- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಅಗ್ನಿಪಥ್, ಉದ್ಯೋಗ, ಪ್ರಧಾನಿ ಮೋದಿ ಕುರಿತಾಗಿ ಶಾಸಕ ಶಿವಾನಂದ ಪಾಟೀಲರ ಮಾತುಗಳು

ಅಗ್ನಿಪಥ್, ಉದ್ಯೋಗ, ಪ್ರಧಾನಿ ಮೋದಿ ಕುರಿತಾಗಿ ಶಾಸಕ ಶಿವಾನಂದ ಪಾಟೀಲರ ಮಾತುಗಳು

ಪ್ರಧಾನಿ ನರೇಂದ್ರ ಮೋದಿಯವರು (PM Narendra Modi) ಜಾರಿಗೆ ತಂದಿರುವ ಅಗ್ನಿಪಥ್ ಯೋಜನೆ (Agneepath) ಆತುರತೆಯ ನಿರ್ಧಾರವಾಗಿದೆ, ಯುವಕರಿಗೆ ಉದ್ಯೋಗ ಸಮಸ್ಯೆ ಹೆಚ್ಚುತ್ತಿದೆ. ಸಮಸ್ಯೆಗಳಿಗೆ ಸ್ಪಂಧಿಸುವ ಕಾರ್ಯ ಪ್ರಧಾನಿಗಳದ್ದಾಗಲಿ ಎಂದು ಬಸವನಬಾಗೇವಾಡಿ ಮತಕ್ಷೇತ್ರದ ಶಾಸಕ ಶಿವಾನಂದ ಪಾಟೀಲ (Shivanand Patil) ಹೇಳಿದ್ದಾರೆ.

ವಿಜಯಪುರ: ರಾಜ್ಯದಲ್ಲಿ ಪ್ರಕೃತಿ ವಿಕೋಪ ನಡೆದ ಸಂದರ್ಭದಲ್ಲಿ ಬಾರದ ಪ್ರಧಾನಿ ಈಗ ಬರುತ್ತಿದ್ದಾರೆ, ಪ್ರವಾಹ ಉಂಟಾದ ಸಂದರ್ಭದಲ್ಲಿ ಜನರೆಲ್ಲ ಬೀದಿಗೆ ಬಿದ್ದಿದ್ದರು ಆಗ ನಮ್ಮ ರಾಜ್ಯ ನೆನಪಿರಲಿಲ್ಲ ಎಂದು ಪರೋಕ್ಷವಾಗಿ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಶಾಸಕ ಶಿವಾನಂದ ಪಾಟೀಲ್ ವಾಗ್ದಾಳಿ ನಡೆಸಿದರು.

More Read: ಯೋಗ ಹೆಸರಲ್ಲಿ ಮೋದಿ ರಾಜಕೀಯ. ಮಾಜಿ ಸಿಎಂ ಸಿದ್ಧರಾಮಯ್ಯ

ನಗರದಲ್ಲಿ ಸೋಮವಾರ ಮಾತನಾಡಿದ ಅವರು, ಮೈಸೂರಿನಲ್ಲಿ ನಡೆಯುವ ಅಂತರಾಷ್ಟ್ರೀಯ ಯೋಗ  ದಿನಾಚರಣೆ ಕಾರ್ಯಕ್ರಮದಲ್ಲಿ ಭಾಗಿಯಾಗಲು ರಾಜ್ಯಕ್ಕೆ ಆಗಮಿಸಿರುವ  ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಕಾಂಗ್ರೆಸ್ ಶಾಸಕ ಶಿವಾನಂದ ಪಾಟೀಲ (Shivanand Patil), ಯೋಗ ದಿನಾಚರಣೆ ಮಾಡಲು ನಮ್ಮದೇನೂ ಅಭ್ಯಂತರವಿಲ್ಲ, ಯೋಗಾ ಡೇ ಸಾಂಕೇತಿಕವಾಗಿ ಮಾಡಿ. ಪ್ರಕೃತಿ ವಿಕೋಪ ಉಂಟಾದ ವೇಳೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರ ಅತ್ತ ಗಮನ ಕೊಡಬೇಕು ವಿನಃ, ಯೋಗ ನಿರಂತರವಾಗಿ ನಡೆಯುವ ಪ್ರಕ್ರಿಯೆ, ಯೋಗಕ್ಕಾಗಿಯೇ ದಿನವನ್ನು ಮಿಸಲಿಡಬಾರದು ಎಂದರು.

