- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಸೇನಾ ದಂಡನಾಯಕ, ಪ್ರವಚನಕಾರರಿಗೆ ಶ್ರದ್ಧಾಂಜಲಿ

ಸೇನಾ ದಂಡನಾಯಕ, ಪ್ರವಚನಕಾರರಿಗೆ ಶ್ರದ್ಧಾಂಜಲಿ

ಬಸವನಬಾಗೇವಾಡಿ: ಸ್ಥಳೀಯ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಸಮ್ಮುಖದಲ್ಲಿ ಪಟ್ಟಣದ ಬಸವೇಶ್ವರ ವೃತ್ತ ಹಾಗೂ ಕಿತ್ತೂರ ರಾಣಿ ಚನ್ನಮ್ಮ ವೃತ್ತದಲ್ಲಿ ವಿವೇಕ ಬ್ರಿಗೇಡ್, ಮಾಜಿ ಯೋಧರ ಸಂಘ, ಪಂತಜಲಿ ಯೋಗ ಸಮಿತಿ ಹಾಗೂ ವಿವಿಧ ಸಂಘಟನೆಗಳ ನೇತೃತ್ವದಲ್ಲಿ ದೇಶದ ಮೂರು ಸೇನಾ ದಂಡನಾಯಕ ಮುಖ್ಯಸ್ಥ ಬಿಪಿನ್ ರಾವತ್ ಹಾಗೂ 13ಜನ ಸೈನಿಕರಿಗೆ ಹಾಗೂ ಹೃದಯಘಾತದಿಂದ ಲಿಂಗೈಕ್ಯರಾದ ಕರ್ನಾಟಕದ ಖ್ಯಾತ ಪ್ರವಚನಕಾರ ಶರಣ ಈಶ್ವರ ಮಂಟೂರ ಅವರ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಮೇಣದ ಬತ್ತಿ ಬೆಳಗಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಿದರು.

https://gadinaadakranti.com/surrender-to-a-private-bank-employee/

 ಈ ಸಂದರ್ಭದಲ್ಲಿ ವಿರಕ್ತಮಠದ ಸಿದ್ಧಲಿಂಗ ಸ್ವಾಮೀಜಿ ಮಾತನಾಡಿ ಈಶ್ವರ ಮಂಟೂರ ಶ್ರೀಗಳು ಅಪಾರ ಜ್ಞಾನುಳ್ಳವರಾಗಿದ್ದರು ಅಲ್ಲದೆ ಬಸವ ತತ್ವ ಪ್ರಚಾರಕರಾಗಿ, ಕವಿಯಾಗಿ, ಚಿಂತಕರಾಗಿ ಅನುಭವಿ ಪ್ರವಚನಕಾರರಾಗಿ ಸಾಹಿತಿಗಳಾಗಿ ಜನಪ್ರೀಯರಾಗಿದ್ದರು. ಮಂಟೂರ ಶ್ರೀಗಳನ್ನು ಕಳೆದುಕೊಂಡ ಆಧ್ಯಾತ್ಮಿಕ ಜಗತ್ತು ಬಡವಾಗಿದೆ ವಿಶ್ವಗುರು ಬಸವೇಶ್ವರರು ಅವರ ಕುಟುಂಬಕ್ಕೆ ದುಖಃವನ್ನು ಭರಿಸುವ ಶಕ್ತಿ ನೀಡಲಿ ಎಂದು ಹೇಳಿದರು.

ಬಸವ ತತ್ವ ಪರಿಪಾಲಕ ಡಾ. ಈಶ್ವರ ಮಂಟೂರ ಶ್ರೀ ಇನ್ನಿಲ್ಲ

 ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಶೋಕ ಹಾರಿವಾಳ, ಪಂತಜಲಿ ಯೋಗ ಸಮಿತಿ ಪ್ರಭಾರಿ ಕಾಶೀನಾಥ ಅವಟಿ, ಚುಟುಕು ಸಾಹಿತ್ಯ ಪರಿಷತ್ ತಾಲೂಕಾಧ್ಯಕ್ಷ ಪ್ರಭಾಕರ ಖೇಡದ, ಸಂಗಮೇಶ ಹುಜರತಿ, ಶಿವು ತೋಳನೂರ, ಬಸವರಾಜ ನಾಯ್ಕೋಡಿ, ಪ್ರವೀಣ ಪಾಟೀಲ, ಸುರೇಶ ಹೂಗಾರ, ಶರಣು ಮೊಂಕಾಶಿ ಮಾಜಿ ಸೈನಿಕರಾದ ಎಸ್.ಐ.ಬಿರಾದಾರ, ತಳವಾರ, ಶ್ರೀಕಾಂತ ಪಟ್ಟಣಶೆಟ್ಟಿ, ಸಂಗಮೇಶ ಜಾಲಗೇರಿ ಸೇರಿದಂತೆ ಇತರರು ಇದ್ದರು.

ವರದಿ: ನಾಗೇಶ ನಾಗೂರ


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!