- Advertisement -Newspaper WordPress Theme
ಪ್ರಮುಖ ಸುದ್ದಿಗಳುಸ್ಥಳೀಯಯತ್ನಾಳ್ ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ಶಾಸಕ ಶಿವಾನಂದ ಪಾಟೀಲ ಓಪನ್ ಚಾಲೆಂಜ್

ಯತ್ನಾಳ್ ನನ್ನ ವಿರುದ್ಧ ಸ್ಪರ್ಧೆ ಮಾಡಲಿ. ಶಾಸಕ ಶಿವಾನಂದ ಪಾಟೀಲ ಓಪನ್ ಚಾಲೆಂಜ್

ವಿಜಯಪುರ: ವಿಜಯಪುರ ನಗರ ಕ್ಷೇತ್ರದಿಂದ ಸ್ಪರ್ಧಿಸಲು ಸಿದ್ಧ. (Shivanand Patil Challenge Basanagouda Patil Yatnal) ಬಿಜೆಪಿ, ಅಥವಾ ಕಾಂಗ್ರೆಸ್ ನಿಂದ ಸ್ಪರ್ಧೆಗೂ ಸಿದ್ಧ, ನಾನು ಗೆಲ್ತಿನೋ ಅವ್ರು ಗೆಲ್ಲುತ್ತಾರೆ ಜನ ತೀರ್ಮಾನ ಮಾಡಿದ್ಮೇಲೇ ಮಾತನಾಡೋದು ಒಳ್ಳೆಯದು ಎಂದು ಶಾಸಕ ಯತ್ನಾಳಗೆ (Basanagouda Patil Yatnal), ಶಿವಾನಂದ ಪಾಟೀಲ (Shivanand Patil) ಓಪನ್ ಚಾಲೆಂಜ್ (open challenge) ಹಾಕಿದರು.

ವಿಜಯಪುರದಲ್ಲಿ ಶಾಸಕ ಯತ್ನಾಳ್ ಹೇಳಿಕೆಗೆ ಪ್ರತಿಕ್ರಿಯಿಸಿದ ಶಾಸಕ ಶಿವಾನಂದ ಪಾಟೀಲ, ಈವರೆಗೆ ನಾನು ಅವರ ಉಸಾಬರಿ ಮಾಡಿಲ್ಲ, ಅವರು ಏನೆಲ್ಲಾ ಮಾತನಾಡಿದ್ರೂ ನಾನು ಪ್ರತಿಕ್ರಿಯೆ ಕೊಟ್ಟಿಲ್ಲ, ಪದೇ ಪದೇ ಆ ರೀತಿ ಮಾತನಾಡೋದು ಅವರ ಘನತೆ ತಕ್ಕುದಲ್ಲ, ನನ್ನ ಮೇಲೆ ಅಷ್ಟು ಆಕ್ರೋಶವಿದ್ರೆ, ವಿಜಯಪುರ ನಗರ ಕ್ಷೇತ್ರದಲ್ಲಿ ನಾನು ಪಕ್ಷೇತರವಾಗಿ ಸ್ಪರ್ಧಿಸ್ತೀನಿ, ಯತ್ನಾಳ್ ಪಕ್ಷೇತರರಾಗಿ ಸ್ಪರ್ಧಿಸಲಿ, ನಾನು ಗೆದ್ದರೆ ರಾಜಕೀಯವಾಗಿ ಮುಂದುವರೆಯುತ್ತೇನೆ ಅವರು ರಾಜಕೀಯ ಬಿಡಲಿ, ಅವರು ಗೆದ್ದರೆ ನಾನು ರಾಜಕೀಯ ಬಿಡ್ತೀನಿ, ಜನ ಯಾರನ್ನು ಮೆಚ್ಚುತ್ತಾರೆ ಅಂತ ಗೊತ್ತಾಗಲಿ ಎಂದು ಪಂಥಾಹ್ವಾನ ನೀಡಿದರು.

ಮಾತು ಮುಂದುವರಿಸಿದ ಶಿವಾನಂದ ಪಾಟೀಲ, ನಾನು ಬಿಜೆಪಿಗೆ ಹೋಗ್ಬೇಕು, ಕಾಂಗ್ರೆಸ್ ನಲ್ಲಿರಬೇಕು ಅಂತ ಎಂದೂ ಸೀಮಿತ ರಾಜಕಾರಣ ಮಾಡಿಲ್ಲ, ನನಗೆ ಕಾಂಗ್ರೆಸ್ ನಿಂದ ಲಾಭವಿರಬಹುದು, ನನ್ನಿಂದ ಕಾಂಗ್ರೆಸ್ ಗೆ ಲಾಭವಿರಬಹುದು. ಹಿಂದೆ ನಾನು ಬಿಜೆಪಿಯಲ್ಲಿದ್ದಾಗ ನನ್ನಿಂದ ಬಿಜೆಪಿಗೆ ಲಾಭ ಆಗಿತ್ತು, ಹಿಂದೆ ಯತ್ನಾಳ್ ಎಂಪಿ ಮಾಡುವಾಗ ನಾನೇ ಇದ್ದೇ ಎಂದರು.

ಬಿಜೆಪಿಗೆ ಅಪ್ರೋಚ್ ಮಾಡುವ ವಿಚಾರವಾಗಿ ಪ್ರತಿಕ್ರಿಯಿಸಿದ ಶಿವಾನಂದ ಪಾಟೀಲ, ನಾನು ಯಾರಿಗೂ ಅಪ್ರೋಚ್ ಆಗಿಲ್ಲ,ಅವ್ರೇ ನನ್ನ ಅಪ್ರೋಚ್ ಮಾಡಬಹುದು, ನನಗೆ ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಅಪ್ರೋಚ್ ಆಗಬಹುದು, ಅದ್ರಲ್ಲಿ ತಪ್ಪೇನಿದೆ, ಯತ್ನಾಳ್ ಕಾಂಗ್ರೆಸ್ ನಿಂದ, ದಳದಿಂದ ಗೆದ್ದು ಬರಲಿ ನೋಡೋಣ, ಬರೀ ಬಿಜೆಪಿ, ಹಿಂದುತ್ವದ ಹೆಸರಿನಲ್ಲಿ ಗೆದ್ದು ಬರಬೇಕಾ, ನಾನು ಅವರ ಬಾಯಿಗೆ ಹತ್ತಿಲ್ಲ, ಹತ್ತೋಕೆ ಕೊಡಬೇಡಿ ಎಂದು ಎಚ್ಚರಿಕೆ ನೀಡಿದರು.


LEAVE A REPLY

Please enter your comment!
Please enter your name here

More Content

- Advertisement -Newspaper WordPress Theme

ಜಿಲ್ಲಾ ಜರ್ನಿ

ಹೋರಾಟ ವೀರರು

- Advertisement -Newspaper WordPress Theme
error: Content is protected !!