ಇದೇ ವೇಳೆ ಅಗ್ನಿಪಥ ವಿರುದ್ದ ಯುವಕರ ಆಕ್ರೋಶದ ಕುರಿತು ಅಭಿಪ್ರಾಯ ವ್ಯಕ್ತಪಡಿಸಿದ ಅವರು, ಅಗ್ನಿಪಥ ವಿಷಯದಲ್ಲಿ ಸ್ವಲ್ಪ ಆತುರತೆ ಆಗಿದೆ, ಕಳೆದ ಏಳೆಂಟು ವರ್ಷಗಳಿಂದ ಯುವಕರಿಗೆ ನಿರುದ್ಯೋಗ ಸಮಸ್ಯೆ ಉಂಟಾಗುತ್ತದೆ. 60 ಲಕ್ಷ ಉದ್ಯೋಗಗಳು ಕೇಂದ್ರ ಸರ್ಕಾರದಲ್ಲಿ ಖಾಲಿ ಇವೆ ಎಂದು  ಬಿಜೆಪಿ ಸಂಸದ ವರುಣ್ ಗಾಂಧಿ ಹೇಳಿದ್ದಾರೆ. ಈ ರೀತಿಯ ನಿರುದ್ಯೋಗ ಸಮಸ್ಯೆ ಉಲ್ಬಣಿಸಿದರೆ ಕಷ್ಟ ಅಗ್ನಿಪಥ ಉದ್ಯೋಗ ಭದ್ರತೆ ನೀಡಲ್ಲ ಎಂದು ಟೀಕಿಸಿದರು.

20 ರಿಂದ 25 ವರ್ಷವಾದರೂ ಸರ್ಕಾರಿ ಸೇವೆ ಮಾಡಲು ಅವಕಾಶ ನೀಡಿದರೆ ಅನುಕೂಲ. ಉದ್ಯೋಗ ಭದ್ರತೆಯ ವಿಚಾರದಿಂದ ಅಗ್ನಿಪಥಗೆ ಯುವಕರು ವಿರೋಧ ಮಾಡುತ್ತಿದ್ದಾರೆ. ಸರ್ಕಾರಿ ಉದ್ದಿಮೆಗಳನ್ನು ಖಾಸಗೀಕರಣ ಮಾಡುತ್ತಿರುವ ಕಾರಣ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.

More Read: ಕುರ್ಚಿ, ಬ್ಯಾನರ್ ಗಾಗಿ ಜಗಳ. ಕಾರ್ಯಕ್ರಮದಿಂದ ಹೊರನಡೆದ ಸಚಿವ ಸಿಸಿ ಪಾಟೀಲ

ಜನಸಂಖ್ಯೆ ಹೆಚ್ಚಳ ಕೂಡ ಇದರಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ ಯಾವುದೇ ಸರ್ಕಾರವಿರಲಿ ಸಾಲ ಪಡೆದು ಸರ್ಕಾರ ನಡೆಸುವುದು ಸಾಧನೆಯಲ್ಲ. ರಾಜ್ಯ ಸರ್ಕಾರ 5 ಲಕ್ಷ ಕೋಟಿ ಸಾಲ ಮಾಡಿದೆ. ಕೇಂದ್ರ ಸರ್ಕಾರ ಕೂಡ 50 ರಿಂದ 60 ಲಕ್ಷ ಕೋಟಿ ಸಾಲ ಮಾಡಿದೆ. ಇದರಿಂದ ಮುಂದಿನ ಭವಿಷ್ಯ ಕಗ್ಗತ್ತಿನಲ್ಲಿ ಸಾಗುತ್ತಿದೆ ಎಂದು  ಶಾಸಕ ಶಿವಾನಂದ ಪಾಟೀಲ್ ಹೇಳಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!