಂದು ನಮ್ಮೆಲ್ಲರನ್ನು ಅಗಲಿದ್ದರೂ ಕೂಡಾ ಅವರು ಮಾಡಿರುವ ಕಾರ್ಯಗಳು ಅಜರಾಮರ. ಇಂದು.. ಮುಂದೆ.. ಎಂದೆಂದಿಗೂ…

ಗಡಿನಾಡ ಕ್ರಾಂತಿ ಟೀಮ್


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!